2016ರ ನವೆಂಬರ್ ಎಂಟರಂದು ಮಧ್ಯರಾತ್ರಿ ಒಂದು ಸಾವಿರ ಮತ್ತು ಐನೂರರ ನೋಟುಗಳು ಏಕಾಏಕಿ ಬ್ಯಾನ್ ಆಗಿದ್ದವು. ಅದಾಗಿ ಐವತ್ತು ದಿನಗಳ ಕಾಲ ಇಡೀ ಭಾರತ ಸತ್ಯ, ಮಿಥ್ಯ, ಭ್ರಮೆಗಳ ನಡುವೆ ಮಿಂದೆದ್ದಿದ್ದವು. ಅತ್ತ ಬ್ಲಾಕ್ ಮನಿಯನ್ನು ನಿರ್ಮಾಮ ಮಾಡೋ ವೀರಾವೇಷದಲ್ಲಿ ಕೇಂದ್ರ ಸರ್ಕಾರ ಬಿರುಸಿನಲ್ಲಿದ್ದರೆ, ಇತ್ತ ಬ್ಯಾನಾದ ನೋಟುಗಳನ್ನು ಬದಲಿಸೋದೇ ದೊಡ್ಡ ದಂಧೆಯಾಗಿ ಹೋಗಿತ್ತು. ಹೀಗೆ ನೋಟ್ ಬ್ಯಾನ್ ಆದ ಘಳಿಗೆಯಿಂದ ಐವತ್ತು ದಿನಗಳಲ್ಲಿ ನಡೆದ ಸತ್ಯಕಥೆಗಳ ಕಾಲ್ಪನಿಕ ಕಥೆಯನ್ನು ಹೊಂದಿರೋ ಚಿತ್ರ ಮಟಾಶ್!
ಎಸ್.ಡಿ ಅರವಿಂದ್ ನಿರ್ಮಾಣದ ಈ ಚಿತ್ರ ಇದೀಗ ಪ್ರೇಕ್ಷಕರ ಕುತೂಹಲದ ಕೇಂದ್ರಬಿಂದು. ತಮ್ಮನ್ನು ಸಾರಾಸಗಟಾಗಿ ತಲ್ಲಣಕ್ಕೆ ತಳ್ಳಿದ್ದ ಒಂದು ಘಟನೆಯ ಸುತ್ತಲಿನ ಕಥಾನಕ ಹೊಂದಿರೋ ಈ ಚಿತ್ರದತ್ತ ಜನ ದೃಷ್ಟಿ ನೆಟ್ಟಿದ್ದಾರೆ. ಹಾಗಂತ ಈ ಚಿತ್ರ ಕೇವಲ ನೋಟು ಬ್ಯಾನ್ ಆದುದರ ಸುತ್ತಲಿನ ಕಥೆಯನ್ನು ಮಾತ್ರವೇ ಹೊಂಸದಿದೆಯಾ? ಇದು ಯಾವ ಥರದ ಚಿತ್ರ ಅಂತೆಲ್ಲ ಎಲ್ಲರಲ್ಲಿಯೂ ಪ್ರಶ್ನೆಗಳಿವೆ. ಅದಕ್ಕೆ ನಿರ್ದೇಶಕರೇ ಉತ್ತರವಾಗಿದ್ದಾರೆ!
ಈ ಚಿತ್ರದ ಶೀರ್ಷಿಕೆಯೇ ಮಟಾಶ್. ಈ ಪದ ಮಾಮೂಲಿಯಾಗಿ ಕಥೆ ಮಗೀತು ಎಂಬಂಥಾ ಭಾವ ಸೂಚಿಸಲು ಬಳಕೆಯಲ್ಲಿದೆ. ಆದರೆ ನಿಜವಾದ ಅರ್ಥದಲ್ಲಿ ಇದು ಸರಿಯಾದ ಅಂತ್ಯ ಇಲ್ಲದಿರೋದರ ಸೂಚನೆ. ನೋಟ್ ಬ್ಯಾನ್ ವಿದ್ಯಮಾನಕ್ಕೂ ಸೂಕ್ತ ಅಂತ್ಯ ಇಲ್ಲದಿರೋ ಕಾರಣದಿಂದ ಈ ಶೀರ್ಷಿಕೆಯನ್ನು ಬಳಸಿಕೊಳ್ಳಲಾಗಿದೆಯಂತೆ. ಒಟ್ಟಾರೆಯಾಗಿ ಈ ನೋಟ್ ಬ್ಯಾನ್ ಘಟನೆಯನ್ನಿಟ್ಟುಕೊಂಡು ನಿರ್ದೇಶಕ ಎಸ್.ಡಿ ಅರವಿಂದ್ ಅವರು ಯೂಥ್ಫುಲ್ ಕಥೆಯೊಂದನ್ನು ಈ ಚಿತ್ರದ ಮೂಲಕ ಹೇಳ ಹೊರಟಿದ್ದಾರೆ.
ನೋಟ್ ಬ್ಯಾನ್ ಹಿನ್ನೆಲೆಯಲ್ಲಿಯೇ ಈಗಿನ ಯುವ ಸಮುದಾಯದ ಮನಸ್ಥಿತಿಯನ್ನು ಅನಾವರಣಗೊಳಿಸೋ ಈ ಚಿತ್ರ ಕನ್ನಡದ ಪ್ರಪ್ರಥಮ ನಿಜವಾದ ಮಲ್ಟಿ ಸ್ಟಾರರ್ ಚಿತ್ರವೂ ಹೌದಂತೆ. ಈ ಚಿತ್ರದಲ್ಲಿರೋರೆಲ್ಲ ಹೊಸಬರೇ ಹಾಗಿದ್ದ ಮೇಲೆ ಇದು ಹೇಗೆ ಮಲ್ಟಿ ಸ್ಟಾರ್ ಚಿತ್ರವಾಗುತ್ತೆ ಎಂಬ ಪ್ರಶ್ನೆಗೆ ಚಿತ್ರದಲ್ಲಿಯೇ ಉತ್ತರ ಸಿಗಲಿದೆ!
ಒಟ್ಟಾರೆ ಕಥೆ ಬಿಜಾಪುರ ಬೆಂಗಳೂರು ಸುತ್ತಾಡಿ ಮಲೆನಾಡು ಭಾಗದಲ್ಲಿಯೇ ತೆರೆದುಕೊಳ್ಳುತ್ತದೆ. ಆದ್ದರಿಂದ ಮಲೆನಾಡು ಪ್ರದೇಶದಲ್ಲಿಯೇ ಹೆಚ್ಚಿನ ಭಾಗದ ಚಿತ್ರೀಕರಣ ನಡೆಸಲಾಗಿದೆ. ಹಳೇ ನೋಟುಗಳನ್ನು ಪರ್ಸೆಂಟೇಜ್ ಲೆಕ್ಕದಲ್ಲಿ ಬದಲಾಯಿಸೋ ದಂಧೆ ನಡೆದಿತ್ತಲ್ಲಾ? ಅದರಂತೆಯೇ ಭಾರೀ ಮೊತ್ತದ ಹಣವೊಂದರ ಸುತ್ತ ಹರಿದಾಡೋ ಯುವಕರು, ಅದು ಹೇಗೋ ಬೆಂಗಳೂರಿನ ಮನೆಯಿಂದ ಮಲೆನಾಡಿಗೆ ರವಾನೆಯಾಗೋ ದೊಡ್ಡ ಪ್ರಮಾಣದ ಹಣ… ಮೈ ನವಿರೇಳಿಸೋ ಚೇಸಿಂಗ್ ಸೀನುಗಳು, ಪ್ರೀತಿ, ಕಾಮಿಡಿ ಸೇರಿದಂತೆ ಇದು ಪಕ್ಕಾ ಕಮರ್ಶಿಯಲ್ ರಸಪಾಕ ಎಂಬುದು ನಿರ್ದೇಶಕ ಅರವಿಂದ್ ಅವರ ಅಭಿಪ್ರಾಯ.
ನೋಟ್ ಬ್ಯಾನ್ ಸರಿಯೋ ತಪ್ಪೋ ಎಂಬ ಚರ್ಚೆ ಇಲ್ಲಿನ ಉದ್ದೇಶವಲ್ಲ. ಆದರೆ ಅದರ ಸುತ್ತಾ ಹರಿದಾಡೋ ರೂಮರ್ಗಳು, ಅದನ್ನು ನಂಬೋ ಜನರ ಅನಿವಾರ್ಯತೆ… ಹೀಗೆ ಸೂಕ್ಷ್ಮ ವಿಚಾರಗಳನ್ನೂ ರೋಚವಾಗಿಯೇ ಹಿಡಿದಿಟ್ಟಿರೋ ಚಿತ್ರ ಮಟಾಶ್. ಇದರಲ್ಲಿ ಹೊಸಾ ಹುಡುಗರೇ ಹೆಚ್ಚಾಗಿ ನಟಿಸಿದ್ದಾರೆ. ಇಲ್ಲಿ ಹದಿನಾಲಕ್ಕು ಮಂದಿ ನಾಯಕರಿದ್ದಾರೆ. ಅವರಿಗೆ ಇಬ್ಬರು ನಾಯಕಿಯರು. ಈ ನಡುವೆ ನಾಲ್ವರು ವಿಲನ್ನುಗಳೂ ಅಬ್ಬರಿಸುತ್ತಾರೆ. ಆದರೆ ಕಥೆಯೇ ಹೀರೋ ಸ್ಥಾನದಲ್ಲಿ ನಿಲ್ಲುತ್ತದೆ. ಇದುವೇ ಈ ಚಿತ್ರದ ಅಸಲೀ ಸ್ಪೆಷಾಲಿಟಿ.
ಇನ್ನುಳಿದಂತೆ ಈ ಚಿತ್ರದಲ್ಲಿ ನಿರ್ದೇಶಕ ಅರವಿಂದ್ ಅವರು ನಾನಾ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಈ ಚಿತ್ರದ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿರುವ ಅವರು ಸಂಗೀತ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಮಟಾಶ್ ಹನ್ನೊಂದು ಹಾಡುಗಳನ್ನು ಹೊಂದಿದೆ. ಅದರಲ್ಲಿ ನಾಲಕ್ಕು ಹಾಡುಗಳನ್ನು ನಿರ್ದೇಶಕರೇ ಬರೆದಿದ್ದಾರೆ.
ನೋಟ್ ಬ್ಯಾನ್ ನಮ್ಮ ಕಣ್ಣೆದುರೇ ನಡೆದ ವಿದ್ಯಮಾನ. ಆದರೆ ಜನಸಾಮಾನ್ಯರ ಕಣ್ಣಾಚೆಗೂ ಮತ್ತೇನೋ ನಡೆದಿದೆ. ದಂಧೆಗಳು ವಿಜೃಂಭಿಸಿವೆ. ಯುವ ಸಮುದಾಯವೊಂದು ಏಕಾಏಕಿ ಕಾಸು ಮಾಡೋ ಉಮೇದಿಗೆ ಬಿದ್ದು ನಾನಾ ಅವಘಡಗಳನ್ನೂ ಮಾಡಿಕೊಂಡಿದೆ. ಇಂಥಾ ಹಲವಾರು ರೋಚಕ ಸಂಗತಿಗಳನ್ನು ಈ ಚಿತ್ರ ಒಳಗೊಂಡಿದೆ.
#
No Comment! Be the first one.