Moogu Suresh
ನಿಮ್ಮ ಸಿನೆಮಾದ ಮೇಕಿಂಗ್ ನನಗೆ ಬೇರೆ ತರ ಖುಷಿ ಕೊಡುತ್ತೆ. ನನ್ನ ಸಿನೆಮಾ ಅನುಭವದಲ್ಲಿ ತುಂಬಾ youngster ಜೊತೆ ಕೆಲಸ ಮಾಡಿದ್ದೇನೆ ಆದರೆ ನಿಮ್ಮ ತಂಡದ understanding, preplans, work balance ಎಲ್ಲಾ ತುಂಬಾ ಚೆನ್ನಾಗಿತ್ತು. ನಿಮ್ಮ ತಂಡ ನನ್ನ ಮಗು ತರ ನೋಡ್ಕೊಂಡಿದ್ದು ನನಗೆ ತುಂಬಾ ಖುಷಿ ಕೊಟ್ಟಿದ್ದು ಮತ್ತೆ ನಿಮ್ಮ ಜೊತೆ ಕೆಲಸ ಮಾಡಬೇಕು ಅನ್ನೋ ಹುರುಪು ಕೊಡ್ತಿದೆ.
ಇಷ್ಡು ದಿನ ದೊಡ್ಡ ಚಿತ್ರಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದೆ. ಆದರೆ ಫೈರ್ ಫ್ಲೈ ಚಿತ್ರದಲ್ಲಿ ಒಂದು ಮುಖ್ಯ ಪಾತ್ರ ಮಾಡುತ್ತಿದ್ದೇನೆ. ನಮ್ಮ performance ಗೆ ಅಂತಾ ಒಂದಿಷ್ಟು scene ಗಳು ಇದ್ದಾಗ ನಮಗೆ acting ಮಾಡೋಕೆ ಹುಮ್ಮಸ್ಸು ಬರುತಿತ್ತು .ಈ ಪಾತ್ರಕ್ಕಿರುವ sentiment, humanity ತುಂಬಾ ಜನಕ್ಕೆ ಇಷ್ಡ ಆಗತ್ತೆ. ನನ್ನ ಇಷ್ಟು ವರ್ಷದ ವೃತ್ತಿ ಬದುಕಿನಲ್ಲಿ ನನಗೆ ಈ ತರಹದ ಪಾತ್ರ ಸಿಕ್ಕಿದ್ದು ನನಗೆ ಖುಷಿ ಇದೆ, ನಾನು producer ನ meet ಮಾಡಿಲ್ಲ but ಶೂಟಿಂಗ್ ಸೆಟ್ ನಲ್ಲಿ ನೋಡುತ್ತಿದ್ದೆ. ಸಿನೆಮಾ ತಂಡಕ್ಕೆ ಮತ್ತು director ಗೆ ಕೊಟ್ಟಿರುವ freedom ಇಷ್ಟ ಆಯಿತು.
ಕೆಲವು producer ಗಳು ದುಡ್ಡು ಹಾಕಿದ್ದೀನಿ ಅಂತಾ camera ತಲೆ ಮೇಲೇ ಕೂತಿರುತ್ತಾರೆ ಆಗ creativity ಹಾಳಾಗುತ್ತದೆ.ಒಂದು ಹೊಸ ತಂಡದ ಮೇಲೆ ಪೂರ್ಣ ಪ್ರಮಾಣದ ನಂಬಿಕೆ ಇಟ್ಟು director ಗೆ freedom ಕೊಟ್ಟಿದ್ದು ಮತ್ತು ಅಷ್ಟೇ ನಿಷ್ಟೆಯಿಂದ ನೀವು ಕೆಲಸ ಮಾಡಿದ್ದು ನನಗೆ ತುಂಬಾ ಇಷ್ಟವಾಯಿತು. ನಿವೇದಿತಾ ಅವರು ಮುಂದಿನ ತಲೆಮಾರಿನವರಿಗೆ ಕೆಲಸ ಕೊಟ್ಟಿದ್ದು ತುಂಬಾ ಖುಷಿ ಕೊಟ್ಟದೆ.
Firefly ಒಂದು ಹೊಸ ಯುವ ತಂಡ ಎಲ್ಲೆರಲ್ಲೂ ಬೇಳಿಬೇಕು ಅನ್ನೋ ಉತ್ಸಾಹ ಇದೆ. ತುಂಬಾ ಶ್ರಧ್ಧೆ ಇಟ್ಟು ಕೆಲಸ ಮಾಡ್ತಾರೆ. ಅವರಲ್ಲಿ ಇದ್ದ understanding ಹಾಗೂ ಅವರ ಕೆಲಸದ ಕ್ರಮ ನನಗೆ ತುಂಬಾ ಇಷ್ಟ ಆಯಿತು.ನಾವು ಮೈಸೂರು ಮತ್ತು ಕನಕಪುರದಲ್ಲಿ outdoor ಶೂಟಿಂಗ್ ಮಾಡಿದ್ವಿ ಕನಕಪುರದಲ್ಲಿ ಒಂದು ಹೂ ತೋಟದಲ್ಲಿ ರಾತ್ರಿ ಶೂಟ್ ಮಾಡ್ಬೇಕಾದ್ರೆ ತುಂಬಾ ಚಳಿ ಇತ್ತು ಮತ್ತು ನನಗೆ ನಿದ್ದೆ ಬರ್ತಾ ಇತ್ತು ಆದರೆ director ಯಾವಾಗ lights on ಅನ್ನೋರೋ ಅಲ್ಲಿ ಒಂದು ಹೊಸ ಲೋಕ ಸೃಷ್ಟಿ ಆಗ್ತಿತ್ತು.ಇದು acting ಮಾಡೋಕೆ ತುಂಬಾ ಹುರುಪು ಕೊಡ್ತಿತ್ತು.
Director ವಂಶಿ ಅವರು actor ಆಗಿರೋದ್ರಿಂದ ಇಷ್ಟೇ ಬೇಕು, ಹೀಗೆ ಬರಬೇಕು ಅಂತ ತುಂಬಾ ಪ್ಲಾನ್ ಮಾಡಿಕೊಂಡು ಬರುತ್ತಿದ್ದರು. Director ತುಂಬಾ settled ಆಗಿ acting ಮಾಡಿಸುತ್ತಿದ್ದರು, ಆಗ ನನ್ನ expression ಹೇಗೆ ಬರುತ್ತೆ ಅಂದುಕೊಂಡಿದ್ದೆ ಆದ್ರೆ DOP ತುಂಬಾ ಚೆನ್ನಾಗಿ ಶೂಟ್ ಮಾಡಿದ್ದಾರೆ. Dubbing time ಅಲ್ಲಿ screen ಮೇಲೆ ನೋಡಿದಾಗ ತುಂಬಾ colorful ಆಗಿ ಮನಮುಟ್ಟುವಂತೆ ಕಾಣುತ್ತಿತ್ತು. ಈ ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಆಯಾಮ ಸೃಷ್ಟಿಯಾಗುತ್ತದೆ.
No Comment! Be the first one.