2018ರಲ್ಲಿ ಓ ಪ್ರೇಮವೇ ಹೆಸರಿನ ಚೆಂದದ ಸಿನಿಮಾವೊಂದು ತೆರೆಗೆ ಬಂದಿತ್ತು. ಆ ಸಿನಿಮಾವನ್ನು ನಿರ್ದೇಶಿಸಿ, ನಾಯಕನಟನಾಗಿ ನಟಿಸಿದ್ದವರು ಮನೋಜ್ ಕುಮಾರ್. ಅದಕ್ಕೂ ಮುಂಚೆ ಮೊಗ್ಗಿನ ಮನಸು ಸಿನಿಮಾದಲ್ಲೂ ಮನೋಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ಹೀರೋ ಆಗಲು ಬೇಕಿದ್ದ ಎಲ್ಲ ಅರ್ಹತೆ ಹೊಂದಿರುವವರು ಮನೋಜ್. ಅದ್ಯಾಕೋ ಏನೋ ಓ ಪ್ರೇಮವೇ ಮತ್ತು ಬಾಡಿಗಾರ್ಡ್ ಸಿನಿಮಾದ ನಂತರ ಮನೋಜ್ ಚಿತ್ರರಂಗದಲ್ಲಿ ಸುಳಿದಾಡಿದ ಸುಳಿವು ಕಾಣುತ್ತಿಲ್ಲ. ಎಲ್ಲಿ ಹೋದರು ಮನೋಜ್ ಅಂತಾ ಹುಡುಕುವ ಹೊತ್ತಿಗೇ ಪತ್ನಿ ಸಮೇತ ಪ್ರತ್ಯಕ್ಷರಾಗಿದ್ದಾರೆ.
ನಟ ಮನೋಜ್ ಕುಮಾರ್ ಮತ್ತು ಅನುಷಾ ಅವರ ಮದುವೆ ಫೆಬ್ರವರಿ 19ರಂದು ನಡೆದಿತ್ತು. ಆರತಕ್ಷತೆ ಸಮಾರಂಭ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಮೊನ್ನೆ ಅದ್ದೂರಿಯಾಗಿ ನೆರವೇರಿತು. ಈ ಸಮಾರಂಭದಲ್ಲಿ ಸಿನಿಮಾ ಕಲಾವಿದರು ಹಾಗೂ ರಾಜಕೀಯ ಮುಖಂಡರುಗಳು ಭಾಗವಹಿಸಿದ್ದರು. ಮನೋಜ್ ಕುಮಾರ್ ಜೆಡಿಎಸ್ ರಾಜಾಧ್ಯಕ್ಷ ಹಾಗೂ ಶಾಸಕ ಹೆಚ್ ಕೆ ಕುಮಾರಸ್ವಾಮಿ ಅವರ ಪುತ್ರ ಕೂಡಾ.
ತಮ್ಮದೇ ಗ್ರಾನೈಟ್ ಉದ್ಯಮವನ್ನು ಹೊಂದಿರುವ ಮತ್ತು ಆ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿರುವ ಮನೋಜ್ ಅವರಿಗೆ ಮೊದಲಿನಿಂದಲೂ ಸಿನಿಮಾ ರಂಗದ ಮೇಲೆ ಒಲವು. ಈ ಕಾರಣಕ್ಕೇ ತಮ್ಮ ಗ್ರಾನೈಟ್ ವ್ಯವಹಾರ, ತಂದೆಯವರ ರಾಜಕಾರಣದ ಕೆಲಸಗಳ ನಡುವೆಯೂ ಸಿನಿಮಾದಲ್ಲಿ ನಟಿಸಿದ್ದರು. ಬಹುಶಃ ಮುಂದೆ ಕೂಡಾ ಮನೋಜ್ ಬೆಳ್ಳಿ ತೆರೆ ಮೇಲೆ ಮತ್ತೆ ಎಂಟ್ರಿ ಕೊಡಬಹುದು. ಸದ್ಯ ಮದುವೆಯ ಸಡಗರದಲ್ಲಿರುವ ಮನೋಜ್ ಕುಮಾರ್ ಅವರ ವೈವಾಹಿಕ ಜೀವನ ಸುಖ, ಶಾಂತಿ, ನೆಮ್ಮದಿಯಿಂದ ಕೂಡಿರಲಿ ಅಂತಾ ಆಶಿಸೋಣ…
No Comment! Be the first one.