ಕುಷ್ವಂತ್ ಕಲ್ಕಟ್ಟೆ – ಪೂರ್ಣ ಪ್ರಮಾಣದಲ್ಲಿ ನಮ್ಮ ತಂಡದ ಭಾಗಿಯಾಗಿದ್ದಾರೆ. ಸದ್ಯ ಸಿನಿಬ಼ಜ್ʼನ ಕಾರ್ಯನಿರ್ವಾಹಕ ಸಂಪಾದಕರಾಗಿ ಕಾರ್ಯಾರಂಭ ಮಾಡಿದ್ದಾರೆ. ಶೃಂಗೇರಿಯ ಕಲ್ಕಟ್ಟೆಯವರಾದ ಕುಷ್ವಂತ್ ಜಾಗತಿಕ ಸಿನಿಮಾ ಕುರಿತಾಗಿ ಸಾಕಷ್ಟು ಓದಿಕೊಂಡಿದ್ದಾರೆ. ಜೊತೆಗೆ ಚಲನಚಿತ್ರಗಳನ್ನು ಭಿನ್ನ ನೋಟದಲ್ಲಿ ವಿಮರ್ಶೆ ಮಾಡುತ್ತಾರೆ. ಇನ್ನು ಮುಂದೆ Cinibuzzನಲ್ಲಿ ಇವರ ವಿಮರ್ಶೆ, ಬರಹಗಳು ಪ್ರಕಟಗೊಳ್ಳಲಿವೆ. ಹಾಗೆಯೇ ಕುಷ್ವಂತ್ ನಡೆಸಿಕೊಡುವ ವಿಡಿಯೋ ಸಂದರ್ಶನಗಳು ಕೂಡಾ ಪ್ರಸಾರವಾಗಲಿದೆ…
- ಸಂ
ಕನ್ನಡದಲ್ಲಿ ಪ್ರೇತಾತ್ಮಗಳ ಕಥೆಗಳು ಹೊಸದೇನಲ್ಲ. ಕಪ್ಪು ಬಿಳುಪು ಕಾಲದಿಂದ ಹಿಡಿದು ಜನಪ್ರಿಯ ಚಿತ್ರ ಅಪ್ತಮಿತ್ರ ಸೇರಿದಂತೆ ಹಲವು ಸಿನಿಮಾಗಳು ತೆರೆಗೆ ಬಂದಿವೆ. ಈಗ ಹೆಚ್ಚೂ ಕಮ್ಮಿ ಆಪ್ತಮಿತ್ರ ಫ್ಲೇವರ್ ಹೊಂದಿರುವ ಚಿತ್ರ ಮನಸ್ಮಿತ ತೆರೆಗೆ ಬಂದಿದೆ.
ಚಿತ್ರದಲ್ಲಿ ಸಾನಿಯಳ (ನಾಯಕಿ) ತಂದೆ – ತಾಯಿ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾರೆ. ಅನಾಥಳಾದ ಸಾನಿಯಾಳನ್ನು ತನ್ನ ಕುಟುಂಬದ ಆಪ್ತರಾದ ಪಂಚಾಕ್ಷರಿ ಕುಟುಂಬದವರು ತಮ್ಮ ಮಗಳಂತೆ ನೋಡಿಕೊಳ್ಳುತ್ತಾರೆ. ತಮ್ಮ ಮಗನಿಗಿಂತ ತುಸು ಹೆಚ್ಚೇ ಪ್ರೀತಿ ಕೊಟ್ಟು, ಈಕೆಯ ಮೇಲೆ ಕಾಳಜಿ ಇಟ್ಟಿರುತ್ತಾರೆ. ಇದೇ ಸಂದರ್ಭದಲ್ಲಿ ಅಕ್ಷು (ನಾಯಕ) ತನ್ನ ಮನೆಯಲ್ಲಿರುವ ಸಾನಿಯ ಮೇಲೆ ಬಾಲ್ಯದಲ್ಲಿಯೇ ಪ್ರೀತಿ ಇಟ್ಟುಕೊಂಡಿರುತ್ತಾನೆ. ಇವಳೇ ನನ್ನ ಭವಿಷ್ಯದ ಸಂಗಾತಿ ಎಂದು ನಂಬಿರುತ್ತಾನೆ. ಸಿನಿಮಾದ ಮೊದಲ ಭಾಗವಿಡೀ ಇದೊಂದು ಸಣ್ಣ ಎಳೆ ಎಳೆದಾಡುತ್ತದೆ.
ಇಷ್ಟೇನಾ ಸಿನಿಮಾ ಅಂದುಕೊಳ್ಳುವಷ್ಟರಲ್ಲಿ ದ್ವಿತೀಯಾರ್ಧ ಬೇರೆ ದಿಕ್ಕಿಗೆ ಹೊರಳಿಕೊಳ್ಳುತ್ತದೆ. ಊಹಿಸಲು ಸಾಧ್ಯವಾಗದಂತಹ ಒಂದಷ್ಟು ತಿರುವುಗಳು ಎದುರಾಗುತ್ತವೆ. ಪಂಚಾಕ್ಷರಿ ವಂಶವೆಂದರೆ ಸಂಗೀತದ ಕ್ಷೇತ್ರದಲ್ಲಿ ಹೆಸರು ಮಾಡಿದ ಹೆಸರಾಂತ ಕುಟುಂಬ. ಇಂಥ ಫ್ಯಾಮಿಲಿಯ ಹಿರಿಯ ಪಂಚಾಕ್ಷರಿ ಬಳಿ (ಅತುಲ್ ಕುಲಕರ್ಣಿ) ಸಂಗೀತ ಕಲಿಯಲು ಬರುವ ಚಂದ್ರಸ್ಮಿತ ಬರುತ್ತಾಳೆ (ಪಲ್ಲವಿ ಪುರೋಹಿತ್). ಈಕೆ ಸಂಗೀತ, ಕಲೆಯ ಕಲಿಕೆಯಲ್ಲಿ ತೊಡಗಿದ ರೀತಿಯನ್ನು ನೋಡಿ ಗುರು ಪಂಚಾಕ್ಷರಿ ಈಕೆಗೆ ಮನೋಸೋಲುತ್ತಾರೆ. ತನ್ನ ಶಿಷ್ಯೆ ಎಂಬುದನ್ನೂ ಮರೆತು ಜೊತೆಯಾಗುತ್ತಾರೆ.
ತನ್ನ ತಪ್ಪಿನ ಅರಿವಾದರೂ ಸ್ಮಿತಾ ಮತ್ತು ಪಂಚಾಕ್ಷರಿ ಗುರುಗಳು ತಮ್ಮ ಸಂಬಂಧಗಳನ್ನು ಇನಷ್ಟು ಗಟ್ಟಿ ಮಾಡಿಕೊಳ್ಳುತ್ತಾರೆ. ಇದನ್ನೆಲ್ಲ ಗಮನಿಸಿದ ಪಂಚಾಕ್ಷರಿಯ ಅರ್ಚಕ ಸ್ನೇಹಿತ ಸ್ಮಿತಾಳನ್ನು ತಾನೂ ಒಮ್ಮೆ ಅನುಭವಿಸಬೇಕೆಂದು ಹೊಂಚು ಹಾಕುತ್ತಾನೆ. ಆ ನಂತರ ಸ್ಮಿತಾ ಯಾಕೆ ಸತ್ತಳು? ಇದರ ಅಪವಾದ ಯಾರ ಮೇಲೆ ಬೀಳುತ್ತದೆ? ಇದರಿಂದ ಮುಂದೆ ಆಗುವ ಎಫೆಕ್ಟ್ ಏನು? ಎನ್ನುವುದನ್ನು ಸಿನಿಮಾ ನೋಡಿಏ ತಿಳಿದುಕೊಳ್ಳಬೇಕು.
ಸತವತ್ತಾದ ಪ್ರೇಮ ಪ್ರಸಂಗದಂತೆ ಇದ್ದ ಕತೆ ಪ್ರೇತ, ಭೂತದ ಕಡೆ ಹೊರಳುವುದು ಹೇಗೆ ಎನ್ನುವುದು ಕೂಡಾ ಕುತೂಹಲ ಹುಟ್ಟಿಸುವ ಅಂಶ.
ಅತುಲ್ ಕುಲಕರ್ಣಿ ಈ ಚಿತ್ರದ ಪ್ರಮುಖ ಆಕರ್ಷಣೆ. ಚಿತ್ರದಲ್ಲಿ ನಾಯಕಿಯಾಗಿರುವ ಸಂಜನಾ ದಾಸ್ ತನ್ನ ಅಭಿನಯದ ಮೂಲಕ ಚಿತ್ರರಂಗದಲ್ಲಿ ನೆಲೆಯೂರುವ ಲಕ್ಷಣಗಳಿವೆ. ನಾಯಕ ಚರಣ್ ವಿ.ಎಸ್. ಹೀರೋ ಗತ್ತನ್ನು ಇನ್ನಷ್ಟು ಮೈಗೂಡಿಸಿಕೊಳ್ಳಬೇಕು. ಚಿತ್ರಕಥೆ ಮೊದಲಾರ್ಧದಲ್ಲಿ ಹಿಡಿತಕ್ಕೆ ಸಿಗುವುದಿಲ್ಲ ಎರಡನೇ ಭಾಗದಲ್ಲಿ ಕ್ಯೂರಿಯಾಸಿಟಿಯನ್ನು ಹೆಚ್ಚಿಸುತ್ತದೆ. ಛಾಯಾಗ್ರಹಣ ಗುಣಟ್ಟದಿಂದ ಮೂಡಿಬಂದ್ದಿದ್ದು ಇಡೀ ಸಿನೆಮಾ ತನ್ನ ಸಂಗೀತದ ಲಹರಿಯಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಕರ್ನಾಟಕದ ಎಲ್ಲಭಾಗಗಳ ಸಾಂಸ್ಕೃತಿಕ ಒಳಹುಗಳನ್ನು ಕಥೆಯಲ್ಲಿ ಸೇರಿಸಿರುವ ನಿರ್ದೇಶಕ ಅಪ್ಪಣ್ಣ ಸಂತೋಷ್ ನಿಜಕ್ಕೂ ಇಂಟಲಿಜೆಂಟ್. ಬೇರೆ ಬೇರೆ ಭಾಗದ ಬಾಷೆ ಮತ್ತು ಕಲೆಗಳನ್ನು ಇದರಲ್ಲಿ ತಂದಿದ್ದು ಸಬ್ಜೆಕ್ಟಿಗೆ ಪೂರಕವಾಗಿದೆ.
ಕುಷ್ವಂತ್ ಕಲ್ಕಟ್ಟೆ
Comments