ಸುಕ್ಕಾ ಸೂರಿ ಡೈರೆಕ್ಷನ್ನಿನ ಕೆಂಡಸಂಪಿಗೆ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನಟಿ ಮಾನ್ವಿತಾ. ಆನಂತರ ಚೌಕ, ಟಗರು, ಕನಕ ಸಿನಿಮಾಗಳಲ್ಲಿಯೂ ನಟಿಸಿದ್ದರು. ಆನಂತರ ಕಣ್ಮರೆಯಾಗಿದ್ದ ಮಾನ್ವಿತ ಸದ್ಯ ಮತ್ತೆ ಕಮ್ ಬ್ಯಾಕ್ ಆಗಿದ್ದಾರೆ. ಒಟ್ಟೊಟ್ಟಿಗೆ ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮಾನ್ವಿತಾ ಲವ್ ಇನ್ ಲಂಡನ್, ದಾರಿ ತಪ್ಪಿದ ಮಗ, ರಾಜಸ್ತಾನ ಡೈರೀಸ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಇದರ ಜತೆಗೆ ವೆಬ್ ಸಿರೀಸ್ ನಲ್ಲಿಯೂ ಆಕರ್ಷಿತರಾಗಿರುವ ಟಗರು ಪುಟ್ಟಿ ವೆಬ್ ಸರಣಿಯೊಂದನ್ನು ಮಾಡುವ ಉತ್ಸಾಹದಲ್ಲಿದ್ದಾರೆ. ಅಲ್ಲದೇ ಮಹಿಳಾ ಪ್ರಧಾನ ಕಥೆಯೊಂದನ್ನು ಆಧರಿಸಿದ ವೆಬ್ ಸರಣಿಯನ್ನು ಮಾಡಲು ನಿರ್ಧರಿಸಿದ್ದು, ಕಥೆ ಬರೆಯುತ್ತಿದ್ದಾರಂತೆ. ನಟನೆಯ ಜತೆಗೆ ನಿರ್ದೇಶನದಲ್ಲಿಯೂ ಆಸಕ್ತಿ ಇರುವ ಮಾನ್ವಿತ ವೆಬ್ ಸರಣಿಯ ಮೂಲಕ ಡೈರೆಕ್ಟರ್ ಕ್ಯಾಪ್ ಧರಿಸುವ ಹಾದಿಯಲ್ಲಿದ್ದಾರೆ.
No Comment! Be the first one.