ಆತ್ಮ, ಭೂತ, ಬಂಗಲೆ, ಭಯ ಇಂಥವೇ ಎಲಿಮೆಂಟುಗಳನ್ನಿಟ್ಟುಕೊಂಡು ಸಾಕಷ್ಟು ಸಿನಿಮಾಗಳು ಬಂದಿವೆ. ಆದರೆ ಸಿನಿಮಾ ಶುರುವಿನಿಂದ ಹಿಡಿದು  ಕೊನೆಯ ಫ್ರೇಮಿನ ವರೆಗೂ ನಗಿಸುವ ಚಿತ್ರವೊಂದು ರಿಲೀಸಾಗಿದೆ. ಅದು ಮನೆ ಮಾರಾಟಕ್ಕಿದೆ!

ಎಸ್.ವಿ. ಬಾಬು ನಿರ್ಮಾಣದ ಸಿನಿಮಾ ಅಂದಮೇಲೆ ಅದರ ಕುರಿತಾಗಿ ನಿರೀಕ್ಷೆಗಳು ಇದ್ದೇಇರುತ್ತದೆ. ಇದರ ಜೊತೆಗೆ ಮಂಜು ಸ್ವರಾಜ್ ನಿರ್ದೇಶ ಕೂಡಾ ಈ ಚಿತ್ರಕ್ಕಿದೆ. ಕಾಮಿಡಿ ಸಿನಿಮಾವೊಂದನ್ನು ರೂಪಿಸುವುದು ಕಷ್ಟದ ಕೆಲಸ. ಒಂಚೂರು ಆಚೀಚೆ ಆದರೂ ಜನ ನಗೋದಿಲ್ಲ. ಆದರೆ ಮಂಜು ಸ್ವರಾಜ್‌ಗೆ ಸಮರ್ಥ ಕಲಾವಿದರನ್ನು ಬಳಸಿಕೊಂಡು ಪ್ರತಿಯೊಬ್ಬರೂ ನಗುವಂತೆ ಸಿನಿಮಾ ಮಾಡೋದು ಕರಗತವಾಗಿದೆ.

ಸದ್ಯ ಕನ್ನಡದಲ್ಲಿರುವ ಕಾಮಿಡಿ ಸ್ಟಾರ್ಗಳಷ್ಟೂ ಜನ ಈ ಮನೆಯೊಳಗೆ ಸೇರಿದ್ದಾರೆ. ಒಂದು ಮನೆ, ಅದರಲ್ಲಿ ಅಗೋಚರ ಶಕ್ತಿಗಳ ಉಪಟಳ. ಈ ಮನೆಯನ್ನು ಕಬಳಿಸಲು ಕೇಡುಗರು ರೂಪಿಸುವ ಸಂಚು. ಈ ಮನೆಗೂ ಈ ನಾಲ್ಕು ಮಂದಿಗೂ ಏನು ಸಂಬಂಧ? ಯಾವ ಕಾರಣಕ್ಕೆ ಮನೆಯನ್ನು ಮಾರಾಟಕ್ಕಿಟ್ಟಿದ್ದಾರೆ? ಕೊಳ್ಳಲು ಬರುವವರು ಭೂತಗಳಾ ಅಥವಾ ಮಾರಟಕ್ಕಿಟ್ಟವರೇ ದೆವ್ವಗಳಾ? ಹೀಗೆ ಯಾವುದನ್ನೂ ಒಂದೇ ಏಟಿಗೆ ನಿಖರವಾಗಿ ಹೇಳಲು ಸಾಧ್ಯವಾಗದಂತೆ, ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುವ ಹಾಗೆ, ಜೊತೆಗೆ ಸೀಟಿನಲ್ಲಿ ಕೂತವರು ಹೊಟ್ಟೆಯನ್ನು ಬಿಗಿಯಾಗಿ ಹಿಡಿದುಕೊಳ್ಳುವ ಮಟ್ಟಿಗೆ ಇಲ್ಲಿ ಕಾಮಿಡಿ ವರ್ಕೌಟ್ ಆಗಿದೆ. ದ್ವಿತೀಯಾರ್ಧವಂತೂ ಸುಸ್ತೆದ್ದುಹೋಗುವಷ್ಟು ನಗುವಿನಿಂದ ಕೂಡಿದೆ.

ಶಿಶಿರ ಸಿನಿಮಾದಲ್ಲೇ ಮನೆಯೊಳಗೇ ಮ್ಯಾಜಿಕ್ ಮಾಡಿದ್ದವರು ಛಾಯಾಗ್ರಾಹಕ ಸುರೇಶ್ ಬಾಬು ಮತ್ತು ಮಂಜು ಸ್ವರಾಜ್. ಈಗ ಮನೆ ಮಾರಾಟಕ್ಕಿದೆ ಚಿತ್ರದ ಹೆಚ್ಚುಭಾಗ ಮನೆಯ ಸುತ್ತಮುತ್ತಲೇ ನಡೆದರೂ ಅದನ್ನು ಕ್ರಿಯಾಶೀಲವಾಗಿ ಸೆರೆ ಹಿಡಿದಿದ್ದಾರೆ ಸುರೇಶ್ ಬಾಬು. ಅಭಿಮನ್  ರಾಯ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ಕೂಡಾ ಪ್ರಮುಖ ಪಾತ್ರ ವಹಿಸಿದೆ.

ಗೊಂದಲ ಸೃಷ್ಟಿಸುತ್ತಲೇ ಹಂತ ಹಂತವಾಗಿ ಕತೆಯನ್ನು ಬಿಡಿಸುವ ತಂತ್ರಗಾರಿಗೆ ಮನೆ ಮಾರಾಟಕ್ಕಿದೆ ಚಿತ್ರದಲ್ಲಿ ವರ್ಕೌಟ್ ಆಗಿದೆ. ಕಾಮಿಡಿ ಜಾನರಿನ ಸಿನಿಮಾವನ್ನು ಮಂಜು ಸ್ವರಾಜ್ ಸಲೀಸಾಗಿ ನಿಭಾಯಿಸಬಲ್ಲರು ಅನ್ನೋದು ಈ ಚಿತ್ರದಲ್ಲಿ ಗೊತ್ತಾಗಿದೆ. ರವಿಶಂಕರ್ ಗೌಡ, ಸಾಧು ಕೋಕಿಲ,  ಕುರಿ ಪ್ರತಾಪ ಮತ್ತು ಚಿಕ್ಕಣ್ಣ ಬಿಡಿಬಿಡಿಯಾಗಿ ಸಿನಿಮಾ ಮಾಡಿದಾಗಲೇ ನಗಿಸುತ್ತಾರೆ. ಈ ಸಿನಿಮಾದಲ್ಲಿ ಎಲ್ಲರೂ ಒಟ್ಟೊಟ್ಟಿಗೇ ಪಾತ್ರ ನಿರ್ವಹಿಸಿರುವುದು ನೋಡುಗರ ಪಾಲಿಗೆ ಹಬ್ಬವಾಗಿದೆ. ಒತ್ತಡದ ಬದುಕಿನಲ್ಲಿ ಒದ್ದಾಡುತ್ತಿರುವವರು, ನಗುತ್ತಾ ನಿರಾಳರಾಗ ಬಯಸುವವರು ಮನೆ ಮಾರಾಟಕ್ಕಿದೆ ಸಿನಿಮಾವನ್ನೂ ಮರೆಯದೇ ನೋಡಿ!

CG ARUN

ಎಲ್ಲರೂ ನೋಡಲೇಬೇಕಿರುವ ಸಿನಿಮಾ…

Previous article

ಹೆಣ್ಣು, ಹಣ, ಗನ್ನು, ಮನೆ!

Next article

You may also like

Comments

Leave a reply

Your email address will not be published. Required fields are marked *