ವರ್ಷಗಳ ಹಿಂದೆ ತೆರೆ ಕಂಡಿದ್ದ ಸಂಯುಕ್ತ-2 ಎಂ ಚಿತ್ರವನ್ನು ನಿರ್ಮಾಣ ಮಾಡಿದ್ದವರು ಡಾ. ಡಿ ಎಸ್ ಮಂಜುನಾಥ್. ಈ ಸಿನಿಮಾದಲ್ಲಿ ಯಾರೂ ನಿರೀಕ್ಷಿಸದ ಪಾತ್ರವೊಂದರಲ್ಲಿ ನಟನೆಯನ್ನೂ ಮಾಡಿದ್ದರು. ಇದೀಗ ತೆರೆ ಕಂಡು ಯಶಸ್ವೀ ಪ್ರದರ್ಶನ ಕಾಣುತ್ತಿರುವ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ನಿರ್ಮಾಪಕರೂ ಇವರೇ. ಈ ಸಿನಿಮಾದಲ್ಲೂ ವಿಶೇಷ ಪಾತ್ರವೊಂದನ್ನು ನಿಭಾಯಿಸಿದ್ದರು. ಇಂಥಾ ಮಂಜುನಾಥ್ ಅವರು ಸದ್ದಿಲ್ಲದೆ ಚಿತ್ರವೊಂದರಲ್ಲಿ ಹೀರೋ ಆಗಿದ್ದಾರಾ? ಕೆಲ ದಿನಗಳಿಂದ ಅಲ್ಲಿಲ್ಲಿ ಹರಿದಾಡುತ್ತಿರೋ ಸುದ್ದಿಯೊಂದು ಇಂಥಾ ಪ್ರಶ್ನೆಯನ್ನ ಹುಟ್ಟಿಸಿಬಿಟ್ಟಿದೆ!
ಈ ಬಗ್ಗೆ ಹುಡುಕುತ್ತಾ ಹೋದರೆ ಈಗ ಹರಡಿಕೊಂಡಿರೋ ಸುದ್ದಿ ನಿಜವೆಂಬ ವಿವವರಗಳೇ ಸಿಗುತ್ತವೆ. ಆ ಪ್ರಕಾರವಾಗಿ ಹೇಳೋದಾದರೆ ಮಂಜುನಾಥ್ ಅವರು ಸದರಿ ಚಿತ್ರದ ಮೂಲಕ ಪೂರ್ಣಪ್ರಮಾಣದ ಹೀರೋ ಆಗಿದ್ದಾರೆ. ಈ ಸಿನಿಮಾಗೆ ಝೀರೋ ಪರ್ಸೆಂಟ್ ಲವ್ ಅಂತಲೂ ಹೆಸರಿಡಲಾಗಿದೆಯಂತೆ.ಇನ್ನೂ ವಿಶೇಷವೆಂದರೆ, ಈಗಾಗಲೇ ಈ ಚಿತ್ರದ ಶೇಖಡಾ ಐವತ್ತರಷ್ಟು ಚಿತ್ರೀಕರಣ ಮುಗಿದು ಹೋಗಿದೆ ಅನ್ನೋ ವಿವರಗಳೂ ಸಿಗುತ್ತವೆ. ಬೆಂಗಳೂರಿನಲ್ಲಿಯೇ ಹೆಚ್ಚಾಗಿ ಚಿತ್ರೀಕರಣಗೊಂಡಿರೋ ಈ ಸಿನಿಮಾ ಗಂಡ ಹೆಂಡತಿಯ ನಡುವೆ ನಡೆಯೋ ಕಥೆ ಹೊಂದಿದೆ. ಗಂಡ ಹೆಂಡಿರಿಬ್ಬರೂ ಸಾಫ್ಟ್ ವೇರ್ ವಲಯದಲ್ಲಿ ಕೆಲಸ ಮಾಡುವಾಗ ಆಗೋ ವಿದ್ಯಮಾನಗಳ ಸುತ್ತಾ ರೋಚಕವಾಗಿ ಸಾಗೋ ಕಥೆಯನ್ನು ಈ ಚಿತ್ರ ಹೊಂದಿದೆಯಂತೆ.
ಮಂಜುನಾಥ್ ಅವರಿಲ್ಲಿ ಪಕ್ಕಾ ಮಾಸ್ ಲುಕ್ಕಿನಲ್ಲಿಯೂ ಕಂಗೊಳಿಸಲಿದ್ದಾರೆ. ಒಂದಷ್ಟು ಫೈಟುಗಳೂ ಇದರಲ್ಲಿರಲಿವೆಯಂತೆ. ಮಂಜುನಾಥ್ ಅವರ ಎಂಟ್ರಿ ಫೈಟನ್ನು ಎಲ್ಲರೂ ಬೆಚ್ಚಿ ಬೀಳುವಂತೆ ಚಿತ್ರೀಕರಿಸಲೂ ಸಂಪೂರ್ಣ ತಯಾರಿ ಮಾಡಿಕೊಳ್ಳಲಾಗಿದೆಯಂತೆ. ಇನ್ನು ಹಾಡುಗಳ ವಿಚಾರದಲ್ಲಿಯೂ ಕೂಡಾ ಈ ಚಿತ್ರ ಅಲೆಯೆಬ್ಬಿಸೋದು ಗ್ಯಾರೆಂಟಿ. ಯಾಕೆಂದರೆ, ಶ್ರೇಯಾ ಘೋಶಾಲ್, ಸೋನುನಿಗಮ್ ಅವರಂಥಾ ಮೇರು ಗಾಯಕರಿಂದ ಇದರ ಹಾಡನ್ನು ಹಾಡಿಸಲಾಗುತ್ತದೆಯಂತೆ.ಮಂಜುನಾಥ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೇ ಸಂಯುಕ್ತ-೨ ಚಿತ್ರದ ಮೂಲಕ. ಅದರಲ್ಲಿ ಒಂದು ಮಹತ್ವದ ಪಾತ್ರ ನಿರ್ವಹಿಸೋ ಮೂಲಕವೂ ಅವರು ಗಮನ ಸೆಳೆದಿದ್ದರು. ಅದನ್ನು ಕಂಡ ಪ್ರತಿಯೊಬ್ಬರೂ ಇವರು ಹೀರೋ ಆದರೆ ಚೆನ್ನಾಗಿರುತ್ತದೆ ಎಂಬಂಥಾ ಭಾವನೆ ಹುಟ್ಟಿಕೊಂಡಿತ್ತು. ಹೀರೋ ಆಗಲು ಬೇಕಾದಂಥಾದ್ದೇ ಫಿಟ್ನೆಸ್ ಕಾಯ್ದುಕೊಂಡಿರೋ ಮಂಜುನಾಥ್ ಅವರು ಸಂಪೂರ್ಣ ತಯಾ ರಿಯೊಂದಿಗೇ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರಂತೆ. ಸಿನಿಮಾ ಬಗ್ಗೆ ಆಳವಾದ ಆಸಕ್ತಿ ಹೊಂದಿರೋ ಮಂಜುನಾಥ್ ಅವರು ಈ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ನೆಲೆ ನಿಲ್ಲೋ ಲಕ್ಷಣಗಳಿವೆ.
No Comment! Be the first one.