ಮಹರ್ಷಿ ಸಿನಿಮಾದ ಕಥೆಯನ್ನು ನಿರ್ದೇಶಕ ಶ್ರೀವಾಸ್ ಅವರ ಡಿಕ್ಟೇಟರ್ ಸಿನಿಮಾದಿಂದ ಕದ್ದ ಕಥೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಬಹು ದಿನಗಳ ಹಿಂದೆಯೇ ಶ್ರೀವಾಸ್ ರವರು ಕಥೆಯೊಂದನ್ನು ಬರೆದಿಟ್ಟಿದ್ದರಂತೆ. ಆ ಕಥೆಯು ಇತ್ತೀಚಿಗೆ ರಿಲೀಸ್ ಆಗಿರುವ ಮಹೇಶ್ ಬಾಬು ರವರ ಮಹರ್ಷಿ ಸಿನಿಮಾವನ್ನು ಹೋಲುತ್ತಿದೆಯಂತೆ.
ಸಿನಿಮಾ ನೋಡಿ ಶಾಕ್ ಆದ ಶ್ರೀವಾಸ್ ನಿರ್ಮಾಪಕ ದಿಲ್ ರಾಜು ಅವರನ್ನು ಭೇಟಿಯಾಗಲು ನಿರ್ಧರಿಸಿದರು. ಆನಂತರ ದಿಲ್ ರಾಜು ಮತ್ತು ಶ್ರೀವಾಸ್ ಅನಧಿಕೃತ ಒಪ್ಪಂದಕ್ಕೆ ಒಪ್ಪಿಕೊಂಡು ಆ ತಕರಾರನ್ನು ಬಿಡುವಂತೆ ನಿರ್ಮಾಪಕರು ಶ್ರೀವಾಸ್ ಗೆ ಸೂಚಿಸಿದ್ದಾರೆ ಎನ್ನಲಾಗಿದೆ. ವಂಶಿ ಪೆಡಿಪಲ್ಲಿ ನಿರ್ದೇಶಿಸಿರುವ ಮಹರ್ಷಿ ಸಿನಿಮಾವು ಬಾಕ್ಸ್ ಆಫೀಸ್ ನಲ್ಲಿ ಭಾರಿ ಕಮಾಲು ಮಾಡುತ್ತಿದೆ. ಚಿತ್ರವೂ ಇತ್ತೀಚಿಗೆ ರಿಲೀಸ್ ಆಗಿ ಬಾಕ್ಸ್ ಆಫೀಸಿನಲ್ಲಿ ಸಕತ್ ಕಮಾಯಿ ಮಾಡುತ್ತಿದೆ.
No Comment! Be the first one.