- ಸಂತೋಷ್ ಸಕ್ರೆಬೈಲು
ಹುಲಿಯನ್ನು ಕಂಡರೆ ಎಂತವರಾದರೂ ಮೈಲಿ ದೂರು ನಿಲ್ಲುತ್ತೇವೆ. ಯಪ್ಪಾ ಎಲ್ಲಿ ಹುಲಿ ನಮ್ಮನ್ನ ತಿಂದು ಬಿಸಾಕಿಬಿಡುತ್ತದೋ ಅಂತ ಬೆದರಿ ಬೆಂಡಾಗಿ ಬಿಡ್ತೇವೆ. ಅಲ್ಲದೇ ಬೋನಿನಲ್ಲಿರುವ ಹುಲಿಯನ್ನ ಹತ್ತಿರದಿಂದ ನೋಡಿ ವಾವ್ಹ್ ಅಂದುಕೊಂಡು ಖುಷಿ ಪಡುತ್ತೇವೆ. ಆದರೆ, ಮಾಳವಿಕ ಮೋಹನ್ ಹಾಕಿರೋ ಫೋಸ್ಟರ್ ಒಮ್ಮೆ ಹೃದಯ ಝಲ್ ಎನಿಸುತ್ತೆ, ಮತ್ತೆ ರೋಮಾಂಚನವೂ ಆಗುತ್ತೆ
ಇತ್ತೀಚೆಗೆ ಕಾಲಿವುಡ್ನಲ್ಲಿ ಭರ್ಜರಿಯಾಗಿ ಸದ್ದು ಮಾಡಿದ ಸಿನಿಮಾ ಅಂದ್ರೆ ಅದು ಮಾಸ್ಟರ್ ಸಿನಿಮಾ. ಕಾಲಿವುಡ್ ಖ್ಯಾತ ನಟ ವಿಜಯ್ ಮತ್ತು ಮಾಳವಿಕ ನಟಿಸಿರೋ ಈ ಸಿನಿಮಾ ಸಖತ್ ಹಿಟ್ ಆಗಿದೆ. ಇದೀಗ ನಟಿ ಮಾಳವಿಕ ಮೂವಿ ಶೆಡ್ಯೂಲ್ಗೆ ಬ್ರೇಕ್ ಕೊಟ್ಟು ರಾಜಸ್ತಾನದಲ್ಲಿ ಎಂಜಾಯ್ ಮೂಡ್ನಲ್ಲಿದ್ದಾರೆ.
ರಾಜಸ್ಥಾನದ ರತ್ನಾಂಬೋರ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದು, ಟೈಗರ್ ಸಫಾರಿಯಲ್ಲಿ ಸುತ್ತಾಡಿದ್ದಾರೆ. ಈ ವೇಳೆ ಹುಲಿ ಪ್ರತ್ಯಕ್ಷವಾಗಿದ್ದು, ನಟಿ ಮಾಳವಿಕಾ ಫುಲ್ ಖುಷಿಯಾಗಿದ್ದಾರೆ. ಸಫಾರಿ ಮಾಡುತ್ತಿದ್ದ ವೇಳೆ ಆಕೆಯ ಕ್ಯಾಮೆರಾಗೆ ಹುಲಿ ಸೆರೆ ಸಿಕ್ಕಿದೆ. ಈ ದೃಶ್ಯವನ್ನ ಕ್ಲಿಕ್ಕಿಸಿದ ಮಾಳವಿಕ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಪೋಸ್ಟ್ ಮಾಡಿದ್ದಾರೆ. ರತ್ನಾಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಟೈಮ್ ಪಾಸ್ ಮಾಡಿದ ಮಾಳವಿಕಾಗೆ ವನ್ಯಜೀವಿಗಳೆಲ್ಲಾ ಕಣ್ಣಿಗೆ ತಂಪು ನೀಡಿದ್ವು.
ಸದಾ ಸಿನಿಮಾ ವಿಷಯದಲ್ಲಿ ಬ್ಯುಸಿ ಇರುತ್ತಿದ್ದ ನಟಿ, ಪ್ರಾಣಿಗಳ ಚಲನ-ವಲನಗಳನ್ನೆಲ್ಲಾ ಕಣ್ತುಂಬಿಕೊಂಡ್ರು. ಇಲ್ಲಿ ವಿಶೇಷವಾದದ್ದು ಅಂದ್ರೆ ಹುಲಿ ಪ್ರತ್ಯಕ್ಷವಾಗಿದ್ದು, ಅದು ಸಮೀಪದಲ್ಲಿ ಟೈಗರ್ ನಡೆದುಕೊಂಡು ಹೋದ ದೃಶ್ಯ ರೋಮ್ಯಾಂಟಿಕ್ ಆಗಿ ಇತ್ತು. ಸದ್ಯ ಹುಲಿ ತನ್ನ ಪಾಡಿಗೆ, ತಾನು ಹೋಗಿದೆ. ನನ್ನ ಜೀವಮಾನದಲ್ಲೇ ಇಷ್ಟು ಹತ್ತಿರದಿಂದ ಹುಲಿಯನ್ನ ನೋಡಿಯೇ ಇರಲಿಲ್ಲ, ಅದೊಂದು ಅದ್ಭುತ ಕ್ಷಣ ಅಂತ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಒಂದು ವೇಳೆ ಹುಲಿ ತನ್ನ ವರಸೆ ತೋರಿಸಿದ್ರೆ, ನಟಿ ಕೊಟ್ಟಿದ್ದ ಪೋಸ್ ಫೋಟೋ ಫ್ರೇಮಿನಲ್ಲಿರುತ್ತಿತ್ತು ಅಂತ ನೆಟ್ಟಿಗರು ಕಮೆಂಟ್ಸ್ ಹಾಕಿದ್ದಾರೆ.
ಪಿಂಕ್ ಸಿಟಿಯಲ್ಲಿ ನಟಿ ಮಾಳವಿಕ ಮೋಹನ್ ಚಿಲ್ ಮಾಡಿರೋ ಕೆಲ ಫೋಟೋಗಳನ್ನ ನೋಡೋದಾದ್ರೆ.. ಇಲ್ಲಿದೆ..!
No Comment! Be the first one.