ಬಾಲಿವುಡ್ ನ ಪ್ರಣಯ ಪಕ್ಷಿಗಳಾಗಿದ್ದ ಮಲೈಕಾ ಅರೋರ ಮತ್ತು ಅರ್ಜುನ್ ಕಪೂರ್ ಇತ್ತೀಚಿಗೆ ಜತೆಯಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಇವರು ಇನ್ನೇನು ಮದುವೆಯಾಗುತ್ತಾರೆ ಎಂಬ ಸುದ್ದಿ ಇತ್ತೀಚಿಗಷ್ಟೇ ವೈರಲ್ ಕೂಡ ಆಗಿತ್ತು. ಈಗ ಇವರಿಬ್ಬರೂ ದೂರಾ ದೂರಾ ಎರಡು ತೀರಾ ಎಂಬಂತಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅರ್ಜುನ್ ಕಪೂರ್ “ನನಗಿನ್ನೂ 33 ವರ್ಷ, ಈಗಲೇ ಮದುವೆಯಾಗಬೇಕು ಎಂಬ ಉಮೇದು ನನಗಿಲ್ಲ” ಎಂದಿದ್ದರು. ತನ್ನ ಮುಂದಿನ ಸಿನಿಮಾದ ಕುರಿತು ಮಾತನಾಡುತ್ತಾ ಸಾಮಾನ್ಯವಾಗಿ ಮದುವೆ ಬಳಿಕ ಪುರುಷರಿಗೆ ಬೊಕ್ಕ ತಲೆ ಬರುತ್ತದೆ ಎನ್ನುತ್ತಾರೆ. ಆದರೆ ನನಗೆ ಮೊದಲೇ ಬೊಕ್ಕ ತಲೆ ಬಂದಿದೆ. ವಿಷಯ ಹೀಗಿರಬೇಕಾದರೆ ಇನ್ನು ಮದುವೆ ಯಾಕೆ ಎಂದಿದ್ದರು.


ಇದೀಗ ಇದಕ್ಕೆ ಉತ್ತರ ಎಂಬಂತೆ ಮಲೈಕಾ ಅರೋರಾ ಹೃದಯ ಛಿದ್ರವಾಗಿರುವ ಟೀ ಶರ್ಟ್ ತೊಟ್ಟು ಓಡಾಡುತ್ತಿರುವ ಫೋಟೋಗಳು ವೈರಲ್ ಆಗಿವೆ. ಅರ್ಜುನ್ ಕಪೂರ್ ಮಾತಿಗೆ ಹೃದಯಗಳು ಛಿದ್ರ ಛಿದ್ರವಾಗಿ ಹೋದವೇ ಎಂಬ ಗುಲ್ಲು ಬಾಲಿವುಡ್‌ನಲ್ಲಿ ಎದ್ದಿವೆ. 2016ರಲ್ಲಿ ಅರ್ಬಾಜ್ ಖಾನ್ ಅವರೊಂದಿಗೆ ವಿಚ್ಛೇದನ ಪಡೆದ ಬಳಿಕ ಅರ್ಜುನ್ ಕಪೂರ್ ಜತೆಗೆ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಇಬರಿಬ್ಬರೂ ಜತೆಯಾಗಿ ಓಡಾಡುತ್ತಾ ಗಾಸಿಪ್‍ಗೆ ಕಾರಣವಾಗಿದ್ದರು.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಮತ್ತೆ ಕನ್ನಡಕ್ಕೆ ಮರಳಿದ ಪವಿತ್ರಾ ಲೋಕೇಶ್!

Previous article

ನೆಟ್ಟಿಗರಿಗೆ ಬೋಲ್ಟ್ ಟೈಟ್ ಮಾಡಿದ ಮಹರ್ಷಿ ಮಡದಿ!

Next article

You may also like

Comments

Leave a reply

Your email address will not be published. Required fields are marked *