ರಂಗಸಪ್ತಾಹದ ಮೂಲಕ ಕುಸಿದ ಕೊಡಗನ್ನು ಮತ್ತೆ ಕಟ್ಟುವ ಪ್ರಯತ್ನ ಪೀಪಲ್ ಫಾರ್ ಪೀಪಲ್ ಸಂಸ್ಥೆಯಿಂದ ನಡೆದಿದೆ. ಆರು ದಿನ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಜೊತೆಗೇ ಕೊಡಗಿನ ಸಂತ್ರಸ್ತ ಕುಟುಂಬಗಳೊಂದಿಗೆ ನೇರವಾದ ಸಂವಾದ ನಡೆಸಿ ವಸ್ತುಸ್ಥಿತಿ ಮನನ ಮಾಡಿಕೊಳ್ಳುವ ಪ್ರಯತ್ನಗಳೂ ನಡೆದಿವೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ, ಸಿನಿಮಾ ನಿರ್ಮಾಪಕ ಮುನಿರತ್ನ ತಾವೂ ಕೂಡಾ ಕೊಡಗಿನ ಮರುನಿರ್ಮಾಣದಲ್ಲಿ ಭಾಗಿಯಾಗೋದಾಗಿ ಘೋಶಿಸಿದ್ದಾರೆ. ಅದನ್ನವರು ಕಾರ್ಯರೂಪದಲ್ಲಿಯೇ ಮಾಡಿ ತೋರಿಸೋ ನಿರ್ಧಾರವ್ನ್ನೂ ಪ್ರಕಟಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂತ್ರಸ್ತ ಕುಟುಂಬದ ಅಳಲನ್ನು ಆಲಿಸಿದ ಮುನಿರತ್ನ, ಸಂತ್ರಸ್ತರ ಹತ್ತು ಮಕ್ಕಳನ್ನು ದತ್ತು ತೆಗೆದುಕೊಂಡು ವಿದ್ಯಾಭ್ಯಾಸದ ಹೊಣೆ ಹೊರುವುದಾಗಿ ಹೇಳಿದ್ದಾರೆ. ಅವರು ಅಚ್ಚರಿದಾಯಕ ನಿಲುವೊಂದನ್ನು ಪ್ರಕಟಿಸಿದ್ದು ಮಾತ್ರ ಅವರ ಮಹತ್ವಾಕಾಂಕ್ಷೆಯ ಚಿತ್ರ ಕುರುಕ್ಷೇತ್ರದ ವಿಚಾರದಲ್ಲಿ!
ಕುರುಕ್ಷೇತ್ರವನ್ನು ಕನ್ನಡ ಮಾತ್ರವಲ್ಲದೇ ವಿಶ್ವಾಧ್ಯಂತ ಬಿಡುಗಡೆ ಮಾಡಲು ಮುನಿರತ್ನ ಯೋಜನೆ ಹಾಕಿಕೊಂಡಿದ್ದಾರೆ. ಈ ಚಿತ್ರ ಬಿಡುಗಡೆಯಾಗೋ ಮುನ್ನಾ ದಿನದ ಅಷ್ಟೂ ಪ್ರದರ್ಶನಗಳನ್ನು ಕೊಡಗಿನ ಸಂತ್ರಸ್ತರ ನೆರವಿಗೆಂದೇ ಮೀಸಲಿಡೋದಾಗಿ ಮುನಿರತ್ನ ಘೋಶಿಸಿದ್ದಾರೆ. ಆ ದಿನ ಈ ಚಿತ್ರ ಪ್ರದರ್ಶನದ ಹಕ್ಕನ್ನು ಪೀಪಲ್ ಫಾರ್ ಪೀಪಲ್ ತಂಡಕ್ಕೆ ನೀಡಿದ್ದಾರೆ. ಟಿಕೆಟ್ ಬೆಲೆ ನಿರ್ಧರಿಸೋ ವಿಚಾರವನ್ನೂ ಈ ಸಂಘಟನೆಗೇ ಬಿಟ್ಟಿದ್ದಾರೆ. ಆ ದಿನ ನಡೆಯೋ ಅಷ್ಟೂ ಪ್ರದರ್ಶನಗಳಲ್ಲಿ ಎಷ್ಟು ಕಲೆಕ್ಷನ್ನಾದರೂ ಅದೆಲ್ಲವು ಕೊಡಗಿನ ಮರು ನಿರ್ಮಾಣಕ್ಕಾಗಿಯೇ ವಿನಿಯೋಗವಾಗಲಿದೆ.
ಪೀಪಲ್ ಫಾರ್ ಪೀಪಲ್ ಸಂಸ್ಥೆಯ ರೂವಾರಿಯೂ ಆಗಿರುವ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಅವರ ಸಮ್ಮುಖದಲ್ಲಿ ಮುನಿರತ್ನ ಇಂಥಾದ್ದೊಂದು ಮಾತು ಕೊಟ್ಟಿದ್ದಾರೆ. ಇದರಿಂದಾಗಿ ಕೊಡಗನು ಮತ್ತೆ ಕಟ್ಟಲು ಕಟಿಬದ್ಧವಾಗಿರೋ ಈ ಸಂಘಟನೆಯ ಮುಂದಿನ ಯೋಜನೆಗಳಿಗೆ ಮತ್ತಷ್ಟು ಬಲ ಬಂದಂತಾಗಿದೆ.
#
No Comment! Be the first one.