ರಘುರಾಮ್ ನಿರ್ದೇಶನದ ಮಿಸ್ಸಿಂಗ್ ಬಾಯ್ ಈ ವಾರಾ ಬಿಡುಗಡೆಯಾಗುತ್ತಿದೆ. ಇದು ಪೊಲೀಸ್ ಅಧಿಕಾರಿಗಳ ಪಾಲಿಗೇ ಅಪರೂಪವಾಗಿ ಕಂಡಿದ್ದ ಪ್ರಕರಣ. ಇದನ್ನು ಬೇಧಿಸುವಾದ ಪೊಲೀಸ್ ಅಧಿಕಾರಿಗಳೇ ಕಣ್ಣೀರಾಗಿದ್ದರು. ಯಾವುದಕ್ಕೂ ಕೇರು ಮಾಡದ ಖಾಕಿ ಮನಸುಗಳೇ ಭಾವುಕತೆಯಿಂದ ಕಂಪಿಸಿದ್ದವು. ಆದ್ದರಿಂದಲೇ ಈ ಸಿನಿಮಾಗೂ ಸೂಪರ್ ಕಾಪ್ಗಳಿಗೂ ನೇರಾನೇರ ನಂಟಿದೆ. ಅದೇನೆಂಬುದು ಈ ವಾರವೇ ಜಾಹೀರಾಗಲಿದೆ.
ಈ ಹಿಂದೆ ಮಿಸ್ಸಿಂಗ್ ಬಾಯ್ ಚಿತ್ರದ ಬಗ್ಗೆ ಬಿಬಿ ಅಶೋಕ್ ಕುಮಾರ್ ಸೇರಿದಂತೆ ದಕ್ಷ ಅಧಿಕಾರಿಗಳೆಲ್ಲ ಹಂಚಿಕೊಂಡಿದ್ದ ಅಭಿಪ್ರಾಯಗಳನ್ನೂ ಮತ್ತೆ ಅನಾವರಣಗೊಳಿಸಲಾಗಿದೆ. ಜೊತೆಗೆ ಒಂದು ಅಚ್ಚುಕಟ್ಟಾದ ಮೇಕಿಂಗ್ ವೀಡಿಯೋವನ್ನೂ ಕೂಡಾ ರಘುರಾಮ್ ಅನಾವರಣಗೊಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಇಂಥಾದದ್ದೊಂದು ಮನ ಮಿಡಿಯುವ ಪ್ರಕರಣವನ್ನು ದಕ್ಷತೆಯಿಂದಲೇ ಹ್ಯಾಂಡಲ್ ಮಾಡಿದ್ದ ನಿವೃತ್ತ ಡಿಸಿಪಿ ಲವಕುಮಾರ್ ಅವರನ್ನೂ ಕೂಡಾ ಸನ್ಮಾನಿಸಲಾಗಿತ್ತು. ಸಂದರ್ಭಕ್ಕೆ ತಕ್ಕ ಹಾಗೆ ಹೃದಯದಿಂದಲೂ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಅಂಥಾದ್ದೊಂದು ಭಾವುಕತೆ ಖಾಕಿಯೊಳಗೆ ಇರೋದಕ್ಕೆ ಮಿಸ್ಸಿಂಗ್ ಬಾಯ್ ಕಥೆಯೇ ಉದಾಹರಣೆ. ಅಂತ ಅಧಿಕಾರಿಗಳೇ ಹೇಳಿದ್ದಾರೆ.
ಲವಕುಮಾರ್ ಕರ್ನಾಟಕ ಪೊಲೀಸ್ ಇಲಾಖೆ ಕಂಡ ದಕ್ಷ ಅಧಿಕಾರಿ. ಯಾರ ಮುಲಾಜಿಗೂ ಬೀಳದ ಅವರನ್ನು ಅದೊಂದು ಕಾಲದಲ್ಲಿ ಮಂಗಳೂರಿನ ರಾಜಕಾರಣಿಯೋರ್ವರ ರಕ್ಷಣೆಗೆ ನೇಮಿಸಲಾಗಿತ್ತು. ಈ ರಾಜಕಾರಣಿ ಅದೊಂದು ದಿನ ತಪ್ಪಿ ಮಾತಾಡಿದಾಕ್ಷಣ ಸೀದಾ ರೀವಾಲ್ವಾರಿನ ಮೊನೆಯನ್ನು ಆತ ಬಾಯಿಗೆ ತೂರಿಸಿದ್ದ ಲವ ಕುಮಾರ್ ಆ ಮಾತನ್ನು ವಾಪಾಸು ತೆಗೆದುಕೊಳ್ಳುವಂತೆ ಅಬ್ಬರಿಸಿದ್ದರಂತೆ. ಇದು ಅವರೆಂಥಾ ಖಡಕ್ ಅಧಿಕಾರಿ ಎಂಬುದರ ಪ್ರತೀಕ.ಈಗಾಗಲೇ ಕೊಂಚ ತಡವಾದರೂ ಕುತೂಹಲವನ್ನು ಕಾಯ್ದಿಟ್ಟುಕೊಂಡಿರೋ ಚಿತ್ರ ಮಿಸ್ಸಿಂಗ್ ಬಾಯ್. ಚಿತ್ರಗಳನ್ನೇ ಉಸಿರಾಗಿಸಿಕೊಂಡ ರಘುರಾಮ್ ಅವರ ಮಹಾ ಕನಸಿನಂಥಾ ಚಿತ್ರವಿದು. ಸಾಕಷ್ಟು ಏಳು ಬೀಳು ಸಂಕಟಗಳನ್ನು ಕಂಡುಂಡು ಬಂದಿರೋ ರಘುರಾಮ್ ಅವರಿಗೆ ಈ ಮೂಲಕ ಅದ್ಭುತವೆಂಬಂಥಾ ಗೆಲುವು ದಕ್ಕಲೆಂಬುದು ಎಲ್ಲರ ಹಾರೈಕ್ತೆ.
No Comment! Be the first one.