ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಬಿಟೌನ್ ನಲ್ಲಿ ಈಗಾಗಲೇ ಸಾಕಷ್ಟು ದಿನಗಳಿಂದ ಕೇಳಿ ಬರುತ್ತಲೇ ಇತ್ತು. ಆದರೆ ಈ ಜೋಡಿ ಯಾವತ್ತು ತಮ್ಮ ಪ್ರೀತಿ, ಪ್ರೇಮದ ವಿಚಾರವನ್ನು ಎಲ್ಲಿಯೂ ಶೇರ್ ಮಾಡಿರಲಿಲ್ಲ. ಆದರೂ ಯಾವುದೇ ಸೋಶಿಯಲ್ ಕಾರ್ಯಕ್ರಮಗಳಲ್ಲೂ ಪ್ರಣಯ ಪಕ್ಷಿಗಳಂತೆ ಅಂಟಿಕೊಂಡೇ ಕಾಣಿಸಿಕೊಳ್ಳುತ್ತಿದ್ದರು.

ಸದ್ಯ ಇವರ ಪ್ರೀತಿಗೆ ಪುಷ್ಠಿ ನೀಡುವಂತೆ ಆಲಿಯಾ ಮತ್ತು ರಣಬೀರ್ ಮನೆಯಲ್ಲಿ ಮದುವೆ ಮಾತುಕತೆ ನಡೆಯುತ್ತಿದ್ದು, ಅದಕ್ಕಾಗಿ ಆಲಿಯಾ ಡಿಸೈನರ್ ಸಭ್ಯಸಾಚಿ ಮುಖರ್ಜಿಗೆ ಒಂದು ಲೆಹೆಂಗಾ ವಿನ್ಯಾಸ ಮಾಡಲು ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಅಧಿಕೃತವಾಗಿ ಈ ಬಗ್ಗೆ ಕುಟುಂಬದವರೂ ತುಟಿ ಎರಡು ಮಾಡಿಲ್ಲ. ಬ್ರಹ್ಮಾಸ್ತ್ರ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದ ಆಲಿಯಾ ಮತ್ತು ರಣಬೀರ್ ಕಪೂರ್ ನಡುವೆ ಪ್ರೇಮಾಂಕುರ ಬಲವಾಗಲೂ ಈ ಸಿನಿಮಾ ಕಾರಣವಾಗಿದೆ ಎನ್ನಲಾಗುತ್ತಿದೆ.

CG ARUN

ಬಾಲಿ ದ್ವೀಪದಲ್ಲಿದ್ದಾರೆ ಹರಿಪ್ರಿಯ!

Previous article

ದ್ರಷ್ಟಿ ಧಾಮಿ ಲಿಪ್ ಲಾಕ್ ಫೋಟೋ ವೈರಲ್!

Next article

You may also like

Comments

Leave a reply

Your email address will not be published. Required fields are marked *