https://youtu.be/RgcD826Cg-M
ರಘುರಾಮ್ ನಿರ್ದೇಶನದ ಮಿಸ್ಸಿಂಗ್ ಬಾಯ್ ಚಿತ್ರ ಮನಮಿಡಿಯುವ ನೈಜ ಘಟನೆಯನ್ನಾಧರಿಸಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಮೊನ್ನೆಯಷ್ಟೇ ನಿರ್ದೇಶಕ ರಘುರಾಮ್ ಈ ಚಿತ್ರದ ಟೀಸರ್‌ಅನ್ನು ಬಿಡುಗಡೆಗೊಳಿಸಿದ್ದರು. ಖಡಕ್ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಅನಾವರಣಗೊಂಡ ಟೀಸರ್ ಯೂಟ್ಯೂಬ್‌ನಲ್ಲಿ ಟ್ರೆಂಡ್ ಸೆಟ್ ಮಾಡಿದೆ. ಇದೀಗ ರಾಜ್ಯದ ಗಡಿ ದಾಟಿ ಪರಭಾಷಾ ಚಿತ್ರರಂಗದ ನಟನಟಿಯರನ್ನೂ ಮೋಡಿಗೀಡುಮಾಡಿದೆ. ಕನ್ನಡದ ಮಿಸ್ಸಿಂಗ್ ಬಾಯ್ ಟೀಸರ್ ಬಗ್ಗೆ ತೆಲುಗು ನಟ ನಟಿಯರೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಟಾಲಿವುಡ್ ನಟಿ ಪ್ರಿಯಾ ರಾಧಾ ಕೃಷ್ಣನ್, ಆರ್ಯ, ಹಂಸ ನಂದಿನಿ, ಶ್ರೀಕಾಂತ್ ಸೇರಿದಂತೆ ಅನೇಕರು ಈ ಟೀಸರ್ ಅನ್ನು ಮೆಚ್ಚಿಕೊಂಡಿದ್ದಾರೆ. ಮಿಸ್ಸಿಂಗ್ ಬಾಯ್ ಚಿತ್ರ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣಲಿದೆ ಎಂಬ ಭವಿಷ್ಯವನ್ನೂ ನುಡಿದಿದ್ದಾರೆ.
ಇನ್ನುಳಿದಂತೆ ಕನ್ನಡದಲ್ಲಿಯೂ ಕೂಡಾ ಈ ಟೀಸರ್ ನಟ ನಟಿಯರು ಮತ್ತು ನಿರ್ದೇಶಕರುಗಳ ಗಮನ ಸೆಳೆದಿದೆ. ಈ ಬಗ್ಗೆ ಕಿಚ್ಚಾ ಸುದೀಪ್ ಸೇರಿದಂತೆ ಅನೇಕರು ಒಳ್ಳೆ ಮಾತುಗಳನ್ನಾಡಿದ್ದಾರೆ. ಕಿಚ್ಚಾ ಸುದೀಪ್ ಕೂಡಾ ಈ ಟೀಸರ್ ಅನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡು ಶುಭ ಹಾರೈಸಿದ್ದಾರೆ. ನಿರ್ದೇಶಕ ಪವನ್ ಒಡೆಯರ್, ಗಣೇಶ್, ಶಿಲ್ಪಾ ಗಣೇಶ್, ರವಿಚಂದ್ರನ್ ಪುತ್ರ ಮನೋರಂಜನ್ ಮೊದಲಾದವರೂ ಟೀಸರ್ ಅನ್ನು ಶೇರ್ ಮಾಡಿಕೊಂಡು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಕರ್ನಾಟಕ ಪೊಲೀಸ್ ಇಲಾಖೆಯ ಹಿಸ್ಟರಿಯಲ್ಲಿಯೇ ಮನಮಿಡಿಯುವ ಘಟನೆಯಾಗಿ ಉಳಿದುಕೊಂಡಿರುವ ನೈಜ ಘಟನೆಯೊಂದನ್ನು ಆಧರಿಸಿದ ಚಿತ್ರ ಮಿಸ್ಸಿಂಗ್ ಬಾಯ್. ಈ ಕಥೆಯನ್ನು ಚಿತ್ರ ಮಾಡಿಯೇ ತೀರಬೇಕೆಂದು ಹೊರಟ ನಿರ್ದೇಶಕ ರಘುರಾಮ್ ಹಲವಾರು ಏಳು ಬೀಳುಗಳನ್ನು ಕಂಡಿದ್ದಾರೆ. ಬಿಡುಗಡೆ ತಡವಾದ ಸಂಕಟವನ್ನು ನುಂಗಿಕೊಂಡು ಮುಂದುವರೆದಿದ್ದಾರೆ. ಅದರಾಚೆಗೂ ಅವರಲ್ಲಿ ಒಂದೊಳ್ಳೆ ಚಿತ್ರ ಮಾಡಿದ ತೃಪ್ತಿ ಇದೆ. ಇನ್ನೇನು ಬಿಡುಗಡೆಯಾಗಲಿರೋ ಈ ಚಿತ್ರದ ಟೀಸರ್ ಬಗ್ಗೆ ಬರುತ್ತಿರೋ ಮೆಚ್ಚುಗೆಯ ಮಾತುಗಳೇ ರಘುರಾಮ್ ಅವರ ಎಲ್ಲ ಕಷ್ಟಗಳನ್ನೂ ಮರೆಸಿವೆ.
ಪರಭಾಷೆಯ ದಿಕ್ಕಿನಿಂದಲೂ ಕೇಳಿ ಬರುತ್ತಿರೋ ಉತ್ತಮ ಅಭಿಪ್ರಾಯ ಈ ಚಿತ್ರ ಬೇರೆ ಭಾಷೆಗಳಿಗೂ ರೀಮೇಕ್ ಆಗಲಿರೋ ಸೂಚನೆಯಂತೆಯೂ ಕಾಣಿಸುತ್ತಿದೆ.
https://www.youtube.com/watch?v=1iv_-J0JEkE #
No Comment! Be the first one.