ಹೀಗಾಗೋದು ಸಹಜವೇ. ರಾತ್ರಿಯೆಲ್ಲಾ ರಿಸಪ್ಶನ್ ನಲ್ಲಿ ವರನ ಕೈ ಹಿಡಿದು ಕುಸು ಕುಸು ನಗುತ್ತಿದ್ದ ವದು ಬೆಳಗಾಗುವಷ್ಟರಲ್ಲೇ ಚೀಟಿ ಬರೆದಿಟ್ಟು ಮದುವೆಮನೆಯಿಂದ ಪರಾರಿಯಾದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ನಡೆಯುತ್ತಲೇ ಇರುತ್ತವೆ. ಸದ್ಯ ಮದುವೆಗೆ ರೆಡಿಯಾಗಿ ಇನ್ನೇನು ನಾಳೆ ಮದುವೆ ಎನ್ನುವರಷ್ಟರಲ್ಲಿ ಮದುವೆಯೇ ಮುರಿದುಬಿದ್ದಿದೆ. ಹೌದು ಹಾಲಿವುಡ್ ನಟಿ ಸೋಫಿ ಹಾಗೂ ಜೋ ಇಬ್ಬರೂ ಈ ಮೊದಲು ತಮ್ಮಿಬ್ಬರು ಮದುವೆಗಾಗಿ ಅಗತ್ಯವಿರುವ ಎಲ್ಲ ಶಾಪಿಂಗ್ ಗಳನ್ನು ಮುಗಿಸಿದ್ದರು. ಮದುವೆಗಿನ್ನು 24 ಗಂಟೆಗಳಷ್ಟೇ ಬಾಕಿ ಇತ್ತು. ಅಷ್ಟರಲ್ಲಾಗಲೇ ಅದೇನಾಯಿತೋ ಗೊತ್ತಿಲ್ಲಪ್ಪ ಸೋಫಿ ಇದ್ದಕ್ಕಿದ್ದಂತೆ ನಮ್ಮ ಮದುವೆ ನಡೆಯುವುದಿಲ್ಲ. ನಮ್ಮಿಬ್ಬರ ನಡುವೆ ಬ್ರೇಕ್ ಅಪ್ ಅಗಿದೆ ಎಂದು ಅನೌನ್ಸ್ ಮಾಡಿ ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ. ಇದಕ್ಕೆ ಸ್ಪಷ್ಟ ಕಾರಣಗಳೇನೆಂಬುದು ತಿಳಿದುಬಂದಿಲ್ಲ.

ಜೋ ಬಹಳ ಒಳ್ಳೆಯ ಹುಡುಗ ನಾನು ಡಿಪ್ರೇಷನ್‌ನಲ್ಲಿದ್ದಾಗ ನನ್ನನ್ನು ಹೊರತೆಗೆದಿದ್ದಲ್ಲದೇ, ಸೆಲ್ಫ್‌ ಲವ್‌ ಮಾಡುವುದನ್ನು ಹೇಳಿಕೊಟ್ಟಿದ್ದಾನೆ. ಎಲ್ಲದಕ್ಕಿಂತ ಹೆಚ್ಚಾಗಿ ಜೀವನವನ್ನು ಪ್ರೀತಿಸುವುದನ್ನು ಕಲಿಸಿಕೊಟ್ಟಿದ್ದಾನೆ. ಅದಕ್ಕೆ ನಾನು ಸದಾ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸೋಫಿ ಹೇಳಿಕೊಂಡಿದ್ದಾರೆ.

CG ARUN

ನಿರ್ಮಾಪಕಿಯಾಗಲಿರುವ ಕತ್ರಿನಾ!

Previous article

ಹಾಟ್ ಮೂಡ್ ನಲ್ಲಿದ್ದಾರೆ ಕಾಜಲ್!

Next article

You may also like

Comments

Leave a reply

Your email address will not be published. Required fields are marked *