ಶಂಕರ್‌ನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್‘ ಹೆಸರು ಕೇಳದವರಿಲ್ಲ. ಈಗ ಅದೇ ಶೀರ್ಷಿಕೆ ಸಿನಿಮಾ ರೂಪದಲ್ಲಿ ಮೂಡಿ ಬರುತ್ತಿದೆ. ಸ್ವಯಂಪ್ರಭ ಎಂಟರ್‌ಟೈನ್‌ಮೆಂಟ್ & ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೆ.ರತ್ನಾಕರ್ ಕಾಮತ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಇದೇ ತಿಂಗಳಲ್ಲಿ ಆರಂಭವಾಗಲಿದೆ. ಚಿತ್ರದ ಮೊದಲ ಪೊಸ್ಟರನ್ನು ಇತ್ತೀಚೆಗೆ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ಚಿತ್ರದ ಮೊದಲ ಪೋಸ್ಟರ್ ಹಾಗೂ ಶೀರ್ಷಿಕೆ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.
ವಿಜಯ ರಾಘವೇಂದ್ರ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರವನ್ನು ಕಿಶೋರ್ ಮೂಡಬಿದ್ರೆ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ‘ಅಪ್ಪೆ ಟೀಚರ್‘ ಎಂಬ ತುಳು ಚಿತ್ರವನ್ನು ಕಿಶೋರ್ ನಿರ್ದೇಶಿಸಿದ್ದರು. ಕಿಶೋರ್ ಮೂಡಬಿದ್ರೆ ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಉದಯ್ ಲೀಲಾ ಅವರ ಛಾಯಾಗ್ರಹಣವಿದೆ. ಪ್ರದೀಪ್ ನಾಯಕ್ ಸಂಕಲನವಿರುವ ಈ ಚಿತ್ರಕ್ಕೆ ಗಗನ್ ಖಡೇರಿಯಾ ಸಂಗೀತ ನೀಡುತ್ತಿದ್ದಾರೆ. ಸಾತ್ವಿಕ್ ಹೆಬ್ಬಾರ್, ಸಂದೀಪ್ ಬೆದ್ರ, ಕರುಣಾಕರ್ ಉಡುಪಿ, ಶಾಶಾಂಕ್ ನಾರಾಯಣ ನಿರ್ದೇಶನ ತಂಡದಲ್ಲಿದ್ದಾರೆ.
#
No Comment! Be the first one.