ಉದಯ ಟಿವಿಯಲ್ಲಿ ಜನರ ಕಣ್ಣ್ಮನ ಸೆಳೆದ ಧಾರಾವಾಹಿ ಮಾನಸ ಸರೋವರ. ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಚಲನಚಿತ್ರದ ಮುಂದುವರೆದ ಭಾಗವಾಗಿ ಶುರುವಾದ ಕಥೆ, ಶ್ರೀನಾಥ್, ರಾಮಕೃಷ್ಣ, ಪದ್ಮಾ ವಾಸಂತಿಯರ ಮನತಟ್ಟುವ ಅಭಿನಯ, ವಿಶೇಷ ಕಥಾಹಂದರದಿಂದ ಈ ಧಾರಾವಾಹಿ ಆರಂಭದಿಂದ ಇಲ್ಲಿಯವರೆಗೂ ಕರುನಾಡಿಗರ ಪ್ರೀತಿಗೆ ಪಾತ್ರವಾಗಿದೆ.
ವಾಸಂತಿ ಮಗಳು ಸುನಿಧಿ, ಮಾನಸಿಕ ವೈದ್ಯೆ, ಡಾ.ಆನಂದ್ಗೆ ಚಿಕಿತ್ಸೆ ನೀಡುತ್ತಿರುತ್ತಾಳೆ. ಇವರನ್ನು ಈ ಸ್ಥಿತಿಗೆ ತಂದವರನ್ನು ದ್ವೇಷಿಸುತ್ತಿರುತ್ತಾಳೆ, ಆದರೆ ಅದು ತನ್ನ ತಾಯಿಯೇ ಎಂಬ ಸತ್ಯ ತಿಳಿದಿಲ್ಲ. ಈ ಸತ್ಯ ತಿಳಿದು ತನ್ನಿಂದೆಲ್ಲಿ ತನ್ನ ಮಗಳು ದೂರವಾಗುತ್ತಾಳೋ ಎಂಬ ಭೀತಿಯಲ್ಲಿ ಅದನ್ನು ಮುಚ್ಚಿಡುವ ಪ್ರಯತ್ನವನ್ನು ವಾಸಂತಿ ಮಾಡುತ್ತಿದ್ದಾಳೆ.
ಇನ್ನೊಂದೆಡೆ ಸುನಿಧಿ ಮನಸಾರೆ ಪ್ರೀತಿಸಿದ ಚಿಂತನ್ ಜೊತೆ ಒಂದಾಗಲು ನೂರಾರು ಅಡೆತಡೆಗಳು. ಸುನಿಧಿಯನ್ನು ಪ್ರೀತಿಸುವ ವಿಕ್ಕಿ, ಚಿಂತನ್ನ ಪ್ರೀತಿ ಪಡೆಯಲು ಹಾತೊರೆಯುತ್ತಿದ್ದ ಸುನಿಧಿ ತಂಗಿ ಶರಧಿ, ಇಬ್ಬರೂ ಒಂದಾಗಿ ಅವರಿಬ್ಬರನ್ನು ದೂರ ಮಾಡಲು ಹಾತೊರೆಯುತ್ತಿದ್ದರೆ, ಇವರಿಗೆ ಕೈಜೋಡಿಸುತ್ತಿರುವುದು, ಸುನಿಧಿಯನ್ನು ದ್ವೇಷಿಸುವ ಚಿಂತನ್ನ ತಾಯಿ ಸರೋಜ ದೇವಿ. ಹೀಗೆ ತಡೆಯೊಡ್ಡುವ ಹಲವಾರು ಕೈಗಳನ್ನು ದಾಟಿ ಈಗ ಚಿಂತನ್-ಸುನಿಧಿ ಮದುವೆಯಾಗುವ ಕಾಲ ಕೂಡಿಬಂದಿದೆ.
ಮಾನಸ ಸರೋವರ, ಈಗ ಯಶಸ್ವಿಯಾಗಿ 250 ಸಂಚಿಕೆಯತ್ತ ದಾಪುಗಾಲು ಹಾಕುತ್ತಿರಲು, ಅದರ ಸಂಭ್ರÀಮವನ್ನು ವಾಸಂತಿ-ಸಂತೋಷ್ 25ನೇ ವಿವಾಹ ವಾರ್ಷಿಕೋತ್ಸವದ ಮೂಲಕ ಆಚರಿಸುತ್ತಿದ್ದಾರೆ, ಅಂದೇ ಸುನಿಧಿ-ಚಿಂತನ್ರ ನಿಶ್ಚಿತಾರ್ಥವೂ ಇದೆ.
ಸುನಿಧಿ ತನ್ನ ನಿಶ್ಚಿತಾರ್ಥಕ್ಕೆ ತಪ್ಪದೇ ಬರಬೇಕು ಎಂದು ಡಾ.ಆನಂದ್ರನ್ನು ಆಹ್ವಾನಿಸಿದಾಗ ಸಂತೋಷದಿಂದ ಒಪ್ಪಿಕೊಳ್ಳುತ್ತಾನೆ. ವಿಜೃಂಭಣೆಯಿಂದ ಆಚರಿಸುವ ಸಡಗರದಲ್ಲಿ ಡಾ.ಆನಂದ್ ಬಂದರೇನಾಗಬಹುದೆಂಬ ಕುತೂಹಲದೊಂದಿಗೆ ಸಂಭ್ರಮಾಚರಣೆ ಸಾಗುತ್ತದೆ.
ಈ ವಿಶೇಷ ಕಂತುಗಳನ್ನು ಬಿಡದಿ ಬಳಿ ಇರುವ ಪ್ರಸಿದ್ದ ರೆಸಾರ್ಟ್, ಗಾರ್ಡನ್ ಏಶಿಯದÀಲ್ಲಿ ಅದ್ದೂರಿಯಾಗಿ ಝಗಮಗಿಸುವ ಸೆಟ್ನಲ್ಲಿ ಸತತ 5 ದಿನ ಶೂಟ್ ಮಾಡಲಾಯಿತು. ರಂಗುರಂಗಿನ ಉಡುಗೆಯಲ್ಲಿ ಎಲ್ಲಾ ನಟ-ನಟಿಯರು ಕಣ್ಸೆಳೆದರು. ವಿಶೇಷ ಅತಿಥಿಯಾಗಿ ಬಂದ ಖ್ಯಾತ ಕಿರುತೆರೆ ನಟಿ ವೈಷ್ಣವಿ ತಮ್ಮ ನೃತ್ಯದ ಮೂಲಕ ಕಾರ್ಯಕ್ರಮದ ರಂಗೇರಿಸಿದರು. ವಾಸಂತಿ- ಸಂತೋಷ್ ಮಾನಸ ಸರೋವರ ಸಿನೆಮಾದ ‘ಚಂದ ಚಂದ..’ ಹಾಡಿಗೆ ಮತ್ತೆ ಮುದ್ದಾಗಿ ಹೆಜ್ಜೆ ಹಾಕಿ ಆ ಸಿನೆಮಾದ ನೆನಪು ಮರುಕರಳಿಸಿದರು.
ಒಂದೆಡೆ ನಿಶ್ಚಿತಾರ್ಥದ ಸಂಭ್ರಮದಲ್ಲಿ ಸುನಿಧಿ-ಚಿಂತನ್ ಇದ್ದರೆ, ಅದನ್ನು ಭಂಗ ಮಾಡಲೆಂದು ನಿಂತ ಶರಧಿ-ವಿಕ್ಕಿ. ಇತ್ತ ಡಾ.ಆನಂದ್ ನಿಶ್ಚಿತಾರ್ಥಕ್ಕೆ ಹೊರಡುವ ತಯಾರಿಯಲ್ಲಿದ್ದರೆ ಅದನ್ನು ತಡೆದು ಸುನಿಧಿಗೆ ಸತ್ಯ ತಿಳಿಯುವುದನ್ನು ತಪ್ಪಿಸುವ ಆಲೋಚನೆಯಲ್ಲಿ ಚಿಂತನ್. ಡಾ. ಆನಂದ್ ನಿಶ್ಚಿತಾರ್ಥಕ್ಕೆ ಬರುವರೇ? ಬಂದರೆ ಸುನಿಧಿಗೆ ಆನಂದ್-ವಾಸಂತಿಯ ಹಳೆಯ ಸಂಬಂಧ ತಿಳಿಯುವುದೇ? ಸುನಿಧಿ-ಚಿಂತನ್ ನಿಶ್ಚಿತಾರ್ಥ ನಡೆಯುವುದೇ? ಈ ಎಲ್ಲಾ ಕುತೂಹಲಗಳನ್ನು 4ನೇ ತಾರೀಖಿನಿಂದ ಹೊತ್ತು ತರುತ್ತಿರುವ ವಿಜ್ರಂಭಣೆಯ ‘ಮಾನಸ ಸರೋವರ’ ಸಂಚಿಕೆಗಳನ್ನು ತಪ್ಪದೇ ನೋಡಿ ಸೋಮವಾರದಿಂದ ಶುಕ್ರವಾರ ರಾತ್ರಿ9.30
#
No Comment! Be the first one.