ಸಿಫೋರಿಯಾ ಫಿಕ್ಚರ್ಸ್ ಲಾಂಛನದಲ್ಲಿ ಸಪ್ನಾ ಪಾಟೀಲ್ ಅವರು ನಿರ್ಮಿಸಿರುವ `ಮಾಯಾ ಕನ್ನಡಿ` ಚಿತ್ರದ ಟೀಸರ್ ಯೂಟ್ಯೂಬ್ನಲ್ಲಿ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಆನಂದ್ ಆಡಿಯೋದವರು ಈ ಚಿತ್ರದ ಹಾಡು ಮತ್ತು ವಿಡಿಯೊ ಹಕ್ಕುಗಳನ್ನು ಪಡೆದಿದ್ದಾರೆ. ಒಂದು ನಿಮಿಷದ ಈ ಟೀಸರ್ನಲ್ಲಿ ನಟ ಕೆ.ಎಸ್.ಶ್ರೀಧರ್ ಅವರ ಒಂದು ಸಂಭಾಷಣೆ ಇದೆ.
ವಿನೋದ್ ಪೂಜಾರಿ ಕಥೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಅಭಿಷೇಕ್ ಎಸ್.ಎನ್ ಸಂಗೀತ ನೀಡಿದ್ದಾರೆ. ಆನಂದ್ ರಾಜ ವಿಕ್ರಂ ಹಿನ್ನೆಲೆ ಸಂಗೀತ ನಿರ್ದೇಶನ, ಮಣಿಕುಕಲ್ ನಾಯರ್ ಛಾಯಾಗ್ರಹಣ ಹಾಗೂ ಸುಜೀತ್ ನಾಯಕ್ ಅವರ ಸಂಕಲನ ಈ ಚಿತ್ರಕ್ಕಿದೆ. ಕಿಂಗ್ ಆಫ್ ಹಾರ್ಟ್ಸ್ ಎಂಟರ್ಟೈನ್ಸ್ ಅವರ ಸಹ ನಿರ್ಮಾಣದಲ್ಲಿ ರಂಜಿತ್ ಬಜ್ಪೆ ಅವರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಚಿತ್ರದಲ್ಲಿ ಪ್ರಭು ಮುಂಡ್ಕುರು, ಕೆ.ಎಸ್.ಶ್ರೀಧರ್, ಕಾಜಲ್ ಕುಂದರ್, ಅನ್ವಿತ ಸಾಗರ್, ಅನೂಪ್ ಸಾಗರ್, ಅಶ್ವಿರಾವ್ ಪಲ್ಲಕ್ಕಿ, ಕಾರ್ತಿಕ್ ರಾವ್ ಮುಂತಾದವರು ಅಭಿನಯಿಸಿದ್ದಾರೆ.
No Comment! Be the first one.