ಭಾರತದಾದ್ಯಂತ ಸದ್ದು ಮಾಡಿದ್ದ #ಮಿಟೂ ಆಂಧೋಲನ ಮತ್ತೆ ಪ್ರವರ್ಧಮಾನಕ್ಕೆ ಬರುವ ಸಾಧ್ಯತೆಗಳಿವೆ. ಅನುಯಾಯಿಯೊಬ್ಬರು #ಮಿಟೂ ಅನುಭವ ಆಗಿತ್ತಾ ಎಂದು ಕೇಳಿದ್ದೇ ತಡ ನಟಿ ಶಲ್ಲೂ ಶಮು ತನಗಾದ ನೋವನ್ನು ಹಂಚಿಕೊಂಡುಬಿಟ್ಟಿದ್ದಾರೆ.
ಹೌದು ಮಿಸ್ಟರ್ ಲೋಕಲ್ ಚಿತ್ರದಲ್ಲಿ ಕಡೆಯ ಬಾರಿ ಕಾಣಿಸಿಕೊಂಡಿದ್ದ ನಟ ವಿಜಯ್ ದೇವರಕೊಂಡ ಅವರ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವುದಕ್ಕಾಗಿ ದೊಡ್ಡ ನಿರ್ದೇಶಕ ತನ್ನೊಂದಿಗೆ ಮಲಗಲು ಕೇಳಿಕೊಂಡಿದ್ದರೆಂದು ತಿಳಿಸಿದ್ದಾರೆ. ಆದರೆ ತಾನು ಮಾಡಿದ್ದನ್ನು ಒಪ್ಪಿಕೊಳ್ಳುವುದಿಲ್ಲವೆಂಬ ಕಾರಣ ನೀಡಿ ಶಲ್ಲೂ ಆ ದೊಡ್ಡ ನಿರ್ದೇಶಕ ಯಾರೆಂಬುದನ್ನು ಮಾತ್ರ ತಿಳಿಸಿಲ್ಲ. ವರುತಪಡಾಥ, ವಲ್ಲಿಬಾರ್ ಸಂಗಮ್, ತಿರುತು ಪಾಯಲೆ 2 ಇನ್ನಿತರ ಸಿನಿಮಾಗಳಲ್ಲಿ ನಟಿ ಶಲ್ಲೂ ಸಣ್ಣ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
No Comment! Be the first one.