ಕಳೆದ ವರ್ಷ ಶಿವ ಕಾರ್ತಿಕೇಯನ್ ಅವರನ್ನು ಸೀಮರಾಜ ಸಿನಿಮಾದ ಮೂಲಕ ನೋಡಿದ್ದರು. ಅದಾದಮೇಲೆ ಅಭಿಮಾನಿಗಳ ಮುಂದೆ ಕಾಣಿಸದ ಶಿವ ಕಾರ್ತಿಕೇಯನ್ ನಂತರ ಅರುಣ್ ರಾಜ ಕಾಮರಾಜ್ ನಿರ್ದೇಶನದ ಸ್ಪೋರ್ಟ್ ಡ್ರಾಮ ಕನ್ನಾ ಸಿನಿಮಾದಲ್ಲಿ ಅಭಿನಯಿಸುತ್ತಿದ್ದರು. ಇವರಿಗೆ ಐಶ್ವರ್ಯಾ ರಾಜೇಶ್ ಜತೆಯಾಗಿದ್ದಾರೆ. ಸದ್ಯ ಈ ಸಿನಿಮಾ ರಿಲೀಸ್ ಗೆ ದಿನಗಣನೆ ಮಾಡುತ್ತಿದ್ದು ಇದೇ ತಿಂಗಳು ಸಿನಿಮಾ ರಿಲೀಸ್ ಆಗಲಿದೆ.
ಕನ್ನಾ ನಂತರ ಶಿವ ಕಾರ್ತಿಕೇಯನ್ ಮಿಸ್ಟರ್ ಲೋಕಲ್ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾವನ್ನು ರಾಜೇಶ್ ಎಂ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಕಾಡುವಲ್ ಇರುಕ್ಕನ್ ಕುಮಾರು ಸಿನಿಮಾವನ್ನು ರಾಜೇಶ್ ನಿರ್ದೇಶಿಸಿದ್ದರು. ಇನ್ನು ಶಿವ ಕಾರ್ತಿಕೇಯನ್ ಗೆ ಜತೆಯಾಗಿ ಲೇಡಿ ಸೂಪರ್ ಸ್ಟಾರ್ ನಯನತಾರಾ ಅಭಿನಯಿಸುತ್ತಿದ್ದಾರೆ. ಇದು ಶಿವ ಕಾರ್ತಿಕೇಯನ್ ಮತ್ತು ನಯನಾ ತಾರಾ ಎರಡನೇ ಸಿನಿಮಾವಾಗಿದ್ದು, ಈ ಮೊದಲು ಮೋಹನ್ ರಾಜಾ ನಿರ್ದೇಶನದ ವೇಳೈಕರನ್ ನಲ್ಲಿ ಅಭಿನಯಿಸಿದ್ದರು. ಮಿಸ್ಟರ್ ಲೋಕಲ್ ಸಿನಿಮಾವನ್ನು ಸ್ಟುಡಿಯೋ ಗ್ರೀನ್ ನಿರ್ಮಾಣ ಮಾಡುತ್ತಿದೆ. ಸದ್ಯದ ಸುದ್ದಿ ಏನಂದ್ರೆ ಮಿಸ್ಟರ್ ಲೋಕಲ್ ಸ್ಯಾಟಲೈಟ್ ಹಕ್ಕನ್ನು ಸನ್ ನೆಟವರ್ಕ್ ದುಬಾರಿ ಮೊತ್ತದಲ್ಲಿಯೇ ಖರೀದಿ ಮಾಡಿದೆಯಂತೆ.
Leave a Reply
You must be logged in to post a comment.