ಸಿನಿಮಾ ಕ್ಷೇತ್ರಗಳಲ್ಲಿ ಅಪ್ಪ, ಅಮ್ಮ ಸ್ಟಾರ್ ನಟರಾಗಿ ಹೋದರೆ ಮುಗಿಯಿತು. ಮಕ್ಕಳು, ಸಂಬಂಧಿಗಳು ಸಹ ಸುಲಭವಾಗಿ ಸಿನಿಮಾಗಳಲ್ಲಿ ಎಂಟ್ರಿ ಕಮ್ ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ. ಅವರು ಅದೇ ಕ್ಷೇತ್ರದಲ್ಲಿ ಉಳಿಯುವುದು ಬಿಡುವುದು ಅವರವರ ಟ್ಯಾಲೆಂಟ್ ಗೆ ಬಿಟ್ಟದ್ದು. ಸದ್ಯ ಬಾಲಿವುಡ್ ನಲ್ಲಿರುವ ಎಲ್ಲ ಸ್ಟಾರ್ ಸೆಲೆಬ್ರೆಟಿಗಳು ಸಹ ಜಮಾನದ ಸ್ಟಾರ್ ಕಲಾವಿದರ ಮಕ್ಕಳೇ.
ಸದ್ಯ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಮಗ ಅರ್ಹಾನ್ ಖಾನ್ ಕೂಡ ಬಾಲಿವುಡ್ ಗೆ ಎಂಟ್ರಿ ಪಡೆಯಲು ಹವಣಿಸುತ್ತಿರುವ ಸ್ಟಾರ್ ಮಗನೇ. ಈ ವಿಚಾರವನ್ನು ಸ್ವತಃ ಮಲೈಕಾ ಅವರೇ ಹಂಚಿಕೊಂಡಿದ್ದು, ‘ಅವನಿಗೆ ಸಿನಿಮಾ ಕ್ಷೇತ್ರದ ಬಗ್ಗೆ ಆಕರ್ಷಣೆಯಿದೆ. ಸಿನಿಮಾ, ನಟನೆ ವಾತಾವರಣದಲ್ಲಿಯೇ ಬೆಳೆದಿದ್ದಾನೆ. ಅವನಿಗೆ ಸಿನಿಮಾಗಳು ಅಂದ್ರೆ ಇಷ್ಟ. ಅವನು ಸಿನಿಮಾಗಳನ್ನು ಫಾಲೋ ಮಾಡುತ್ತಾನೆ. ಸಿನಿಮಾ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾನೆ’ ಆದರೆ ಅವನಿಗೆ ನಟನೆ, ನಿರ್ದೇಶನ ಅಥವಾ ಬೇರೆ ಯಾವ ವಿಭಾಗದಲ್ಲಿ ಆಸಕ್ತಿ ಇದೆ ಎನ್ನುವುದು ನನಗೆ ತಿಳಿದಿಲ್ಲ. ಯಾವಾಗ ಸಿನಿಮಾ ಲೋಕವನ್ನು ಪ್ರವೇಶಿಸಬಹುದು ಎಂಬ ಬಗ್ಗೆ ಖಚಿತವಾಗಿ ಹೇಳಲಾರೆ’ ಎನ್ನುತ್ತಾರೆ.
ಈ ಹಿಂದೆ ಸಂದರ್ಶನವೊಂದರಲ್ಲಿ ಅರ್ಹಾನ್ ತಂದೆ ಅರ್ಬಾಜ್ ಖಾನ್ ‘ನನ್ನ ಮಗ ಬಾಲಿವುಡ್ ಪ್ರವೇಶಕ್ಕೆ ನಿರ್ಧರಿಸಿದರೆ ಅದಕ್ಕಾಗಿ ನಾನು ಸಂಪೂರ್ಣ ಸಿದ್ಧತೆ ಮಾಡಲು ತಯಾರಾಗಿದ್ದೇನೆ. ಆದರೆ ಅದರ ಬಗ್ಗೆ ಅವನು ಯಾವತ್ತೂ ನನ್ನ ಬಳಿ ಹೇಳಿಕೊಂಡಿಲ್ಲ. ಬಾಲಿವುಡ್ ಪಯಣ ಸುಲಭವಲ್ಲ. ಸಲ್ಮಾನ್ ಖಾನ್ ಜೊತೆ ತನ್ನನ್ನು ಆತ ಹೋಲಿಸಿಕೊಳ್ಳಬಾರದು. ತನ್ನ ಗುರಿ ಬಗ್ಗೆ ಸ್ಪಷ್ಟವಾಗಿ ಅವನು ಆಲೋಚಿಸಬೇಕು. ಅದಕ್ಕೆ ತಾಳ್ಮೆ ಮುಖ್ಯ’ ಎಂದು ಹೇಳಿದ್ದರು. ಎಲ್ಲ ಅಂದುಕೊಂಡಂತಾದರೆ ಆರ್ಹಾನ್ ಸಿನಿಪಯಣ ಸದ್ಯದಲ್ಲೇ ಶುರುವಾಗಲಿದ್ದು, ಆತ ಯಾವ ಕೆಟಗರಿಯಲ್ಲಿ ಗುರುತಿಸಿಕೊಳ್ಳಬಲ್ಲನೋ ನೋಡಬೇಕು.
No Comment! Be the first one.