ಮೇಘನಾ ಗಾಂವ್‌ಕರ್ ಎಂಬ ನಟಿ ಎತ್ತ ಹೋದಳು ಅಂತ ಒಂದಷ್ಟು ಜನರಾದರೂ ಹುಡುಕಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಒಂದಷ್ಟು ವರ್ಷಗಳ ಅಜ್ಞಾತವಾಸದ ನಂತರ ಈಕೆ ಮತ್ತೆ ಮರಳಿದ್ದಾಳೆ. ಕಾಳಿದಾಸ ಕನ್ನಡ ಮೇಸ್ಟ್ರು ಎಂಬ ಚಿತ್ರಕ್ಕೆ ಮೇಘನಾ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ!
ಎರಡು ವರ್ಷಗಳ ಹಿಂದೆ ತೆರೆ ಕಂಡಿದ್ದ ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ ಚಿತ್ರದಲ್ಲಿ ಮೇಘನಾ ನಾಯಕಿಯಾಗಿ ನಟಿಸಿದ್ದೇ ಕೊನೆ. ಆ ನಂತರ ಈಕೆಯ ಪತ್ತೆ ಇರಲಿಲ್ಲ. ರಶ್ಮಿಕಾ ಮಂದಣ್ಣ ಜೊತೆ ಬ್ರೇಕಪ್ ಮಾಡಿಕೊಂಡ ರಕ್ಷಿತ್ ಶೆಟ್ಟಿ ಮೇಘನಾ ಜೊತೆ ಲವ್ವಲ್ಲಿ ಬಿದ್ದಿದ್ದಾರೆ ಅಂತೊಂದು ರೂಮರ್ ಹರಡಿತ್ತಲ್ಲಾ? ಆ ಮೂಲಕವೇ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದ್ದ ಈಕೆ ಮತ್ತೆ ನಟಿಯಾಗಿ ಮರಳಿದ್ದಾಳೆ.
ಗೀತಸಾಹಿತಿ ಕವಿರಾಜ್ ಕಾಳಿದಾಸ ಕನ್ನಸ ಮೇಶ್ಟ್ರು ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಕವಿರಾಜ್ ಕೂಡಾ ಮದುವೆಯ ಮಮತೆಯ ಕರೆಯೋಲೆ ಚಿತ್ರದ ನಂತರ ಇದೇ ಮೊದಲ ಬಾರಿ ನಿರ್ದೇಶನ ಮಾಡುತ್ತಿದ್ದಾರೆ. ಬದುಕಿಗೆ ಹತ್ತಿರವಾದ ಕಥೆ ಹೊಂದಿರೋ ಪಕ್ಕಾ ಕಮರ್ಶಿಯಲ್ ಮೆಥೆಡ್ಡಿನ ಈ ಚಿತ್ರದಲ್ಲಿ ಜಗ್ಗೇಶ್ ನಾಯಕನಾಗಿ ನಟಿಸಲಿದ್ದಾರೆ. ಇದೇ ಮೊದಲ ಬಾರಿ ಜಗ್ಗಣ್ಣನಿಗೆ ಮೇಘನಾ ನಾಯಕಿಯಾಗಿ ನಟಿಸುತ್ತಿದ್ದಾಳೆ.
#
No Comment! Be the first one.