ನಟಿ ಮೀನಾ ಗೊತ್ತಲ್ಲ? ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದು ಬರೋಬ್ಬರಿ ಎರಡು ದಶಕಗಳ ಕಾಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ಆಳ್ವಿಕೆ ನಡೆಸಿದವಳು. ಪುಟ್ನಂಜ, ಮೊಮ್ಮಗ, ಚೆಲುವ, ಶ್ರೀ ಮಂಜುನಾಥ, ಗ್ರಾಮದೇವತೆ, ಸಿಂಹಾದ್ರಿಯ ಸಿಂಹ, ಸ್ವಾತಿ ಮುತ್ತು, ಗೌಡ್ರು, ಮೈ ಆಟೋಗ್ರಾಫ್ ಮತ್ತು ಹೆಂಡ್ತೀರ್ ದರ್ಬಾರ್ ಸೇರಿದಂತೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲೂ ಮೀನ ಮಾತ್ರ ನಿರ್ವಹಿಸಿದ್ದಳು.

೨೦೦೯ರಲ್ಲಿ ವಿದ್ಯಾಸಾಗರ್ ಜೊತೆ ಮದುವೆಯಾಗಿ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿದ್ದ ಮೀನಾ ಆ ನಂತರವೂ ಅಲ್ಲೊಂದು ಇಲ್ಲೊಂದು ಪಾತ್ರಗಳಲ್ಲಿ ನಟಿಸುತ್ತಿದ್ದರು. ಸದ್ಯ ತಮಿಳಿನಲ್ಲಿ ವೆಬ್ ಸಿರೀಸ್ ಜಮಾನಾ ಚಾಲ್ತಿಯಲ್ಲಿದೆ. ಆಟೋ ಶಂಕರ್, ಪೋಸ್ಟ್ ಮನ್ ಮುಂತಾದ ಡಿಜಿಟಲ್ ಚಿತ್ರಗಳು ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿವೆ. ಜ಼ೀ ಫೈವ್ ನಲ್ಲೂ ವೆಬ್ ಸಿರೀಸ್ಗಳು ಬಿಡುಗಡೆಯಾಗುತ್ತಿವೆ. ಸಹಜವಾಗಿ ಜನ ಬಳಸುವ ಅಶ್ಲೀಲ ಅನ್ನಿಸಿಕೊಳ್ಳುವ ಪದಗಳೂ ಇಲ್ಲಿ ಯಾವುದೇ ಸೆನ್ಸಾರ್ ಇಲ್ಲದೆ ಹಾಗಾಗೇ ಬಳಕೆಯಾಗುತ್ತಿವೆ. ಡಿಜಿಟಲ್ ವಿಚಾರಕ್ಕಿನ್ನೂ ಸೆನ್ಸಾರ್ ಅಪ್ಲೈ ಆಗದ ಕಾರಣ ಬೇಕಾದಂತೆ ಭಾಷೆ, ದೃಶ್ಯಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಆಟೋ ಶಂಕರ್ ಎನ್ನುವ ಸಿರೀಸಿನಲ್ಲಂತೂ ತಮಿಳು ಸ್ಲಮ್ಮುಗಳಲ್ಲಿನ ಜನ ಬಳಸುವ ಪದಪದಗಳನ್ನೂ ಯಥಾವತ್ತಾಗಿ ಬಳಸಿದ್ದಾರೆ.

ತೀರಾ ಇತ್ತೀಚೆಗೆ ತಮಿಳಿನಲ್ಲಿ ಕರೋಲಿನ್ ಕಾಮಾಕ್ಷಿ ಎನ್ನುವ ಪತ್ತೇದಾರಿ ವೆಬ್ ಸರಣಿ ಆರಂಭವಾಗಿದ್ದು ಇಲ್ಲಿಯೂ ಸಹ ಫಿಲ್ಟರ್ ಇಲ್ಲದ ಮಾತುಗಳೇ ಹೇರಳವಾಗಿ ಉಪಯೋಗವಾಗಿದೆ. ನಟಿ ಮೀನಾ ‘ಹೋಗಲೇ ಲೌಡಕೆ ಬಾಲ್ ಎಂದಿರುವ  ಡೈಲಾಗನ್ನು ಈ ಮಾಲಿಕೆಯ ಟ್ರೇಲರಿನಲ್ಲೇ ಅನಾವರಣಗೊಳಿಸಿದ್ದಾರೆ. ಇದನ್ನು ಕಂಡ ಯಾರೇ ಆದರೂ ಒಂದು ಕ್ಷಣ ತಬ್ಬಿಬ್ಬಾಗೋದು ಖಂಡಿತಾ.

ಇಷ್ಟು ದಿನ ಸಾರ್ವಜನಿಕವಾಗಿ ಜನ ಮಾತಾಡುತ್ತಿದ್ದ ಇಂಥಾ ಪದಗಳನ್ನು ಕೇಳಿಯಷ್ಟೇ ಅಭ್ಯಾಸವಾಗಿದ್ದವರು ಇನ್ನು ಮುಂದೆ ತಮ್ಮದೇ ಮೊಬೈಲು, ಟೀವಿಯಲ್ಲಿ ನೋಡಿಯೂ ತಿಳಿದುಕೊಳ್ಳಬಹುದು!

ಕಾಲ ಮಾತ್ರವಲ್ಲ ಈಗ ಎಲ್ಲವೂ ಬದಲಾಗಿದೆ!!

CG ARUN

ರವಿಚಂದ್ರನ್ ಮಗ ಅನ್ನೋದು ಬೆನ್ನಿಗಿರುವ ಶಕ್ತಿ ಅಷ್ಟೇ… ಮಿಕ್ಕಿದ್ದೆಲ್ಲಾ ನಾನೇ ಪಡೆಯಬೇಕು!!

Previous article

ಹಿಂಗ್ಯಾಕಾಯ್ತು ಪಾಂಡುರಂಗಾ?!

Next article

You may also like

Comments

Leave a reply

Your email address will not be published. Required fields are marked *