ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ಧ ಮಾಡಿರೋ ಲೈಂಗಿಕ ದೌರ್ಜನ್ಯ ಆರೋಪವೀಗ ವಿವಾದದ ಕೇಂದ್ರಬಿಂದುವಾಗಿದೆ. ಬಹುತೇಕರು ಶ್ರುತಿ ಆರೋಪದ ಸತ್ಯಾಸತ್ಯತೆಯನ್ನೇ ಪ್ರಶ್ನೆ ಮಾಡಲಾರಂಭಿಸಿದ್ದಾರೆ. ಇದೀಗ ನಟ ಚೇತನ್ ಮತ್ತು ಪ್ರಕಾಶ್ ರೈ ಶ್ರುತಿ ಹರಿಹರನ್ಗೆ ಬೆಂಬಲ ನೀಡಿ ಮಾತಾಡುತ್ತಲೇ ಈ ವಿವಾದಕ್ಕೆ ರಾಜಕೀಯ ಅಜೆಂಡಾ ಹಾಗೂ ಧರ್ಮದ ಬಣ್ಣ ಮೆತ್ತಿಕೊಂಡಿದೆ!
ಮೀಟೂ ಅಭಿಯಾನಕ್ಕೂ ಧರ್ಮಕ್ಕೂ ಎಲ್ಲಿಂದೆಲ್ಲಯ ಸಂಬಂಧ ಅನ್ನಿಸೋದು ಸಹಜವೇ. ಆದರೆ ಇಂಥಾದ್ದೊಂದು ಆರಂಭ ಮಾಡುತ್ತಿರುವವರು ಅದಕ್ಕೆ ಪೂರಕವಾದ ಒಂದಷ್ಟು ಸೂಕ್ಷ್ಮ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಆ ನಿಟ್ಟಿನಲ್ಲಿ ನೋಡಹೋದರೆ ಒಂದಷ್ಟು ಗಮನಿಸಬೇಕಾದ ವಿಚಾರಗಳೇ ಹೊರ ಬೀಳುತ್ತವೆ.
ಅರ್ಜುನ್ ಸರ್ಜಾ ಆರಂಭದಿಂದಲೂ ಕೂಡಾ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಒಲವು ಹೊಂದಿರೋ ನಟ. ಒಂದಷ್ಟು ಸಂದರ್ಭಗಳಲ್ಲಿ ಅವರು ಮೋದಿ ಪರವಾಗಿ ಬಹಿರಂಗವಾಗಿ ಮಾತಾಡಿದ್ದೂ ಇದೆ. ಇತ್ತೀಚೆಗೆ ಗೋಹತ್ಯೆ ವಿಚಾರವಾಗಿ ವಿವಾದವೆದ್ದಾಗಲೂ ಗೋಹತ್ಯೆಯ ವಿರುದ್ಧವೇ ನಿಲುವು ಪ್ರಕಟಿಸಿದ್ದವರು ಅರ್ಜುನ್ ಸರ್ಜಾ. ಅಷ್ಟಕ್ಕೂ ಅವರಿಗೆ ಕೌಟುಂಬಿಕವಾಗಿಯೇ ಹಿಂದೂಪರವಾದ ವಿಚಾಧಾರೆಯದ್ದೊಂದು ಹಿನ್ನೆಲೆ ಇದೆ. ಅವರ ತಂದೆ ಶಕ್ತಿಪ್ರಸಾದ್ ಕೂಡಾ ಕಟ್ಟರ್ ಆರೆಸ್ಸೆಸ್ಸಿಗರಾಗಿದ್ದವರು.
ಹೀಗೆ ಹಿಂದೂಪರವಾದ ಮಾತುಗಳ ಮೂಲಕ, ಮೋದಿ ಪರವಾದ ಅಭಿಪ್ರಾಯಗಳ ಮೂಲಕ ಆಗಾಗ ಸದ್ದು ಮಾಡುತ್ತಿದ್ದವರು ಅರ್ಜುನ್ ಸರ್ಜಾ. ಅವರನ್ನು ಮಟ್ಟ ಹಾಕಲು ಒಂದು ಬಣ ವ್ಯವಸ್ಥಿತವಾಗಿ ಕಾರ್ಯತಂತ್ರ ಸಿದ್ಧಪಡಿಸಿಕೊಂಡೇ ಶ್ರುತಿ ಹರಿಹರನ್ ಮೂಲಕ ಆರೋಪ ಮಾಡಿಸಿದ್ದಾರೆ. ಬಳಿಕ ಒಬ್ಬೊಬ್ಬರಾಗಿ ಆಕೆಗೆ ಬೆಂಬಲ ನೀಡುವ ಮೂಲಕ ಅರ್ಜುನ್ ಸರ್ಜಾರನ್ನು ಹಣಿಯಲು ಪ್ರಯತ್ನಿಸುತ್ತಿದ್ದಾರೆಂಬ ಗಂಭೀರ ಆರೋಪವೂ ಕೇಳಿ ಬರಲಾರಂಭಿಸಿದೆ. ಅಷ್ಟಕ್ಕೂ ಪ್ರಕಾಶ್ ರಾಜ್ ಅವರನ್ನು ಅವರ ಪ್ರತಿಭೆಯ ದೃಷ್ಟಿಯಿಂದ ಮೆಚ್ಚಿಕೊಳ್ಳುವವರೂ ಕೂಡಾ ಅವರ ರಸಿಕತೆಯ ಬಗ್ಗೆ ತಕರಾರು ಹೊಂದಿದ್ದಾರೆ. ಅಂಥವರು ಶ್ರುತಿ ಹರಿಹರನ್ ಪರವಾಗಿ ಮಾತಾಡಿ, ಸ್ತ್ರೀವಾದಿಯಂತೆ ಪೋಸು ಕೊಡುತ್ತಿರೋದೇ ಎಲ್ಲವನ್ನೂ ಹೇಳುತ್ತಿದೆ ಎಂಬುದು ಅರ್ಜುನ್ ಸರ್ಜಾ ಪರವಾಗಿರುವವರ ಅಭಿಪ್ರಾಯ.
ಇನ್ನು ನಟ ಚೇತನ್ ಕೂಡಾ ಪ್ರಗತಿಪರ ಸಂಘಟನೆಗಳ ಮೂಲಕವೇ ಗುರುತಿಸಿಕೊಂಡಿರುವವರು. ಸ್ವತಃ ಪ್ರಗತಿಪರ ಆಲೋಚನೆಗಳನ್ನು ಮೈಗೂಡಿಸಿಕೊಂಡಿರುವವರು. ಇಂಥಾ ಚೇತನ್ ಮೇಲೆ ಸೈಂದ್ಧಾಂತಿಕ ಆರೋಪದಾಚೆಗೆ ವ್ಯಯಕ್ತಿಕ ದ್ವೇಷದ ಆರೋಪವೂ ಕೇಳಿ ಬಂದಿದೆ. ಈ ಪ್ರಕಾರವಾಗಿ ಹೇಳೋದಾದರೆ, ಅರ್ಜುನ್ ಸರ್ಜಾ ಮಗಳು ನಾಯಕಿಯಾಗಿದ್ದ ಪ್ರೇಮಬರಹ ಚಿತ್ರಕ್ಕೆ ಆರಂಭದಲ್ಲಿ ಚೇತನ್ ನಾಯಕನಾಗಿ ಆಯ್ಕೆಯಾಗಿದ್ದರಂತೆ. ಆದರೆ ಅದೇಕೋ ನಂತರ ಅರ್ಜುನ್ ಸರ್ಜಾ ಚೇತನ್ರನ್ನ ಕೈ ಬಿಟ್ಟಿದ್ದರಂತೆ. ಈ ದ್ವೇಷವನ್ನು ಚೇತನ್ ಶ್ರುತಿಗೆ ಬೆಂಬಲ ನೀಡೋ ಮೂಲಕ ತೀರಿಸಿಕೊಳ್ಳುತ್ತಿದ್ದಾರೆಂಬುದು ಅರ್ಜುನ್ ಬೆಂಬಲಿಗರ ಆರೋಪ.
ಇನ್ನುಳಿದಂತೆ ಶ್ರುತಿ ಹರಿಹರನ್ ಹಿನ್ನೆಲೆ ಕೂಡಾ ಇದೇ ವಿಚಾರಧಾರೆಯದ್ದು. ಆಕೆಯ ತಂದೆ ಹರಿಹರನ್ ಕೇರಳದಲ್ಲಿ ಆರಂಭದಿಂದಲೂ ಕಮ್ಯುನಿಸ್ಟ್ ಪಕ್ಷದ ಬೆಂಬಲಿಗ. ಕಮ್ಯುನಿಸಂ ಸಿದ್ಧಾಂತವನ್ನೇ ನೆಚ್ಚಿಕೊಂಡವರು. ಇಂಥಾ ಹತ್ತಾರು ಬಣಗಳು ಸೇರಿಕೊಂಡು ಅರ್ಜುನ್ ಸರ್ಜಾ ವ್ಯಕ್ತಿತ್ವವನ್ನೇ ಹನನ ಮಾಡಲು ಅಖಾಡಕ್ಕಿಳಿದಿವೆ ಎಂಬುದು ಈಗ ಕೇಳಿ ಬರುತ್ತಿರೋ ಆರೋಪದ ತಿರುಳು. ಅಸಲೀ ಸತ್ಯ ಏನೆಂಬುದನ್ನು ಕಾಲವೇ ಹೇಳಬೇಕಿದೆ!
#
No Comment! Be the first one.