ಮದನ್ ಮಲ್ಲು ಯಾನೆ ಮದನ್ ಪಟೇಲ್ ಅನ್ನೋ ವ್ಯಕ್ತಿಗೆ ನಾನಾ ಮುಖಗಳಿವೆ!
ಒಂದು ಕಾಲಕ್ಕೆ ಆರ್ಕೆಸ್ಟ್ರಾ ನಡೆಸಿಕೊಂಡಿದ್ದ ಮಲ್ಲು ನಂತರದ ದಿನಗಳಲ್ಲಿ, ನಾಯಕ ನಟ, ನಿರ್ದೇಶಕ, ಗಾಯಕ, ಸಂಗೀತ ನಿರ್ದೇಶಕ, ನಿರ್ಮಾಪಕ, ರಾಜಕಾರಣಿ, ಸಮಾಜ ಸೇವಕ… ಹೀಗೆ ಇನ್ನೂ ಏನೇನೋ ಆಗಿ ಅವತಾರವೆತ್ತಿದ್ದವರು. ಮದನ್ ಮಲ್ಲು ಅವರನ್ನು ಜನ ಒಬ್ಬೊಬ್ಬರೂ ಒಂದೊಂದು ದೃಷ್ಟಿಯಲ್ಲಿ ಗುರುತಿಸುತ್ತಾರೆ. ಇಂಥಾ ಮಲ್ಲು ಆಗಾಗ ಗಾಂಧಿನಗರದ ಗಟಾರದಲ್ಲಿ ನಿಂತು, ಕೈ ಮೇಲಕ್ಕೆತ್ತಿ ‘ನಾನಿಲ್ಲೇ ಇದ್ದೀನಿ’ ಎನ್ನುತ್ತಿರುತ್ತಾರೆ.
ಸಿನಿಮಾ ವಿಚಾರಕ್ಕೆ ಬಂದರೆ ಕಾಲಕ್ಕೆ ತಕ್ಕಂತೆ, ಆಯಾ ಟ್ರೆಂಡಿಗೆ ಅನುಗುಣವಾದ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ, ನಟಿಸುವುದು ಇವರ ರೂಢಿ. ಈಗ ಕಾದಂಬರಿಯನ್ನು ಆಧರಿಸಿ ಸಿನಿಮಾ ಮಾಡಿದರೆ ವರ್ಕೌಟ್ ಆಗುತ್ತದೆ ಅಂತಾ ತಿಳಿದ ಮಲ್ಲಣ್ಣ ‘ತಮಟೆ’ ಅನ್ನೋ ಸಿನಿಮಾವನ್ನು ಶುರು ಮಾಡಿದ್ದಾರೆ. ಇದು ಕಾದಂಬರಿಯನ್ನು ಆಧರಿಸಿದ್ದು ಅಂತಾ ಹೇಳಿಕೊಂಡಿದ್ದಾರೆ. ಸಿನಿಮಾಗಾಗಿ ಕಾದಂಬರಿ ಆಯ್ತಾ? ಅಥವಾ ಕಾದಂಬರಿಯಿಂದ ಸಿನಿಮಾ ಆಯ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಮುಂದಿನ ಸಾಲಿನಲ್ಲಿ ಪ್ರಶಸ್ತಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಮಲ್ಲು ಕೂಡಾ ಇರುತ್ತಾರೆ ಅನ್ನೋದಂತೂ ನಿಜ.
ಅಂದಹಾಗೆ, ಸಾಕಷ್ಟು ಸಿನಿಮಾಗಳಲ್ಲಿ ಹೀರೋ ಆಗಿ ಅಭಿನಯಿಸಿ, ಏನೇ ಸಾಹ ಮಾಡಿದರೂ ನೆಲೆ ನಿಲ್ಲಲು ಸಾಧ್ಯವಾಗದ ಮಯೂರ್ ಪಟೇಲ್ ಈ ಬಾರಿ ನಿರ್ದೇಶಕನ ಗೆಟಪ್ಪಿನಲ್ಲಿ ರೀ ಎಂಟ್ರಿ ಕೊಟ್ಟಿದ್ದಾರೆ. ಕಳೆದ ದಶಕದ ಹೊಸ ಹೀರೋಗಳಲ್ಲಿ ಮಯೂರ್ ಕೂಡಾ ಪ್ರಮುಖರಾಗಿದ್ದವರು. ಭರವಸೆ ಮೂಡಿಸಿದ್ದ ಈ ಹುಡುಗ ನಾಯಕನಾಗಿ ಬದುಕು ರೂಪಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಅದಕ್ಕೆ ಮಯೂರ್ ಮತ್ತು ಅವರಪ್ಪನ ಸ್ವಯಂಕೃತ ಅಪರಾಧಗಳೇ ಕಾರಣ ಅನ್ನೋದೂ ನಿಜ. ‘ತಮಟೆ’ ಮೂಲಕ ನಿರ್ದೇಶಕನಾಗಲು ಹೊರಟಿರುವ ಮಯೂರ್ ಈಗಲಾದರೂ ಸದ್ದು ಮಾಡುವಂತಾಗಲಿ!
No Comment! Be the first one.