ಯುವಕನ ಕೈಗೆ ಇದ್ದಕ್ಕಿದ್ದಂತೆ ಗೋಲ್ಡ್ ಬಿಸ್ಕೇಟು ಸಿಕ್ಕಿಬಿಟ್ಟರೆ ಏನೇನಾಗುತ್ತದೆ? ಅನ್ನೋದರ ಸುತ್ತ ಸಸ್ಪೆನ್ಸ್ ಥ್ರಿಲ್ಲರ್, ಕಾಮಿಡಿ, ಲವ್ವು ಹೀಗೆ ಎಲ್ಲವನ್ನೂ ಸೇರಿಸಿ ಮಾರಿ ಗೋಲ್ಡ್ ರೂಪಿಸಲಾಗುತ್ತಿದೆ.
ದೂದ್ ಪೇಡ ಅಂತಲೇ ಫೇಮಸ್ಸಾಗಿ ಬರ್ಫಿ, ಪುಲ್ಲಾವ್ ನಂತಾ ತಿನಿಸುಗಳ ಹೆಸರಿನ ಸಿನಿಮಾಗಳನ್ನು ಮಾಡಿರುವ ಹೀರೋ ದಿಗಂತ್ ಈಗ ಮಾರಿ ಗೋಲ್ಡ್’ನಲ್ಲಿ ನಟಿಸುತ್ತಿದ್ದಾರೆ. ಆದರೆ ಇದು ತಿನ್ನುವ ಬಿಸ್ಕೇಟ್ ಅಲ್ಲ, ಗೋಲ್ಡ್ ಬಿಸ್ಕೇಟಿಗೆ ಸಂಬಂಧಪಟ್ಟ ಸಿನಿಮಾ. ದಿಗಂತ್ ಹುಟ್ಟುಹಬ್ಬದ ಪ್ರಯುಕ್ತ ಅತ್ಯಾಕರ್ಷಕವಾದ ಪೋಸ್ಟರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ. ಗೋಲ್ಡ್ ಕಾಯಿನ್ನುಗಳನ್ನೇ ಕನ್ನಡಕವಾಗಿಸಿ, ತಲೆಯ ಹಿಂಬದಿಯಲ್ಲಿ ಆಕಡೆಗೊಂದು, ಈಕಡೆಗೊಂದು ರಿವಾಲ್ವರ್ ಇಟ್ಟು ಮಜಬೂತಾಗಿ ಪೋಸ್ಟರ್ ಡಿಸೈನ್ ಮಾಡಿದ್ದಾರೆ. ವಿನ್ಯಾಸ ಕಲಾವಿದ ಅಶ್ವಿನ್ ಕಾನ್ಸೆಪ್ಟು ನಿಜಕ್ಕೂ ಹೊಸ ರೀತಿಯಲ್ಲಿದೆ…
ಯುವಕನ ಕೈಗೆ ಇದ್ದಕ್ಕಿದ್ದಂತೆ ಗೋಲ್ಡ್ ಬಿಸ್ಕೇಟು ಸಿಕ್ಕಿಬಿಟ್ಟರೆ ಏನೇನಾಗುತ್ತದೆ? ಅನ್ನೋದರ ಸುತ್ತ ಸಸ್ಪೆನ್ಸ್ ಥ್ರಿಲ್ಲರ್, ಕಾಮಿಡಿ, ಲವ್ವು ಹೀಗೆ ಎಲ್ಲವನ್ನೂ ಸೇರಿಸಿ ಮಾರಿ ಗೋಲ್ಡ್ ರೂಪಿಸಲಾಗುತ್ತಿದೆ. ಈ ಚಿತ್ರದ ನಿರ್ದೇಶಕ ರಾಘವೇಂದ್ರ ಎಂ. ನಾಯಕ್ ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ನಿರ್ದೇಶನ ವಿಭಾಗದಲ್ಲಿ ಪಳಗಿರುವ ರಾಘವೇಂದ್ರ ಈ ಸಲ ದಿಗಂತ್’ಗೆ ಹೇಳಿಮಾಡಿಸಿದಂತಾ ಕಥೆಯನ್ನು ತೆರೆಗೆ ತರುತ್ತಿದ್ದಾರೆ. ಇತ್ತೀಚೆಗೆ ಹಾಡನ್ನು ಚಿತ್ರೀಕರಿಸುವುದರೊಂದಿಗೆ ಶೂಟಿಂಗ್ ಕಂಪ್ಲೀಟ್ ಆಗಿದೆ.
ಕನ್ನಡ ಚಿತ್ರರಂಗದ ಕ್ರಿಯಾಶೀಲ ಮ್ಯೂಸಿಕ್ ಡೈರೆಕ್ಟರ್ ವೀರ್ ಸಮರ್ಥ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಕೆ.ಎಸ್. ಚಂದ್ರಶೇಖರ್ ಕ್ಯಾಮೆರಾ ಕೆಲಸ ಮಾಡಲಿದ್ದಾರೆ. ಈ ಹಿಂದೆ ಗುಣವಂತ ಸಿನಿಮಾವನ್ನು ನಿರ್ದೇಶಿಸಿದ್ದ ರಘುವರ್ಧನ್ ಮಾರಿಗೋಲ್ಡ್ ನಿರ್ಮಾಪಕರಾಗಿದ್ದಾರೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಬ್ಯುಸಿ ಸಂಭಾಷಣೆಕಾರರಾಗಿರುವ ರಘು ನಿಡುವಳ್ಳಿ ಪ್ರೇಕ್ಷಕರು ಉಳ್ಳಾಡಿಕೊಂಡು ನಗುವಂತಾ ಡೈಲಾಗುಗಳನ್ನು ಬರೆದಿದ್ದಾರೆ. ಯೋಗರಾಜ್ ಭಟ್, ವಿಜಯ್ ಭರಮಸಾಗರ, ಕವಿರಾಜ್ ಹಾಡುಗಳನ್ನು ಹೊಸೆದಿದ್ದಾರೆ. ಸಂಗೀತಾ ಶೃಂಗೇರಿ ಚಿತ್ರದ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ಸಂಪತ್ಕುಮಾರ್, ಕಾಕ್ರೋಜ್ ಸುಧಿ, ಯಶ್ಶೆಟ್ಟಿ, ರಾಜ್ ಬಲವಾಡಿ, ಗಣೇಶ್ರಾವ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದ ಭಾಗವಾಗಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಪೋಸ್ಟರ್ ಎಲ್ಲರ ಗಮನ ಸೆಳೆಯುತ್ತಿದೆ.