ಮಲೈಕಾ ಅರೋರ ಮತ್ತು ಅರ್ಜುನ್ ಕಪೂರ್ ಮಧ್ಯೆ ಏನೋ ಕುಚ್ ಕುಚ್ ನಡೆಯುತ್ತಿದೆ ಎಂಬ ಸುದ್ದಿ ಬಿ ಟೌನಿನಲ್ಲಿ ಬಹಳ ದಿನಗಳಿಂದಲೇ ಹರಿದಾಡುತ್ತಿದೆ. ಅದಕ್ಕೆ ನಿದರ್ಶನವೆಂಬಂತೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಇಬ್ಬರೂ ಅಂಟಿಕೊಂಡು ಓಡಾಡಿದ್ದು ಎಲ್ಲರ ಅನುಮಾನಗಳಿಗೂ ಜೀವ ಬರುವಂತೆಯೂ ಮಾಡಿತ್ತು. ಇತ್ತೀಚಿಗೆ ಅರ್ಜುನ್ ಕಪೂರ್ ಹುಟ್ಟುಹಬ್ಬಕ್ಕೆ ವಿಶೇಷ ಗಿಫ್ಟ್ ಗಳನ್ನು ನೀಡಿದ್ದ ಮಲೈಕಾ ತೂಕ ಇಳಿಸಿಕೊಂಡಿರುವ ಅರ್ಜುನ್ ಕಪೂರ್ ಸರಣಿ ಫೋಟೋಗಳ ಟ್ವೀಟ್ ಪೋಸ್ಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿ ಮತ್ತೆ ನೋಡುಗರ ಕಣ್ಣರಳುವಂತೆ ಮಾಡಿದ್ದಾರೆ.
It’s been a tough journey for me ever since I was a kid when it comes to my battle with obesity. Everyone has their own struggles I have had and continue to have mine. But the whole point of life is that we fall, we get back up and try again… pic.twitter.com/CYCeIMwfsj
— Arjun Kapoor (@arjunk26) June 18, 2019
ಅಲ್ಲದೇ ವಿಧ ವಿಧವಾದ ಕಮೆಂಟುಗಳನ್ನು ಮಾಡಿ ಶೇರ್ ಮಾಡುವಂತೆಯೂ ಮಾಡಿದೆ. ಅರ್ಜುನ್ ಫೋಸ್ಟ್ ಗೆ ಮಲೈಕಾ ‘ಫೇಥ್ ಆಯಂಡ್ ಹಾರ್ಡ್ ವರ್ಕ್ ಅರ್ಜುನ್’ ಎಂದು ಮಲೈಕಾ ಕಮೆಂಟ್ ಬರೆದಿದ್ದು, ಅರ್ಜುನ್ ತಂಗಿ ಅಂಶುಲಾ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕಳೆದ ಏಪ್ರಿಲ್ ನಲ್ಲಿ ಅರ್ಜುನ್ ಮತ್ತು ಮಲೈಕಾ ಸಪ್ತಪದಿ ತುಳಿದಿದ್ದಾರೆ ಎಂಬ ಗಾಳಿಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಡಿಕೊಂಡಿದ್ದರೂ ಸಹ ವದಂತಿಗೆ ಮಲೈಕಾರಾಗಲಿ, ಅರ್ಜುನ್ ರಾಗಲಿ ಏನೂ ಪ್ರತಿಕ್ರಿಯೆಯನ್ನು ನೀಡದೇ ಸುಮ್ಮನಾಗಿ ಗೊಂದಲಕ್ಕೆ ಕಾರಣವಾಗಿದ್ದರು.
Comments