ಸಾಕಷ್ಟು ಕಾರ್ಪೋರೇಟ್ ಜಾಹೀರಾತುಗಳನ್ನು ನಿರ್ದೇಶಿಸುತ್ತಾ ಹೆಸರು ಮಡಿದ್ದ ಸಮರ್ಥ್ ನಾಯಕ್ ಈಗ ಚಿತ್ರರಂಗಕ್ಕೆ ಆಗಮಿಸಿದ್ದಾರೆ. ಜಾಹೀರಾತು ನಿರ್ದೇಶನದಲ್ಲಿ ಕಲಿತ ಅನುಭವದ ಮೂಲಕ ಅವರೀಗ ‘ಮೋಕ್ಷ’ ಹೆಸರಲ್ಲೊಂದು ಚಿತ್ರ ನಿರ್ದೇಶಿಸಿದ್ದಾರೆ. ಕನ್ನಡಕ್ಕೊಂದು ಗುಣಮಟ್ಟದ ಸಿನಿಮಾ ನೀಡುವ ವಿಶ್ವಾಸದೊಂದಿಗೆ ನಿರ್ದೇಶಕ ಸಮರ್ಥ್, ಚಿತ್ರದ ರಿಲೀಸ್‌ಗೆ ಸಿದ್ಥತೆ ನಡೆಸಿದ್ದು, ಅದರ ಪೂರ್ವಭಾವಿ ಪ್ರಚಾರಕ್ಕೆ  ಚಿತ್ರತಂಡ ಡಿಸೆಂಬರ್ ೨೪ರಂದು ಟೀಸರ್ ಬಿಡುಗಡೆ ಯಾಗುತ್ತಿದೆ.

 ನಿರ್ದೇಶಕ ಸಮರ್ಥ್ ನಾಯಕ್  ಹೇಳುವ ಪ್ರಕಾರ ಚಿತ್ರದ ಕತೆಯೇ ಇಲ್ಲಿ ಹೀರೋ. ಅದರ ಸುತ್ತ ಪಾತ್ರಗಳು ಸಾಗುತ್ತವೆ. ಪಾತ್ರವರ್ಗದಲ್ಲಿ ಜನಪ್ರಿಯ ಸ್ಟಾರ್‌ಗಳು ಇಲ್ಲದಿದ್ದರೂ ಒಂದೊಳ್ಳೆಯ ಕತೆ ಮೂಲಕ ತಾವು ಪ್ರೇಕ್ಷಕರನ್ನು ತಲುಪುತ್ತೇವೆ ಎನ್ನುವ ವಿಶ್ವಾಸದಲ್ಲಿದ್ದೇವೆ ಎನ್ನುತ್ತಾರೆ. ‘ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಚಿತ್ರ. ಮಾಸ್ಕ್‌ಮ್ಯಾನ್ ಒಬ್ಬನ ವಿಚಿತ್ರ ಕಥೆ ಹೇಳುವ ಪ್ರಯತ್ನ ಮಾಡಲಾಗಿದೆ. ಆತನೇ ಇಡೀ ಕಥೆಯ ಆಕರ್ಷಣೆ. ಅವನ ಜೊತೆಗೆ ಒಬ್ಬ ಹುಡುಗ, ಹುಡುಗಿಯ ನಡುವಿನ ಪ್ರೇಮ ಪುರಾಣವೂ ಇಲ್ಲಿದೆ.

ಚಿತ್ರದುದ್ದಕ್ಕೂ ಆ ಮಾಸ್ಕ್‌ಮ್ಯಾನ್ ಮೂಡಿಸುವ ಅಚ್ಚರಿಗಳು, ಊಹಿಸಲಾಗದಂತೆ ಕೊಡುವ ಟ್ವಿಸ್ಟ್‌ಗಳು, ಬರುವ ಪ್ರತಿ ಪಾತ್ರದ ಭಾವನೆಗಳ ತೊಳಲಾಟ, ಹುಚ್ಚು ಪ್ರೀತಿ, ದ್ವೇಷ, ಅಸೂಯೆ, ಒಂಟಿತನ, ಹತಾಶೆ ಮತ್ತು ಸಂಬಂಧಗಳ ಘರ್ಷಣೆ ಇತ್ಯಾದಿ ವಿಷಯಗಳು ಚಿತ್ರದ ಜೀವಾಳ’ ಎಂಬುದು ಸಮರ್ಥ್ ನುಡಿ. ನಾಯಕ ಮೋಹನ್ ಧನ್‌ರಾಜ್‌ಗೆ ಆರಾಧ್ಯ ಲಕ್ಷ್ಮಣ್ ನಾಯಕಿ. ಇವರಿಗೆ ಇದು ಮೊದಲ ಚಿತ್ರ. ಚಿತ್ರಕ್ಕೆ ಗುರುಪ್ರಶಾಂತ್ ರೈ, ಹಾಲಿವುಡ್‌ನ ಜೋನ್ ಜೋಸೆ- ಹಾಗು ಕಿರಣ್ ಹಂಪಾಪುರ ಛಾಯಾಗ್ರಹಣ ಮಾಡಿದರೆ, ಕಿಶನ್ ಮೋಹನ್ ಹಾಗು ಸಚಿನ್ ಬಾಲು ಸಂಗೀತವಿದೆ. ಜಯಂತ್ ಕಾಯ್ಕಿಣಿ ಹಾಗು ಕುಮಾರ್ ದತ್ ಸಾಹಿತ್ಯವಿದೆ. ದೀಪಕ್ ದೊಡ್ಡೇರ, ಅನುರಾಧ ಭಟ್ ಹಾಡಿದ್ದಾರೆ. ಚಿತ್ರದಲ್ಲಿ ತಾರಕ್ ಪೊನ್ನಪ್ಪ ತನಿಖಾಧಿಕಾರಿ ಪಾತ್ರ ನಿರ್ವಹಿಸಿದ್ದಾರೆ.

CG ARUN

ವೇಷಧಾರಿ ಬಗ್ಗೆ ವಿವರಣೆ!  

Previous article

ವಿಶೇಷ ಚಿತ್ರ : ಇದು ರೈತ ಜೀವನದ ಆತ್ಮಕಥಾನಕ…

Next article

You may also like

Comments

Leave a reply

Your email address will not be published. Required fields are marked *