ನಿಹಾರಿಕಾ ಮೂವೀಸ್ ಲಾಂಛನದಲ್ಲಿ ಶ್ರೀಹರಿ ನಿರ್ಮಿಸಿರುವ ‘ಮೌನಂ’ ಚಿತ್ರಕ್ಕೆ ಚಂದ್ರಾ ಲೇಔಟ್ನಲ್ಲಿರುವ ವೈನಾಟ್ ಸ್ಟುಡಿಯೋವಿನಲ್ಲಿ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ. ಈ ಚಿತ್ರಕ್ಕೆ ರಾಜ್ ಪಂಡಿತ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಇನ್ನು ಶಂಕರ್ ಛಾಯಾಗ್ರಹಣ, ಆರವ್ ರಿಶಿಕ್ ಸಂಗೀತ, ಗುರುಮೂರ್ತಿ ಹೆಗಡೆ ಸಂಕಲನ, ಕೌರವ ವೆಂಕಟೇಶ್ ಮತ್ತು ಅಲ್ಟಿಮೇಟ್ ಶಿವು ಸಾಹಸ ಸಂಯೋಜನೆ ಚಿತ್ರಕ್ಕಿದೆ. ಮೌನಂ ನಲ್ಲಿ ಅವಿನಾಶ್, ಕೃಷ್ಣ ಲೀಲಾ ಮಯೂರಿ ಪ್ರಧಾನ ಪಾತ್ರದಲ್ಲಿದ್ದು, ಬಾಲಾಜಿ ಶರ್ಮ, ಹನುಮಂತೇಗೌಡ, ರಿತೇಶ್, ಕೆಂಪೇಗೌಡ, ಗುಣವಂತ ಮಂಜು, ನಯನ (ಕಾಮಿಡಿ ಲಕಿಲಾಡಿಗಳು), ಸಿಂಚನ, ಮಂಜುಳಾ ರೆಡ್ಡಿ, ಮುಂತಾದವರಿದ್ದಾರೆ.
No Comment! Be the first one.