ಸಂಯುಕ್ತ-೨ ಮತ್ತು ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರಗಳನ್ನು ನಿರ್ಮಿಸಿ, ನಟಿಸಿ ಸದ್ಯ ೦% ಲವ್ ಸಿನಿಮಾದ ನಾಯಕನಟರೂ ಆಗಿರುವವರು ಅರ್ಜುನ್ ಮಂಜುನಾಥ್. ಬಹುಶಃ ಈಗ ಮಂಜುನಾಥ್ ಅವರು ಇರುವ ರೀತಿಯನ್ನು ಮಾತ್ರವೇ ಕಂಡವರು ಅವರು ನಡೆದು ಬಂದ ಕಡುಕಷ್ಟದ ಹಾದಿಯ ಕಥೆ ಹೇಳಿದರೆ ನಂಬಲು ಕಷ್ಟವಾಗ ಬಹುದೇನೋ. ಅಂಥಾ ಸಂಕಷ್ಟಗಳನ್ನೇ ಶಕ್ತಿಯಾಗಿಸಿಕೊಂಡು ಯಶಸ್ವೀ ಉದ್ಯಮಿಯಾಗಿ, ಚಲನಚಿತ್ರ ನಿರ್ಮಾಪಕನಾಗಿ, ಯಶಸ್ವೀ ನಟನಾಗಿ ನೆಲೆ ನಿಂತಿರುವ ಮಂಜುನಾಥ್ ಪ್ರಾಮಾಣಿಕವಾದ ಕನಸಿಟ್ಟುಕೊಂಡಿರುವ ಜನನಾಯಕರೂ ಹೌದು. ಹಾಗಂತ ಇವರು ಬರೀ ಮಾತಿಗೇ ಸೀಮಿತವಾಗಿಲ್ಲ. ವ್ಯಕ್ತಿಯೋರ್ವ ಮನಸು ಮಾಡಿದರೆ ತಾನೇ ಒಂದು ಶಕ್ತಿಯಾಗಿ ಸಮಾಜವನ್ನು ಮಾದರಿಯಾಗಿ ಕಟ್ಟಿ ನಿಲ್ಲಿಸಬಹುದೆಂಬುದನ್ನು ಅವರು ಕಾರ್ಯ ರೂಪದಲ್ಲಿಯೇ ಮಾಡಿ ತೋರಿಸಿದ್ದಾರೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಗೆ ಒಳಪಡುವ ಚಿಕ್ಕನಹಳ್ಳಿ ಗ್ರಾಮಪಂಚಾಯ್ತಿಯ ಊರುಗಳನ್ನು ಮಂಜುನಾಥ್ ಅವರು ರೂಪಿಸಿರುವ ರೀತಿ ಇಡೀ ದೇಶಕ್ಕೇ ಮಾದರಿಯಂತಿದೆ. ಸಮಾಜ ಸೇವೆ ಅನ್ನೋದನ್ನು ಬರೀ ತಮ್ಮ ಕ್ಷೇತ್ರಕ್ಕಷ್ಟೇ ಸೀಮಿತಗೊಳಿಸಿಕೊಳ್ಳದೆ ಕಷ್ಟದಲ್ಲಿರೋ ಪ್ರತಿಯೊಬ್ಬರ  ಸಂಕಟಕ್ಕೂ ಮಿಡಿಯುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ತೆರಳಿ ಸದ್ಯ ನೆರೆ ಹಾವಳಿಯಿಂದ ನೊಂದಿರುವ ಜನರಿಗೆ ಸರಿಸುಮಾರು ಹನ್ನೆರಡು ಟನ್ ದಿನಸಿಗಳನ್ನು ಹಂಚುತ್ತಿದ್ದಾರೆ. ಚಿಕ್ಕನಹಳ್ಳಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾದ ಮಹದೇವಮ್ಮ, ಉಪಾಧ್ಯಕ್ಷೆ ಜಯಮ್ಮ, ಪಿ.ಡಿ.ಓ. ನೀಲಮ್ಮ ಅಂದಪ್ಪಾಡಿ, ಕಾರ್ಯದರ್ಶಿ ಶಿವಣ್ಣ ಮುಂತಾದವರೊಂದಿಗೆ ಸ್ವತಃ ಮಂಜುನಾಥ್ ಅವರು ಬೆಳಗಾವಿಗೆ ತೆರಳಿ ಈ ಜನಸ್ನೇಹಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಅಂದಹಾಗೆ, ಮಂಜುನಾಥ ಗೌಡರು ಇದೀಗ ಯಶಸ್ವೀ ಉದ್ಯಮಿಯಾಗಿದ್ದರೂ ಕೂಡಾ ಅಪಾರವಾದ ಸಾಮಾಜಿಕ ಕಳಕಳಿಯನ್ನು ಮರೆಯದೇ ಮುಂದುವರೆಯುತ್ತಿದ್ದಾರೆ. ತಾವೂ ಕೂಡಾ ಅತ್ಯಂತ ಕಷ್ಟದ ದಿನಗಳಿಂದ ಮೇಲೆದ್ದು ಬಂದಿರುವುದರಿಂದ ಜನರಿಗೆ ಸಹಾಯವಾಗುವಂಥಾ ಕೆಲಸ ಕಾರ್ಯಗಳನ್ನು ಮಾಡುವ ಉದ್ದೇಶದಿಂದಲೇ ರಾಜಕೀಯ ರಂಗವನ್ನು ಆಯ್ಕೆ ಮಾಡಿಕೊಂಡಿದ್ದರು. ಇವರಿಗಿರುವ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿಗೆ ಬೇರೆ ಯಾರೇ ಆಗಪಿದ್ದರೂ ನೇರವಾಗಿ ಶಾಸಕನಾಗುವತ್ತ ಗಮನ ಹರಿಸುತ್ತಿದ್ದರು. ಆದರೆ ದೇಶವೊಂದು ಅಭಿವೃದ್ಧಿಯ ಪಥದಲ್ಲಿ ಮುಂದುವರೆಯಬೇಕಾದರೆ ಗ್ರಾಮಗಳ ಉದ್ಧಾರವಾಗಬೇಕೆಂಬ ಧ್ಯೇಯ ವಾಕ್ಯದಲ್ಲಿ ನಂಬಿಕೆ ಇರಿಸಿರುವ ಮಂಜುನಾಥ ಗೌಡರು ಚಿಕ್ಕನಹಳ್ಳಿ ಗ್ರಾಮಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿ ಗೆಲುವು ಕಂಡಿದ್ದರು. ಗ್ರಾಮಪಂಚಾಯ್ತಿ ಸದಸ್ಯರಾಗಿದ್ದುಕೊಂಡೇ ಅವರೂ ಇಡೀ ಗ್ರಾಮವನ್ನು ರೂಪಿಸಿದ ರೀತಿ ಎಂಥವರೂ ಬೆರಗಾಗುವಂತಿದೆ.
ಚಿಕ್ಕನಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಗೆ ಬರುವ ದೊಡ್ಡೇರಿ ಗ್ರಾಮ ಅತೀ ಹೆಚ್ಚು ಮತದಾರರನ್ನು ಹೊಂದಿದೆ. ಆದರೆ ಈ ಹಿಂದೆ ಇಲ್ಲಿನ ಗ್ರಾಮ ಪಂಚಾಯ್ತಿ ರಾಜಕಾರಣವೆಂಬುದು ಇಲ್ಲಿನ ಜನರನ್ನು ಮತಕ್ಕಾಗಿ ಮಾತ್ರವೇ ಬಳಸಿಕೊಳ್ಳುತ್ತಾ ಬಂದಿತ್ತು. ಆದ್ದರಿಂದಲೇ ಈ ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ, ನೈರ್ಮಲ್ಯೀಕರಣ, ವಿದ್ಯುತ್ ಸೇರಿದಂತೆ ಸಮಸ್ಯೆಗಳು ತಾಂಡವವಾಡುತ್ತಿದ್ದವು. ಇಂಥಾ ಗ್ರಾಮದ ಪಂಚಾಯ್ತಿ ಸದಸ್ಯರಾದ ಮಂಜುನಾಥ ಗೌಡರು ಇದೀಗ ಇಡೀ ಗ್ರಾಮವನ್ನು ಸುಸಜ್ಜಿತವಾದ ರಸ್ತೆ, ಶಿಸ್ತು ಸೇರಿದಂತೆ ವಿದೇಶಿ ಮಾದರಿಯಲ್ಲಿ ಅಭಿವೃದ್ಧಿಗೊಳಿಸಿದ್ದಾರೆ.
ಈಗ ನೆರೆ ಸಂತ್ರಸ್ತರ ನೆರವಿಗೂ ಮಂಜುನಾಥ್ ಅವರು ಧಾವಿಸಿರುವುದು ನಿಜಕ್ಕೂ ಮೆಚ್ಚಬೇಕಾದ ವಿಚಾರ.
CG ARUN

ಬಿಚ್ಚಿ ಕುಣಿದಳು ಶ್ರೇಯಾ-ವಿಡಿಯೋ ಮಾಡಿದ ಪತಿರಾಯ!

Previous article

ಬಂದೇಬಿಟ್ಟ ಪೈಲ್ವಾನ್

Next article

You may also like

Comments

Leave a reply

Your email address will not be published. Required fields are marked *