ಯಾರ್ಯಾರ ಮನಸ್ಸಲ್ಲಿ ಏನೇನು ಬಯಕೆ ಇರುತ್ತದೋ ಗೊತ್ತಾಗೋದಿಲ್ಲ. ಮಲ್ಲಿಕಾ ಶೆರಾವರ್ ಇತ್ತೀಚೆಗೆ ಹೇಳಿಕೊಂಡಿರುವ ಪ್ರಕಾರ ನಿರ್ಮಾಪಕನಿಗೆ ಇಂಥದ್ದೊಂದು ವಿಲಕ್ಷಣ ಆಸೆ ಇದ್ದಿದ್ದಂತೂ ನಿಜ!
- ರಮ್ಯ
ಬಾಲಿವುಡ್ ಬೆಡಗಿ ಮಲ್ಲಿಕಾ ಶೆರಾವತ್ ತಮ್ಮ ಮೈಮಾಟದಿಂದ ಆಗಾಗ್ಗೆ ಸುದ್ದಿಯಾಗುವುದು ಮಾತ್ರವಲ್ಲ; ತಮ್ಮ ಹೇಳಿಕೆಗಳಿಂದಲೂ ಸುದ್ದಿಯಲ್ಲಿರುತ್ತಾಳೆ. ಸದ್ಯ ಈಕೆ ಮಾತಾಡಿರುವುದು ನಿರ್ಮಾಪಕರೊಬ್ಬನ ಬಗ್ಗೆ. ಆತ ಕೊಟ್ಟಿದ್ದ ವಿಚಿತ್ರ ಐಡಿಯಾವನ್ನು ಹೇಳುವ ಮೂಲಕ ‘ಜನ ಹೀಗೂ ಇದ್ದಾರೆ’ ಎಂದಿದ್ದಾಳೆ.
ತಮ್ಮಿಷ್ಟದ ಬಟ್ಟೆಗಳನ್ನು ತೊಡುವುದು ಮಾತ್ರವಲ್ಲ, ತಮಗನಿಸಿದ್ದನ್ನು ನೇರಾನೇರವಾಗಿ ಹೇಳುವ ಗುಣ ಮಲ್ಲಿಕಾ ಶೆರಾವತಳದ್ದು. ಇತ್ತೀಚೆಗೆ ಈಕೆ ನೀಡಿರುವ ಹೇಳಿಕೆಯೊಂದು ಬಾಲಿವುಡ್ ಜನರ ಹುಬ್ಬೇರಿಸುವಂತೆ ಮಾಡಿದೆ. ಈ ಹೇಳಿಕೆ ನೀಡಿದ್ದು ‘ದಿ ಲವ್ ಲಾಫ್ ಲೈವ್ ಶೋ’ನಲ್ಲಿ. ಡ್ಯಾನ್ಸ್ ಮಾಡಲು ಬಂದಿದ್ದ ವಿಚಿತ್ರ ಆಹ್ವಾನವೊಂದರ ಬಗ್ಗೆ ಆ ಶೋನಲ್ಲಿ ಮಲ್ಲಿಕಾ ಮನಬಿಚ್ಚಿ ಮಾತಾಡಿದ್ದಾಳೆ.
“ಒಮ್ಮೆ ನಿರ್ಮಾಪಕರು ಡ್ಯಾನ್ಸ್ ಒಂದರಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಿದ್ದರು. ಅದರಂತೆ ನಾನು ಅತಿಥಿ ಪಾತ್ರಕ್ಕೆ ಒಪ್ಪಿಕೊಂಡೆ. ಬರೀ ಡ್ಯಾನ್ಸ್ ದೃಶ್ಯ ಅದು. ಆದರೆ ಆ ನಿರ್ಮಾಪಕ ನನ್ನ ಸೊಂಟದ ಮೇಲೆ ಚಪಾತಿ ಬೇಯಿಸುವ ದೃಶ್ಯದ ಕುರಿತು ಮಾತಾಡಿದ. ಆದರೆ ನಾನು ಅದನ್ನು ಒಪ್ಪಲಿಲ್ಲ. ಮಾದಕತೆಯನ್ನು ಹೀಗೆಲ್ಲಾ ತೋರಿಸಬಹುದು ಎಂಬುದು ಆತನ ಐಡಿಯಾವಾಗಿತ್ತು. ಒಂದು ರೀತಿಯಿಂದ ಐಡಿಯಾ ಚೆನ್ನಾಗಿಯೇ ಇತ್ತು. ಆದರೆ ಭಾರತದ ಮಾದಕತೆಯ ಐಡಿಯಾಗಳನ್ನು ನನಗಿನ್ನೂ ಅರ್ಥಮಾಡಿಕೊಳ್ಳಲು ಆಗುತ್ತಲೇ ಇಲ್ಲ” ಎಂದು ಮಲ್ಲಿಕಾ ಶೆರಾವತ್ ತಮ್ಮ ಹಳೆಯ ಅನುಭವವೊಂದನ್ನು ಹಂಚಿಕೊಂಡಿದ್ದಾಳೆ
“ಮಹಿಳೆಯರ ಸೌಂದರ್ಯ, ಮಾದಕತೆ ಕುರಿತಾಗಿ ಜನರಿಗೆ ಬೇರೆಯದ್ದೇ ಆಲೋಚನೆಗಳಿರುತ್ತವೆ. ಅದನ್ನು ಅರ್ಥಮಾಡಿಕೊಳ್ಳುವುದು ತುಂಬಾ ತ್ರಾಸದ ಕೆಲಸ. ನನ್ನ ವೃತ್ತಿ ಜೀವನದ ಆರಂಭದಲ್ಲಿ ಈ ಬಗ್ಗೆ ನನಗಷ್ಟು ಮಾಹಿತಿ ಇರಲಿಲ್ಲ. ಆದರೆ ಈಗ ಸ್ವಲ್ಪ ಸ್ವಲ್ಪ ಅರಿವಾಗುತ್ತಿದೆ” ಅನ್ನೋದು ಮಲ್ಲಿಕಾ ಸ್ಟೇಟ್ ಮೆಂಟು!
Comments