ತಾಜ್‌ ಹೊಟೆಲ್‌  ಅಂದ ತಕ್ಷಣ ನೆನೆಪಾಗೋದೆ ಅಂದು ಭಯೋತ್ಪಾದಕರ ದಾಳಿಯಿಂದ ಸೃಷ್ಷಿಯಾದ ಆ ಆತಂಕದ ಕ್ಷಣಗಳು. ಇಡೀ ಭಾರತ ಅಂದು ಅಕ್ಷರಶಃ ಬೆಚ್ಚಿಬಿದ್ದಿತ್ತು. ಈ ಘಟನೆ ಇನ್ನೂ ಕಣ್ಣಿಗೆ ಕಟ್ಟಿದಂತೆಯೇ ಇದೆ. ಅಷ್ಟೇ ಅಲ್ಲದೇ 200ರ ನವೆಂಬರ್‌ 26ರಂದು ನಡೆದ ಈ ದುರಂತದಲ್ಲಿ ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಅವರನ್ನೂ ನಾವು ಕಳೆದುಕೊಂಡಿದ್ದೆವು. ಇದು ಭಾರತೀಯರಿಗೆ ತುಂಬಲಾರದ ನಷ್ಟವೂ ಹೌದು..

ಇದೀಗ  ಹುತಾತ್ಮರಾದ ಸಂದೀಪ್ ಉನ್ನಿ ಕೃಷ್ಣನ್ (Major Sandeep Unnikrishnan) ಅವರ ಜೀವನಾಧಾರಿತ ಚಿತ್ರವಾಗಿರುವ ‘Major’ ಜುಲೈ 2 ಕ್ಕೆ ಬಿಡುಗಡೆಯಾಗಲಿದೆ ಅಂತ ಅಧಿಕೃತವಾಗಿ ಮಾಹಿತಿ ಸಿಕ್ಕಿದೆ. ಅಡಿವಿ ಶೇಷ್‌ ಹೀರೋ ಆಗಿ ನಟಿಸಿರುವ ಈ ಚಿತ್ರವನ್ನು ಟಾಲಿವುಡ್‌ನ ಸೂಪರ್‌ ಸ್ಟಾರ್‌ ಮಹೇಶ್‌ ಬಾಬು  ನಿರ್ಮಾಣ ಮಾಡುವುದರ ಜೊತೆಗೆ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಚಿತ್ರದ ಬಗ್ಗೆ ಇನ್ಸ್‌ಟಾಗ್ರಾಮ್‌ನಲ್ಲಿ ನಟ ಮಹೇಶ್‌ ಬಾಬು ಪೋಸ್ಟರ್‌ ಹಂಚಿಕೊಂಡಿದ್ದು, 2021 ಜುಲೈ 2ನೇ ತಾರೀಖು ಮೇಜರ್‌ ಡೇ ಆಗಿರಲಿದೆ ಅಂತ ಬರೆದುಕೊಂಡಿದ್ದಾರೆ.

ಖ್ಯಾತ ಚಿತ್ರವಿಮರ್ಶಕ ತರಣ್‌ ಆದರ್ಶ್‌ ಕೂಡ ಟ್ವೀಟ್‌ ಮಾಡಿ, “ಮೇಜರ್ ಚಿತ್ರ ಜುಲೈ 2 ರಂದು ಅದ್ದೂರಿಯಾಗಿ ತೆರೆಕಾಣುತ್ತೆ ಅಂತ ತಿಳಿಸಿದ್ದಾರೆ. “ಮೇಜರ್ ಚಿತ್ರ ಜುಲೈ 2 ರಂದು ಬಿಡುಗಡೆಯಾಗಲಿದೆ, ಹಿಂದಿ ಮತ್ತು ತೆಲುಗು ಎರಡು ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಸೋನಿ ಪಿಕ್ಚರ್ಸ್ ಫಿಲಂಸ್ ಇಂಡಿಯಾ ಪ್ರಸ್ತುತಪಡಿಸುತ್ತಿದೆ” ಎಂದು ತರಣ್ ಟ್ವೀಟ್ ಮಾಡಿದ್ದಾರೆ. ಶಶಿ ಕಿರಣ್ ಟಿಕ್ಕಾ ನಿರ್ದೇಶನದ ‘ಮೇಜರ್’ ಚಿತ್ರ ತೆಲುಗು ಸೇರಿದಂತೆ ಹಿಂದಿಯಲ್ಲಿಯೂ ಕೂಡ ಬಿಡುಗಡೆಯಾಗಲಿದೆ ಅಂತ ಮಾಹಿತಿ ನೀಡಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಚಿತ್ರರಂಗಕ್ಕೆ ಹೊಸಾ ಅಮ್ಮ ಸಿಕ್ಕಿದ್ದಾರೆ!

Previous article

ನಿರ್ದೇಶನದ ಜೊತೆ ನಟನೆಯಲ್ಲೂ ಹೆಸರು ಮಾಡುತ್ತಿರುವ ರಾಘು!

Next article

You may also like

Comments

Leave a reply

Your email address will not be published. Required fields are marked *