ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕವೇ ಸಿಂಪಲ್ ಆದೊಂದು ಕಥೆ ಹೇಳಿದರೂ ಸ್ಟಾರ್ ಆಗಿ ಹೊರ ಹೊಮ್ಮಿರುವವರು ರಾಜ್ ಬಿ ಶೆಟ್ಟಿ. ನಟ, ನಿರ್ದೇಶಕ ಮತ್ತು ಸಂಭಾಷಣೆಕಾರರಾಗಿಯೂ ಗಮನ ಸೆಳೆದಿರೋ ರಾಜ್ ಶೆಟ್ಟಿ ಇದೀಗ ಸಂಪೂರ್ಣವಾಗಿ ನಟನೆಯತ್ತಲೇ ವಾಲಿದ್ದಾರೆ. ಅವರು ಒಂದಷ್ಟು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಅವುಗಳಲ್ಲಿ ಮಹಿರಾ ಚಿತ್ರ ಪ್ರಧಾನವಾದದ್ದು!
ರಾಜ್ ಬಿ ಶೆಟ್ಟಿ ಇದೀಗ ಈ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗಗ ಮಹಿರಾದ ಫಸ್ಟ್ ಲುಕ್ ಕೂಡಾ ಬಿಡುಗಡೆಗೊಂಡಿದೆ. ಅದರಲ್ಲಿ ರಾಜ್ ಶೆಟ್ಟಿ ರಿವಾಲ್ವರ್ ಹಿಡಿದು ಗುರಿಯಿಡೋ ಖಡಕ್ ಲುಕ್ಕಿನಲ್ಲಿ ಕಂಗೊಳಿಸಿದ್ದಾರೆ. ಈ ಚಿತ್ರವೀಗ ಸಾಮಾಜಿಕ ಜಾಲತಾಣಗಳ ತುಂಬಾ ಹರಿದಾಡುತ್ತಾ ರಾಜ್ ಶೆಟ್ಟಿಯ ಹೊಸಾ ಅವತಾರ ಎಲ್ಲರಲ್ಲಿಯೂ ಅಚ್ಚರಿ ಹುಟ್ಟಿಸಿದೆ.
ಮಹಿರಾ ಕ್ರೈಂ ಥ್ರಿಲ್ಲರ್ ಕಥಾನಕ ಹೊಂದಿರೋ ಚಿತ್ರ. ವಿವೇಕ್ ಕೊಡಪ್ಪ ನಿರ್ಮಾಣದ ಈ ಚಿತ್ರವನ್ನು ಮಹೇಶ್ ಗೌಡ ನಿರ್ದೇಶನ ಮಾಡಿದ್ದಾರೆ. ಒಂದು ಮೊಟ್ಟೆಯ ಕಥೆ ಚಿತ್ರದಲ್ಲಿ ಬೋಳುತಲೆಯ ಹಳವಂಡಗಳನ್ನು ಮನೋಜ್ಞವಾಗಿ ನಟಿಸಿದ್ದ ರಾಜ್ ಶೆಟ್ಟಿ ಪಕ್ಕಾ ಸಾಫ್ಟ್ ಕ್ಯಾರೆಕ್ಟರಿನಿಂದ ಪ್ರೇಕ್ಷಕರನ್ನು ಸೆಳೆದಿದ್ದರು. ಆದರೆ ಮಹಿರಾ ಚಿತ್ರದಲ್ಲವರು ಪಕ್ಕಾ ಮಾಸ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾರೆ.
ಒಂದು ಮೊಟ್ಟೆಯ ಕಥೆ ಚಿತ್ರದಲ್ಲಿ ನಿರ್ದೇಶಕನಾಗಿಯೂ ಪ್ರಶಂಸೆ ಗಳಿಸಿದ್ದವರು ರಾಜ್ ಬಿ ಶೆಟ್ಟಿ. ಎಲ್ಲರೂ ಆ ಚಿತ್ರದ ನಂತರ ಅವರು ನಿರ್ದೇಶನದಲ್ಲಿ ಮುಂದುವರೆಯುತ್ತಾರೆಂದೇ ಅಂದುಕೊಂಡಿದ್ದರು. ಆದರೆ ಅವರೀಗ ಸಾಲು ಸಾಲು ಚಿತ್ರಗಳಲ್ಲಿ ನಟನಾಗಿ ಮಿಂಚಲಣಿಯಾಗಿದ್ದಾರೆ. ಇಮೇಜಿನ ಸನ್ನಿಯಾಚೆಗೆ ಎಲ್ಲ ಥರದ ಪಾತ್ರಗಳಲ್ಲಿಯೂ ನಟಿಸ ಬೇಕೆಂಬ ತುಡಿತ ಹೊಂದಿರೋ ರಾಜ್ ಶೆಟ್ಟಿ ವಿಶಿಷ್ಟ ನಟನಾಗಿ ಕನ್ನಡ ಚಿತ್ರರಂಗದಲ್ಲೊಂದು ಸ್ತಾನ ಪಡೆಯೋದಂತೂ ಖಚಿತ!
#
No Comment! Be the first one.