ಸಂಗೀತಾ ಭಟ್ ವಿರುದ್ಧ ಮೀಟೂ ನೆಪದಲ್ಲಿ ಮಾತಾಡಿ ವಿವಾದಕ್ಕೆ ನಾಂದಿ ಹಾಡಿದ್ದರಲ್ಲಾ ಮಠ ಗುರುಪ್ರಸಾದ್? ಅವರೀಗ ಅಕ್ಷರಶಃ ಕುಷ್ಕಾ ಧ್ಯಾನದಲ್ಲಿದ್ದಾರೆ. ಇದುವರೆಗೂ ನಿರ್ದೇಶಕರಾಗಿದ್ದ ಅವರು ಇನ್ನು ಮುಂದೆ ನಾಯಕನಾಗಿ ಮುಂದುವರೆಯೋ ಇರಾದೆಯಿಂದಲೇ ಕುಷ್ಕ ಎಂಬ ಚಿತ್ರದಲ್ಲಿ ನಾಯಕನಾಗಿಯೂ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಹೊರ ಬಿದ್ದಿದ್ದ ಈ ಚಿತ್ರದ ಪೋಸ್ಟರ್ ಮತ್ತು ಅದರಲ್ಲಿನ ಗುರು ಗೆಟಪ್ಪುಗಳು ಒಂದಷ್ಟು ಕ್ಯೂರಿಯಾಸಿಟಿಗೆ ಕಾರಣವಾಗಿರೋದಂತೂ ನಿಜ!
ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವವರು ವಿಕ್ರಂ ಯೋಗಾನಂದ್. ನಿಜ ಜೀವನದಲ್ಲಿಯೂ ಒಂದಷ್ಟು ವಿಚಿತ್ರ ಹಾವ ಭಾವ ವ್ಯಕ್ತಿತ್ವವನ್ನು ಹೊಂದಿರೋ ಗುರುಗಾಗಿಯೇ ಅವರು ಈ ಕಥೆಯನ್ನು ಸಿದ್ಧಪಡಿಸಿದ್ದಾರಂತೆ. ಹಾಗಾದರೆ ಈ ಚಿತ್ರದಲ್ಲಿ ಮಠ ಗುರು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಂಬ ಬಗ್ಗೆ ನಿರ್ದೇಶಕರೇ ಚೂರು ಮಾಹಿತಿಯನ್ನು ಜಾಹೀರು ಮಾಡಿದ್ದಾರೆ.
ಮಠದ ಗುರು ಈ ಚಿತ್ರದಲ್ಲಿ ಚಾಣಾಕ್ಷ ಗ್ಯಾಂಗ್ಸ್ಟರ್ ಪಾತ್ರಕ್ಕೆ ಜೀವ ತುಂಬುತ್ತಿದ್ದಾರಂತೆ. ಈಗಾಗಲೇ ಈ ಚಿತ್ರದ್ದೊಂದು ಪೋಸ್ಟರ್ ಬಿಡುಗಡೆಯಾಗಿದ್ದೇ ಅದನ್ನು ನೋಡಿ ಬೇರೆ ಭಾಷೆಗಳಿಂದಲೂ ಡಬ್ಬಿಂಗ್ ರೈಟ್ಸ್ಗಾಗಿ ಭಾರೀ ಬೇಡಿಕೆ ಬಂದಿದೆ ಎಂಬುದು ನಿರ್ದೇಶಕರ ಹೆಮ್ಮೆಗೆ ಕಾರಣ. ಇದೇ ಆವೇಗದಲ್ಲಿ ನಿರ್ದೇಶಕರು ಈ ಚಿತ್ರ ಗುರುಪ್ರಸಾದ್ಗೆ ಹೊಸಾ ಇಮೇಜು ತಂದುಕೊಡೋದರ ಜೊತೆಗೆ ತನಗೂ ಒಂದು ಬ್ರೇಕ್ ನೀಡಲಿದೆ ಅಂದಿದ್ದಾರೆ. ಅದು ಎಷ್ಟು ನಿಜವಾಗಲಿದೆ ಎಂಬುದಕ್ಕೆ ಒಂದಷ್ಟು ಸಮಯ ಕಾಯದೇ ವಿಧಿಯಿಲ್ಲ!
#
No Comment! Be the first one.