ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕವೇ ನಟನಾಗಿ, ನಿರ್ದೇಶಕನಾಗಿ ಎಂಟ್ರಿ ಕೊಟ್ಟವರು ರಾಜ್ ಬಿ ಶೆಟ್ಟಿ. ಈ ಚಿತ್ರದ ಭರಪೂರ ಗೆಲುವಿನ ನಂತರ ರಾಜ್ ಶೆಟ್ಟಿ ನಟನಾಗಿಯೇ ಹೆಚ್ಚು ಹೆಚ್ಚು ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅವೆಲ್ಲವೂ ಒಂದು ಮೊಟ್ಟೆಯ ಕಥೆ ಚಿತ್ರದಂಥಾದ್ದೇ ಭಿನ್ನವಾದ ಪಾತ್ರಗಳೆಂಬುದು ವಿಶೇಷ.


ರಾಜ್ ಬಿ ಶೆಟ್ಟಿ ನಟಿಸುತ್ತಿರುವ ಹೊಸಾ ಚಿತ್ರ `ಮಹಿರಾ’. ಚಿತ್ರ ನಿರ್ದೇಶಕನಾಗೋ ಕನಸಿನಿಂದ ವಿದೇಶದಿಂದ ಮರಳಿರುವ ಮಹೇಶ್ ಗೌಡ ನಿರ್ದೇಶನ ಮಾಡುತ್ತಿರುವ ಈ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದೆಯಂತೆ. ಇದರಲ್ಲಿ ರಾಜ್ ಬಿ ಶೆಟ್ಟಿ ಅತ್ಯಂತ ಚಾಣಾಕ್ಷ ಪೊಲೀಸ್ ಅಧಿಕಾರಿಯಾಗಿ ನಟಿಸಲಿದ್ದಾರೆ.
ಮಹಿರಾ ಎಂಬುದು ಸಂಸ್ಕೃತ ಪದ. ಇದು ಗಟ್ಟಿನ ಹೊಂದಿರೋ, ಧೈರ್ಯಸ್ಥ ಮಹಿಳೆ ಎಂಬಂಥಾ ಅರ್ಥವನನು ಹೊಂದಿದೆ. ಹಾಗಂತ ಈ ಚಿತ್ರ ಮಹಿಳಾ ಪ್ರಧಾನವಾದ ಯಾವುದೇ ಸಂದೇಶ ರವಾನಿಸೋ ಉದ್ದೇಶ ಹೊಂದಿಲ್ಲ. ತಾಯಿ ಮಗಳ ಬದುಕಿನಲ್ಲಿ ಎದುರಾಗೋ ಒಂದು ಆಕಸ್ಮಿಕ ಮತ್ತು ಅದರ ಸುತ್ತ ಜರುಗುವ ಸನ್ನಿವೇಶಗಳನ್ನಿಟ್ಟುಕೊಂಡು ಈ ಚಿತ್ರದ ಕಥೆ ರೂಪಿಸಲಾಗಿದೆಯಂತೆ.
ವರ್ಷಗಳ ಹಿಂದೆಯೇ ಸುನೀಲ್ ಕುಮಾರ್ ದೇಸಾಯಿ ಅವರಿಗೆ ಸಹಾಯಕರಾಗಿದ್ದುಕೊಂಡು ನಿರ್ದೇಶನದಲ್ಲಿ ಅನುಭವ ಪಡೆದುಕೊಂಡಿದ್ದವರು ಮಹೇಶ್ ಗೌಡ. ಪ್ರೇಕ್ಷಕರನ್ನು ಕ್ಷಣದಿಂದ ಕ್ಷಣಕ್ಕೆ ಕುತೂಹಲಗೊಳ್ಳುವಂಥಾ ಒಂದು ಚೆಂದದ ಚಿತ್ರ ಮಾಡಿರೋ ಖುಷಿ ಅವರದ್ದು. ಅಂದಹಾಗೆ ಇಂದು ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

#

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ನಾಗಶೇಖರ್ ಸೃಷ್ಟಿಸಿದ ಪಾತ್ರ ಯಾವುದು?

Previous article

ಇದು ಕಿಚ್ಚನಿಗೆ ಅಭಿಮಾನಿಗಳು ಕೊಟ್ಟ ಬಿಗ್ ಗಿಫ್ಟ್!

Next article

You may also like

Comments

Leave a reply

Your email address will not be published.