ದೇ.. ದೇ.. ಪ್ಯಾರ್ ದೇ ಸಿನಿಮಾ ಬಂದ ಹೊಸ್ತಿಲಲ್ಲೇ, ಈ ಮೈದಾನ್ ಎಂಬ ಸಿನಿಮಾಕ್ಕೆ ಶೂಟಿಂಗ್ ಮಾಡಲಾಯ್ತು. ಆದರೆ ಕೊರೊನಾ ಕಾಟದ ಕಾರಣಕ್ಕೆ ಮೈದಾನ್ ಸಿನಿಮಾದ ಶೂಟಿಂಗ್ ಕೆಲಸ ನಿಂತುಹೋಗಿತ್ತು. ಇದೀಗ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಅವರ ಮೈದಾನ್ ಸಿನಿಮಾ ಚಿತ್ರೀಕರಣಕ್ಕೆ ದಿನಾಂಕ ಫಿಕ್ಸ್ ಆಗಿದೆ.
ಹರ್ಷವರ್ಧನ
ಪ್ರೇಮಿಗಳ ದಿನಾಚರಣೆಯಂದು ಸಿನಿಮಾ ಶೂಟಿಂಗ್ ಮುಂಬೈನಲ್ಲಿ ಶುರುವಾಗಿದ್ದು, ಏಪ್ರಿಲ್ ತಿಂಗಳವರೆಗೂ ಸತತವಾಗಿ ಚಿತ್ರೀಕರಣ ನಡೆಸಲಿದ್ದಾರೆ. ಅಮಿತ್ ರವೀಂದ್ರನಾಥ್ ಶರ್ಮಾ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಫುಟ್ಬಾಲ್ ತರಬೇತುದಾರ ಸೈಯದ್ ಅಬ್ದುಲ್ ರಹೀಮ್ ಅವರ ಜೀವನವನ್ನು ಆಧರಿಸಿದ ಕ್ರೀಡಾ ನಾಟಕವಾಗಿದೆ. ಕೋಚರ್ ಸೈಯ್ಯದ್ ಅಬ್ದುಲ್ ಭಾರತೀಯ ಫುಟ್‌ಬಾಲ್ ಅನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಹೆಮ್ಮೆಯ ವ್ಯಕ್ತಿ. ಇವರ ಜೀವನಧಾರಿತ ಸಿನಿಮಾ ಇದಾಗಿದೆ.
2019ರಲ್ಲಿಯೇ ಈ ಸಿನಿಮಾದ ಶೂಟಿಂಗ್ ಕಾರ್ಯಾರಂಭವಾಗಿತ್ತು. ಲಕ್ನೌ, ಕೊಲ್ಕತ್ತಾ ಮತ್ತು ಮುಂಬೈನಲ್ಲಿ ಅರ್ಧಭಾಗ ಶೂಟಿಂಗ್ ಮಾಡಿದ್ದು, ಅದಾಗಲೇ ಶೇಕಡಾ 65ರಷ್ಟು ಭಾಗ ಸಿನಿಮಾದ ಕಂಪ್ಲೀಟ್ ಆಗಿತ್ತು. ಕೊರೊನಾ ಆರ್ಭಟಿಸಿದ್ದರಿಂದ ಚಿತ್ರೀಕರಣವನ್ನು ನಿಲ್ಲಿಸಲಾಗಿತ್ತು, ಹೀಗಾಗಿ ಇನ್ನುಳಿದ ಭಾಗದ ಚಿತ್ರೀಕರಣವನ್ನು ಮುಂಬೈನ ಪೊವಾಯ್‌ನಲ್ಲಿ ಶೂಟ್ ಮಾಡಲಾಗುತ್ತೆ ಅಂತಾ ಸ್ವತಃ ಅಜಯ್ ದೇವಗನ್ ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ಅಜಯ್ ದೇವಗನ್ ‘ಮೈದಾನ್’ ಸಿನಿಮಾ ರಿಲೀಸ್ ಬಗ್ಗೆ ಪೋಸ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ರು. ಈ ವರ್ಷ ಅಕ್ಟೋಬರ್ 15ರಂದು ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ತೆರೆಕಾಣಲಿದೆ ಅಂತ ಹೇಳಿದ್ದರು ಆದರೆ ಈಗ ‘ಮೈದಾನ್’ ಈ ಬಾರಿಯ ದಸರಾದಂದು ವಿಶ್ವಾದ್ಯಂತ ತೆರೆಮೇಲೆ ಬರಲಿದೆಯಂತೆ.
Leave a Reply
You must be logged in to post a comment.