ಇತ್ತೀಚಿಗಷ್ಟೇ ತೆರೆಕಂಡ ಉತ್ತಮ ವಿಮರ್ಶೆಯನ್ನು ಪಡೆದ ಮಹೇಶ್ ಗೌಡ ನಿರ್ದೇಶನದ ಸಿನಿಮಾ ಮಹಿರ. ತಮ್ಮ ಗೆಲುವಿನ ಖುಷಿಯನ್ನು ಶೇರ್ ಮಾಡಲು ಸುದ್ದಿಗಾರರನ್ನು ಆಹ್ವಾನಿಸಿ ಮಾತನಾಡಿದ ಮಹೇಶ್, ‘ನಮ್ಮ ಚಿತ್ರವು ವಿಮರ್ಶಕರಿಂದ ಈಗಾಗಲೇ ಒಳ್ಳೆಯ ಹೆಸರು ಸಂಪಾದಿಸಿದೆ. ವಾರಾಂತ್ಯಗಳಲ್ಲಿ ವೀಕ್ಷಕರು ಕೂಡ ಒಳ್ಳೆಯ ಪ್ರತಿಕ್ರಿಯೆ ತೋರಿಸಿದ್ದಾರೆ. ಚಿತ್ರವು ಹೌಸ್ಫುಲ್ ಆಗಿ ಪ್ರದರ್ಶನ ಕಂಡಿದೆ’ ಎಂದು ಸಂತಸ ವ್ಯಕ್ತಪಡಿದ್ದಾರೆ.
ಕನ್ನಡ ಸಿನಿಮಾ ಲೋಕಕ್ಕೆ ಹೊಸಬರಾದ ವರ್ಜಿನಿಯಾ ರಾಡ್ರಿಗಸ್ ಮತ್ತು ಚೈತ್ರಾ ಆಚಾರ್ ಅವರ ಅಭಿನಯಕ್ಕೆ ವೀಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ. ಸಿನಿಮಾಕ್ಕೆ ಒಳ್ಳೆಯ ಸ್ಪಂದನೆ ದೊರೆತ ಬೆನ್ನಲ್ಲೇ ನಾನು ಹೊಸ ಸಿನಿಮಾ ಮಾಡುತ್ತಿದ್ದೇನೆ. ಚಿತ್ರಕಥೆ ಸಿದ್ದವಾಗಿದ್ದು, ಅಧಿಕೃತ ಮಾಹಿತಿಯನ್ನು ಸದ್ಯದಲ್ಲೇ ತಿಳಿಸಲಿದ್ದೇವೆ ಎಂದು ಮಹೇಶ್ ತಿಳಿಸಿದ್ದಾರೆ.
No Comment! Be the first one.