ಈತನ ಹೆಸರು ಮಲ್ಲಿಕಾರ್ಜುನ ದೇವೇಂದ್ರಪ್ಪ ರೊಟ್ಟಿಗವಾಡ ಅಂತಾ. ನೋಡಲು ಥೇಟು ಗುಜುರಿಯಿಂದ ತಂದು ಪೇಂಟು ಮಾಡಿದ ಗಾಡಿಯಂತಿದ್ದಾನೆ. ಮೊದಲು ಈತ ಧಾರವಾಡದಲ್ಲಿ ಸಣ್ಣದೊಂದು ಹೊಟೇಲು ನಡೆಸುತ್ತಿದ್ದ. ಅದ್ಯಾವ ಘಳಿಗೆಯಲ್ಲಿ ಗಾಂಧಿನಗರಕ್ಕೆ ವಕ್ಕರಿಸಿದನೋ ಗೊತ್ತಿಲ್ಲ. ಸಿಕ್ಕ ಸಿಕ್ಕ ಹೆಣ್ಣುಮಕ್ಕಳನ್ನು ಮುಕ್ಕುವುದು ಇವನ ನಿತ್ಯ ಕಸುಬಾಗಿಬಿಟ್ಟಿದೆ.
ಸಿನಿಮಾ ಮಾಡ್ತೀನಿ ಅಂತಾ ಐದಾರು ವರ್ಷಗಳಿಂದ ಓಡಾಡಿಕೊಂಡಿರುವ ಮಲ್ಲಿಕಾರ್ಜುನನ ಒಂದೇ ಒಂದು ಸಿನಿಮಾ ಕೂಡಾ ಈವರೆಗೆ ರಿಲೀಸಾಗಿಲ್ಲ.

“ಶಿವಮೊಗ್ಗ ರಾಮಣ್ಣ ನಂಬರ್ ಕೊಟ್ಟರು. ನಾನು ಎರಡು ಸಿನಿಮಾಗಳನ್ನು ಮಾಡುತ್ತಿದ್ದೀನಿ. ಮಿಂಚಿನ ಮಳೆ ಮತ್ತು ಆದಿವಾಸಿ ರಾಜು ಎನ್ನುವ ಎರಡು ಸಿನಿಮಾ ಮಾಡುತ್ತಿದ್ದೀನಿ. ನಿಮ್ಮನ್ನು ಹೀರೋಯಿನ್ ಆಗಿ ಸೆಲೆಕ್ಟ್ ಮಾಡಿಕೊಂಡಿದ್ದೀನಿ ಅಂತಾ ಸಿನಿಮಾದಲ್ಲಿ ನಟಿಸಲು ಬಯಕೆ ಹೊಂದಿರುವ ಹೆಣ್ಣುಮಕ್ಕಳನ್ನು ಹುಡುಕಿ ಅವರಿಗೆ ಕರೆ ಮಾಡುತ್ತಾನೆ. ನೀವೇ ಈ ಸಿನಿಮಾಗೆ ಹೀರೋಯಿನ್ನು ಅಂತಾ ನಂಬಿಸಿ, ಮೆಲ್ಲಗೆ ಆಟ ಶುರುವಿಟ್ಟುಕೊಳ್ಳುತ್ತಾನೆ. ಯಾವುದೋ ಸವೆದುಹೋದ ಫೈವ್ಡಿ ಕ್ಯಾಮೆರಾವೊಂದನ್ನು ಇಟ್ಟುಕೊಂಡು, ಅದರಲ್ಲಿ ದಿನಬೆಳಗಾದರೆ ಶೂಟಿಂಗು ಆರಂಭಿಸುತ್ತಾನೆ. ಹೀಗೆ ವರ್ಷಾನುಗಟ್ಟಲೆಯಿಂದ ಮಲ್ಲಿಕಾರ್ಜುನನ ಸಿನಿಮಾಗಳು ಚಿತ್ರೀಕರಣ ಮತ್ತು ಆತನ ಛತ್ರಿ ಆಟ ಮುಂದುವರೆದೇ ಇದೆ.

ಅದ್ಯಾವುದೋ ಹೊಟೇಲು ನಡೆಸಿಕೊಂಡಿರುವ ಮಲ್ಲಿಕಾರ್ಜುನನ ಬಳಿ ಸಿನಿಮಾ ಮಾಡುವಷ್ಟು ದುಡ್ಡಾಗಲಿ, ಪ್ರತಿಭೆಯಾಗಲಿ ಇಲ್ಲ. ಸಂಡೇ ಬಜಾರಿನಲ್ಲಿ ಪಾಲಿಷ್ ಮಾಡಿಟ್ಟ ಹಳೇ ಬೂಟಿನಂತಿರುವ ಮಲ್ಲಿಕಾರ್ಜುನ ಸ್ವತಃ ತನ್ನ ಸಿನಿಮಾಗಳಿಗೆ ಹೀರೋ ಬೇರೆ! ಐವತ್ತು ವರ್ಷ ಧಾಟಿರುವ ಕಮಂಗಿ ಮಲ್ಲಿಕಾರ್ಜುನ ‘ನನ್ನ ಸಿನಿಮಾ ರಿಲೀಸಾದಮೇಲೆ ದರ್ಶನ್ನು, ಸುದೀಪು ಸೈಡಿಗೆ ಹೋಗಿಬಿಡ್ತಾರೆ ಅಂತಾ ಮಾತಾಡಿ ನಂಬಿದವರ ತಲೆ ಸವರುತ್ತಾನೆ.

ಮಿಂಚಿನ ಮಳೆ, ಉತ್ತರ ಕರ್ನಾಟಕದ ಕಲಾವಿದರು, ಉತ್ತರ ಕರ್ನಾಟಕ ನಿರ್ಮಾಪಕರು ಎಂಬಿತ್ಯಾದಿಯಾಗಿ ಗ್ರೂಪ್ ಕ್ರಿಯೇಟ್ ಮಾಡಿ, ಪಾಪದ ಹೆಣ್ಣುಮಕ್ಕಳನ್ನು ಭೇಟೆಯಾಡುವುದು ಇವನ ಹಳೇ ಟ್ರಿಕ್ಸು. ಬಸ್ಸತ್ತಿಕೊಂಡು ಬೆಂಗಳೂರಿಗೆ ಬಂದುಬಿಡಿ, ಇಮೀಡಿಯೆಟ್ಟಾಗಿ ಶೂಟಿಂಗ್ ಶುರು ಮಾಡಬೇಕು ಎಂದು ನಂಬಿಸುತ್ತಾನೆ. ಬಂದವರನ್ನು ‘ನೋಡಿ ನನ್ನಂಥಾ ಹೀರೋಗಳ ಜೊತೆ ಕೆಲಸ ಮಾಡಿದರೆ, ಮುಂದೆ ನೀವು ದೊಡ್ಡ ಹೀರೋಯಿನ್ನಾಗೋದು ಗ್ಯಾರೆಂಟಿ. ಎಂತೆಂಥವರನ್ನೆಲ್ಲಾ ನಾನು ಸಿನಿಮಾ ರಂಗದಲ್ಲಿ ಬೆಳೆಸಿದ್ದೀನಿ. ನೀವು ಹಾಗೇ ಆಗಬೇಕೆಂದರೆ ನನ್ನ ಜೊತೆ ಕಾಂಪ್ರಮೈಸ್ ಮಾಡ್ಕೊಬೇಕು, ಕಮಿಟ್ ಮೆಂಟ್ಗೆ ಒಪ್ಪಬೇಕು ಎಂದು ಪ್ರವಚನ ಮಾಡುತ್ತಾನೆ.

ಆದಷ್ಟು ಬೇಗ ಮುದಿಗೂಬೆ ಮಲ್ಲಿಕಾರ್ಜುನನ ಬುಡಕ್ಕೆ ಬಿಸಿ ಕಾಯಿಸದಿದ್ದರೆ, ಎಷ್ಟು ಎಳೇ ಹುಡುಗಿಯರನ್ನು, ಹೆಂಗಸರನ್ನು ಮುಕ್ಕಿ ಬಿಸಾಡುತ್ತಾನೋ ಗೊತ್ತಿಲ್ಲ!

No Comment! Be the first one.