ಈಗಾಗಲೇ ಬಹಳಷ್ಟು ವಿಚಾರಗಳಿಂದ ಸುದ್ದಿಯಲ್ಲಿರುವ ಯುವರತ್ನ ಸಿನಿಮಾ ಬಳಗಕ್ಕೆ ಮತ್ತೊಬ್ಬ ಹೊಸ ಪ್ರತಿಭೆ ಪ್ರವೇಶವಾಗಿದೆ. ಕರ್ನಾಟಕದ ಮೊದಲ ಲೇಡಿ ಬಾಡಿ ಬಿಲ್ಡರ್ ಮಮತಾ ಸನತ್ ಕುಮಾರ್ ‘ಯುವರತ್ನ’ ಚಿತ್ರದಲ್ಲಿ ನಟಿಸುತ್ತಿರುವ ನವ ನಟಿ. ಪ್ರೊಫೆಷನಲ್ ಬಾಡಿ ಬಿಲ್ಡರ್ ಆಗಿರುವ ಮಮತಾ ಯುವರತ್ನದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆಯಲಿದ್ದಾರೆ.
ಸ್ಟ್ರೆಸ್ ನಿಂದ ಹೊರಬರುವ ಉದ್ದೇಶದಿಂದ ಜಿಮ್ ಸೇರಿ ನಂತರದ ದಿನಗಳಲ್ಲಿ ವೃತ್ತಿಪರ ದೇಹದಾರ್ಢ್ಯ ಪಟುವಾಗುವ ಮೂಲಕ ಬಾಡಿಯನ್ನು ಟೋನ್ ಮಾಡಿಕೊಂಡಿದ್ದ ಮಮತಾ, ಸೌತ್ ಇಂಡಿಯನ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಯುವರತ್ನ ಸಿನಿಮಾವನ್ನು ವಿಜಯ್ ಕಿರಂಗದೂರ್ ನಿರ್ಮಾಣ ಮಾಡಲಿದ್ದು, ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
Comments