ಕನ್ನಡದ ಎಲ್ಲಾ ದೃಶ್ಯ ಮಾಧ್ಯಮ ಮತ್ತು ಮುದ್ರಣ ಮಾಧ್ಯಮದ ಮಾಲೀಕರಿಗೆ ಒಂದು ನಿವೇದನೆ…
ನೀವು ಕರೋನಾ ಕಾಲದ ತುರ್ತಿನ ಕೆಲಸ ಮಾಡ್ತಾ ಇದ್ದೀರಿ. ಜನತೆಯ ಪರವಾಗಿ ಧನ್ಯವಾದಗಳು. ಈಗೀಗ ಹಲವಾರು ಮಾಧ್ಯಮದ ನೌಕರರು ಪತ್ರಕರ್ತರಿಗೆ ಕರೋನಾ ಪಾಸಿಟಿವ್ ಎಂಬ ಸುದ್ದಿಗಳಿವೆ. ಇಡೀ ಜಗತ್ತೇ ಕರೋನಾ ಕಾಲಘಟ್ಟದಲಿ ಹೀಗೀಗಿರಬೇಕು ಎಂದು ಜಾಗೃತಿ ಮೂಡಿಸಿರುವ ನೀವುಗಳು ಈಗ ಮತ್ತೆ ಸತ್ಯ ಸಂಧರಾಗುವ ಸದವಕಾಶ ಬಂದಿದೆ.
- ನಿಮ್ಮ ಕಛೇರಿಗಳಲ್ಲಿ ಸೋಷಿಯಲ್ ಡಿಸ್ಟೆನ್ಸ್ ನಿಭಾಯಿಸುತ್ತಿದ್ದೀರಾ? ಮೇಂಟೇನ್ ಮಾಡಿದ್ದೇ ಆದರೆ, ಹೇಗೆ ಅಂತಾ ಒಂದರ್ಧ ಗಂಟೆ ಸುದ್ದಿ ಮಾಡಿ.ಹೊರಗೆ ಓಡಾಡುವವರು ಮತ್ತು ಡೆಸ್ಕ್ನಲ್ಲಿರುವವರನ್ನು ಹೇಗೆ ವಿಂಗಡಿಸಿದ್ದೀರಿ. ಹೊರಗೆ ಓಡಾಡುವವರ ಸುರಕ್ಷತೆ ಏನು? ಆಗಾಗ್ಗೆ ಪರೀಕ್ಷೆ ಮಾಡಿಸುತ್ತಿದ್ದೀರಾ? ವಿವರ ಹೇಳಿ
- ಕನಿಷ್ಠ ಸ್ಯಾನಿಟೈಜ಼ರ್ ಇಟ್ಟಿಲ್ಲ. ನೆಪ ಮಾತ್ರಕ್ಕೆ ಟೆಂಪರೇಚರ್ ಪರೀಕ್ಷೆ ಮಾಡಲಾಗುತ್ತಿದೆ. ಹಲವಾರು ಕಂಪನಿಗಳು ಕಳಿಸಿರೋ ಮಾಸ್ಕ್ ಸ್ಯಾನಿಟೈಜ಼ರ್ ಇತ್ಯಾದಿ ಇತ್ಯಾದಿಗಳ ದುರ್ಬಳಕೆಯಾಗುತ್ತಿದೆ ಎಂದು ಬಲ್ಲ ಮೂಲಗಳು ಹೇಳುತ್ತಿವೆ. ಏನೇಳ್ತೀರಾ ನೀವು ಮಾಲೀಕರು?
- ಊರಿಗೆಲ್ಲ ಬುದ್ಧಿ ಹೇಳುವ ಪಾಂಡಿತ್ಯ ಇರುವ ನಿಮ್ಮಲ್ಲಿ ಯಾಕೆ ನೌಕರರ ಕಡಿತ – ನಿಮ್ಮೊಂದಿಗೆ ವರುಷಗಟ್ಟಲೇ ದುಡಿದವರನ್ನು ಯಾಕೆ ಕೆಲಸದಿಂದ ತೆಗೆಯುತ್ತಿದ್ದೀರಿ? ಅನ್ಯಾಯವಲ್ಲವೇ ಮೈ ಲಾರ್ಡ್ಗಳೇ?
- ಮಾಧ್ಯಮದ ಪತ್ರಿಕಾ ಕಛೇರಿಗಳು ಶಿಫ್ಟ್ ಆಗುತ್ತಿವೆಯಲ್ಲ… ಯಾಕೆ ಸಂಗಾತಿಗಳೇ ?
- ನಿಮ್ಮ ವಾಹನ ಚಾಲಕರ ಫುಡ್ ಕ್ಯಾಂಟೀನ್, ಶುಚಿತ್ವದ ವಿಭಾಗ, ಮೇಕಪ್ ಕಾಸ್ಟೂಮ್ ತಾಂತ್ರಿಕ ವಿಭಾಗದ ನೌಕರರನ್ನ ಸುರಕ್ಷಿತವಾಗಿಟ್ಟುಕೊಂಡಿದ್ದೀರಾ? ನನಗೆ ಅನುಮಾನವಿದೆ ಬಗೆ ಹರಿಸ್ತೀರಾ? Nation wants to know..
- ಈ ಹಂತದಲ್ಲಿ ರಜೆ ಕೊಡಿ, ಮನೇಲಿ ಪುಟ್ಟ ಮಗು, ವಯಸ್ಸಾದ ತಾಯಿ ತಂದೆ ಇದ್ದಾರೆ, ಅಂದರೆ ‘ಈಗ ರಜೆ ಇಲ್ಲವೇ ಇಲ್ಲ ಏನಿದ್ರೂ ಕಿಕ್ ಔಟ್’ ಅಂತಾ ಇದೀರಲ್ಲಾ? ಯಾಕೆ ನಾಲ್ಕನೇ ಅಂಗವೇ? ಏನು ಹೆಡ್ಡಿಂಗ್ ಕೊಡಲಿ ಇದಕ್ಕೆ?
- ಪತ್ರಕರ್ತ ಜೀವ ಅಡವಿಟ್ಟು ದುಡಿಯುತ್ತಿದ್ದಾನೆ- ನಿಜ ಹೇಳಿ ಮೊದಲೇ ಸಂಬಳ ಸರಿಯಾಗಿ ಕೊಡುತ್ತಿರಲಿಲ್ಲ. ಈಗವರ ಮನೆಯಲ್ಲಿ ದಿನಸಿಗಾದರೂ ವ್ಯವಸ್ಥೆ ಮಾಡಿದ್ದೀರಾ?
- ಈ ಸಂಧರ್ಭದಲ್ಲೂ ಜನಸೇವೆಯ ಹೆಸರಿನ ಪ್ಯಾಕೇಜ್ ಸುದ್ದಿಗಳು ಬೇಕಾ? ಇದರಿಂದ ಮಾಲೀಕರಿಗಷ್ಟೇ ಉಪಯೋಗ ಅಲ್ಲವಾ?… ಮಾಧ್ಯಮಗಳನ್ನು ನಡೆಸುವ ಕಷ್ಟ ನನಗೂ ಗೊತ್ತು. ಆದರೂ ಯಾಕೆ ತೀರಾ ಹೊನ್ನಶೂಲವ ಹಿಡಿಯುವುದು… Allright ಮುಂದೆ ಹೋಗೋಣ…
- ಬೇರೆ ರಾಜ್ಯಗಳಲ್ಲಿನ ಮಾಧ್ಯಮ ಸಂಗಾತಿಗಳ ಕರೋನಾ ಪಾಸಿಟಿವ್ ಮಾಹಿತಿ ತಿಳಿದು ನೊಂದು ಕೇಳುತ್ತಿದ್ದೇನೆ. ನಿಮ್ಮ ನಿಮ್ಮ ನೌಕರರು ಸುರಕ್ಷಿತವಾಗಿರುವುದರ ಬಗ್ಗೆ, ಆ ಮೂಲಕ ಅವರ ಕುಟುಂಬ, ಅದರಿಂದ ಜಗವೆಂಬ ಕುಟುಂಬ ಸೇಫಾ? ಒಂದರ್ಧ ಗಂಟೆ ಶೋ ಮಾಡಿ. common ಇದು ಕನ್ನಡಿಯಾಗುವ ಸಮಯ…
- ಯಾವ ನಂಬಿಕೆಯ ಮೇಲೆ ಮಾಧ್ಯಮದ ವರದಿಗಾರರು, ಛಾಯಾಗ್ರಾಹಕರು ಬೀದಿಗಿಳಿದು ಕೆಲಸ ಮಾಡುತ್ತಿದ್ದಾರೆ? ಅವರ ನಂಬಿಕೆ ಜೀವನಪ್ರೇಮ ಉಳಿಸಿಕೊಳ್ಳಲು ಏನು ಮಾಡಿದ್ದೀರಿ? ಸೈಕಾಲಜಿಕಲ್ strengthಗೆ ಏನಾದರೂ ಆಫರ್ ಗಳು?
- ಇನ್ನೂ ಐಡಿಯಾಲಜಿ ವಾರ್.. ಒನ್ ಸೈಡಡ್ ಸ್ಟೋರೀಸ್… ಆಳುವವರ ಕಡೆ ವಾಲುವ ಹಗ್ಗಜಗ್ಗಾಟ – ಪ್ರಚೋದನೆ ಮಾಡುತ್ತಲೇ ಇದ್ದೀರಲ್ವಾ.. ಇನ್ನೂ ಅತೃಪ್ತಿಯೇ ವ್ಯಾಸ ವಾಲ್ಮೀಕ ಪರಬ್ರಹ್ಮ ರೂಪಿಗಳೇ?
- ಮಾಲೀಕರಿಗೆ – ಮಾಲೀಕರಿಗಾಗಿ ನೌಕರರನ್ನು ಹಗಲಿರುಳು ದುಡಿಸಿಕೊಳ್ಳುವ ಎಲ್ಲ ಮುಖ್ಯಸ್ಥರಿಗೆ ಈ ಪ್ರಶ್ನೆ.
- ಪತ್ರಿಕೋದ್ಯಮದ ಎಲ್ಲಾ ಅಂಗಗಳ ನೌಕರರ ಉಚಿತ ಪರೀಕ್ಷೆಗೆ ರಾಜ್ಯಾದ್ಯಂತ ಸರಕಾರ ಮುಂದಾಗಬೇಕು. ಅದರ ಕುರಿತಾದ ಆಂದೋಲನ ನೀವೇಕೆ ಮಾಡಬಾರದು? ಮಾಡಿದ್ರೆ ಮಾಹಿತಿ ಕೊಡಿ.
- ನೀವು ಹಾಡಿ ಹೊಗಳಿದ ರಾಜಕಾರಣಿಗಳೇ ಅವರ ಮಕ್ಕಳೇ ನಿಮಗೆ ಹೊಡಿತೀದಾರೆ (ಮಂಡ್ಯ ಜಿಲ್ಲೆ ಮಾದರಿ) ಹಾಗಾದರೆ ಇನ್ನಾದರೂ ಆಧಿಕಾರಶಾಹಿಗಳ ಹದ್ದು ಬಸ್ತಿನಲ್ಲಿಡಬೇಕಲ್ಲವಾ? ಉತ್ತರಿಸಿ ಖಂಡಿತ ಇದರಲ್ಲಿ ಟಿ ಆರ್ ಪಿ ಇದೆ….
-ಚಕ್ರವರ್ತಿಚಂದ್ರಚೂಡ್ (ನಿಮ್ಮ ಹೆಗಲ ಗೆಳೆಯ)