ಸ್ಯಾಂಡಲ್ ವುಡ್ ನ ಕೆಲವು ಹಾಸ್ಯನಟರನ್ನೊಳಗೊಂಡು ತಯಾರಾಗುತ್ತಿರುವ ಸಿನಿಮಾ ಮನೆ ಮಾರಾಟಕ್ಕಿದೆ. ಈ ಚಿತ್ರದಲ್ಲಿ ಶೃತಿ ಹರಿಹರನ್ ಸಹ ಅಭಿನಯಿಸುತ್ತಿದ್ದು, ಓನರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಸಿನಿಮಾವನ್ನು ಮಂಜು ಸ್ವರಾಜ್ ನಿರ್ದೇಶನ ಮಾಡಿದ್ದಾರೆ.

ಚಿತ್ರದ ಶೂಟಿಂಗ್ ಈಗಾಗಲೇ ಮುಗಿದಿದ್ದು, ಕೆಲದಿನಗಳ ಹಿಂದಷ್ಟೇ ಪೋಸ್ಟರ್ ಸಹ ಬಿಡುಗಡೆ ಮಾಡಿಕೊಂಡಿತ್ತು. ಇದೀಗ ಚಿತ್ರದ ಆಡಿಯೋವನ್ನು ಬಿಡುಗಡೆಗೊಳಿಸಲು ನಿರ್ಧರಿಸಿರುವ ಚಿತ್ರತಂಡ ಅದರ ತಯಾರಿಯಲ್ಲಿಯೇ ಬ್ಯುಸಿಯಾಗಿದೆ. ಇನ್ನು ಚಿತ್ರದ ಮೊದಲ ಟ್ರ್ಯಾಂಕ್ ಈ ವಾರಾಂತ್ಯದಲ್ಲಿ ಬಿಡುಗಡೆಗೊಳ್ಳಲಿದ್ದು, ಡೋಂಟ್ ವರಿ ಬೀ ಹ್ಯಾಪಿ ಎಂಬ ಸಾಲಿನಿಂದ ಹಾಡು ಪ್ರಾರಂಭವಾಗುತ್ತದೆಯಂತೆ. ಇದರಲ್ಲಿ ಶೃತಿ, ಕಾರುಣ್ಯ ರಾಮ್, ಚಿಕ್ಕಣ್ಣ, ಸಾಧುಕೋಕಿಲಾ, ರವಿಶಂಕರ್, ಕುರಿಪ್ರತಾಪ್ ಕಾಣಿಸಿಕೊಂಡಿದ್ದಾರೆ. ಇನ್ನು ಈ ಹಾಡಿಗೆ ಅಭಿಮಾನ್ ರಾಯ್ ಸಂಗೀತ ಸಂಯೋಜನೆ ಮಾಡಿದ್ದು, ವಿಜೇತ ವಿಶ್ವನಾಥನ್ ಹಾಡಿದ್ದಾರೆ. ಈಗಾಗಲೇ ಚಿತ್ರದ ಪ್ರಥಮ ಪ್ರತಿಯನ್ನು ಸಿದ್ಧಪಡಿಸಿ ಸೆನ್ಸಾರ್ ಮಂಡಳಿಗೆ ಕಳುಹಿಸಲಾಗಿದ್ದು, ಅಧಿಕೃತ ದಿನಾಂಕ ಸದ್ಯದಲ್ಲಿಯೇ ಪ್ರಕಟಿಸಲಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ.

CG ARUN

ತೃತೀಯ ಲಿಂಗಿ ಸಿನಿಮಾ ಮೂರನೇ ಕಣ್ಣು!

Previous article

ಕುರುಕ್ಷೇತ್ರ ರಿಲೀಸ್ ಇನ್ನೂ ಲೇಟ್!

Next article

You may also like

Comments

Leave a reply

Your email address will not be published. Required fields are marked *