ಹೆಸರಾಂತ ನಿರ್ದೇಶಕ ಮಣಿ ರತ್ನ ಅವರ ಕನಸಿನ ಕೂಸು ಪೊನ್ನಿಯಿನ್ ಸೆಲ್ವಮ್ ಸಿನಿಮಾವು 2016ರಲ್ಲಿ ಪ್ರಾರಂಭವಾದಂದಿನಿಂದ ಫ್ರೀ ಪ್ರೊಡಕ್ಷನ್ ನಿಂದ ಹಿಡಿದು ಪ್ರತಿ ಹಂತದಲ್ಲಿಯೂ ಬಹಳಷ್ಟು ಬದಲಾವಣೆಗಳು ಆಗುತ್ತಲೇ ಬರುತ್ತಿದೆ. ಈ ಮೊದಲು ಮಹೇಶ್ ಬಾಬು ಮತ್ತು ವಿಜಯ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿರುವುದು ಘೋಷಣೆಯಾಗಿತ್ತು. ಆದರೆ ಚೆಕ್ಕಾ ಚಿವಂತಾ ವಾನಮ್ ನ ಬ್ಲಾಕ್ ಬಸ್ಟರ್ ಹಿಟ್ ನ ನಂತರ ನಿರ್ದೇಶಕರು ಜಯಂ ರವಿ, ಕೀರ್ತಿ ಸುರೇಶ್, ವಿಕ್ರಮ್, ಕಾರ್ತಿ, ಐಶ್ವರ್ಯಾ ರೈ ಬಚ್ಚನ್, ಮೋಹನ್ ಬಾಬು ಮತ್ತು ಅಮಿತಾಬ್ ಬಚ್ಚನ್ ಜೊತೆಯಲ್ಲಿ ಮತ್ತೊಮ್ಮೆ ಹೊಸ ಸಿನಿಮಾ ಮಾಡುವ ಯೋಜನೆಯಲ್ಲಿದ್ದರು.
ಬಹು ದಿನಗಳ ನಂತರ ಪಿನ್ನಿಯನ್ ಸೆಲ್ವಂ ನಿರ್ದೇಶಕರು ಜಂಟಿ ನಿರ್ಮಾಣದಲ್ಲಿ ನಿರ್ಮಿಸಲು ನಿರ್ಧರಿಸಿದ್ದು, ಮದ್ರಾಸ್ ಟಾಕೀಸ್ ಮತ್ತು ಲೈಕಾ ಪ್ರೊಡಕ್ಷನ್ ನಲ್ಲಿ ಬಿಗ್ ಬಜೆಟ್ ಸಿನಿಮಾ ಪೊನ್ನಿಯನ್ ಸೆಲ್ವಂ ಸಿನಿಮಾ ಮೂಡಿಬರಲಿದೆ. ಮಣಿರತ್ನ ಈಗಾಗಲೇ ರಿಲಯನ್ಸ್ ಎಂಟರ್ ಟೈನ್ ಮೆಂಟ್ ನಲ್ಲಿ ಮಾತುಕತೆ ನಡೆಸುತ್ತಿದ್ದು, ಸದ್ಯದಲ್ಲೇ ಮತ್ತೊಂದು ವಿಚಾರವೂ ಅನೌನ್ಸ್ ಆಗಲಿದೆ.
No Comment! Be the first one.