ನಾಗಾರ್ಜುನ ಅಕ್ಕಿನೇನಿ ಮತ್ತು ರಾಕುಲ್ ಅಭಿನಯಿಸುತ್ತಿರುವ ಹೊಸ ಸಿನಿಮಾ ಮನ್ಮಥುಡು 2. ಇತ್ತೀಚಿಗೆ ಚಿತ್ರದಲ್ಲಿ ರಕುಲ್ ಧಮ್ ಹೊಡೆಯುತ್ತಿರುವ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಲ್ಲದೇ ನೆಟ್ಟಿಗರು ಬಾಯಿಗೆ ಬಂದಂತೆ ರಾಕುಲ್ ವಿರುದ್ಧ ಕಮೆಂಟುಗಳ ಮಹಾಪೂರವನ್ನು ಹರಿಸಿ, ಹಿಗ್ಗಾಮುಗ್ಗಾ ತರಾಟೆಗೂ ತೆಗೆದುಕೊಂಡಿದ್ದರು. ಇದಕ್ಕೆ ತಿರುಗೇಟು ನೀಡಿ ಉತ್ತರಿಸಿರುವ ರಾಕುಲ್, ನನಗೆ ಮಾಡಲು ಸಾಕಷ್ಟು ಕೆಲಸಗಳಿವೆ. ಕೆಲಸಕ್ಕೆ ಬಾರದ ಟ್ರೋಲುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು ಏನು ಮಾಡಿದರೂ ಜನರು ಟೀಕೆ ಮಾಡುತ್ತಾರೆ. ಮತ್ತೊಬ್ಬರ ಕಾಲು ಎಳೆಯುವುದೇ ಅವರ ಉದ್ಯೋಗವಾಗಿರುತ್ತದೆ.

ಕಬೀರ್ ಸಿಂಗ್ ಚಿತ್ರದಲ್ಲಿ ಶಾಹಿದ್ ಕಪೂರ್ ಕೂಡ ಸಿಕ್ಕಾಪಟ್ಟೆ ಧೂಮಪಾನ ಮಾಡಿದ್ದಾರೆ. ಹಾಗಂತ ಅವರನ್ನೇಕೆ ಟ್ರೋಲ್ ಮಾಡಲಿಲ್ಲ. ಎಂದು ಖಡಕ್ಕಾಗಿಯೇ ಪ್ರಶ್ನಿಸಿದ್ದಾರೆ. ಮನ್ಮಥುಡು 2 ಸಿನಿಮಾ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಇನ್ನು ತಾರಾಬಳಗದಲ್ಲಿ ಯೂಥ್ ಪುಲ್ ಹುಡುಗಿಯಾಗಿ ರಾಕುಲ್ ಪ್ರೀತ್, ಸಮಂತ ಅಕ್ಕಿನೇನಿ, ಕೀರ್ತಿ ಸುರೇಶ್, ಹಿರಿಯ ನಟಿ ಲಕ್ಷ್ಮಿ, ರಾವ್ ರಮೇಶ್ ಮತ್ತಿತರರು ನಟಿಸಿದ್ದಾರೆ.

CG ARUN

ಸೆಕೆಂಡ್ ಮ್ಯಾರೇಜ್ ಗೆ ಅಮಲಾ ರೆಡಿ!

Previous article

ಪೈಲ್ವಾನ್ ರೊಮ್ಯಾಂಟಿಕ್ ಹಾಡು ಬಿಡುಗಡೆ!

Next article

You may also like

Comments

Leave a reply

Your email address will not be published. Required fields are marked *