ಕುಂದನ್ ಆರ್ಟ್ಸ್ ಲಾಂಛನದಲ್ಲಿ ಇಂದ್ರಜಿತ್ ಕುಮಾರ್(ರಿಲೆಯನ್ಸ್) ಅವರು ನಿರ್ಮಿಸುತ್ತಿರುವ ‘ಮಿಸ್ಟರ್ ರಾವಣ‘ ಚಿತ್ರ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಈ ಚಿತ್ರದ ಚಿತ್ರೀಕರಣ ಮುಂಬೈನ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಆರಂಭವಾಗಿ, ಮುಂಬೈನಲ್ಲೇ ಹತ್ತು ದಿನಗಳ ಚಿತ್ರೀಕರಣ ನಡೆದಿದೆ. ಕುಂದನ್ ರಾಜ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಇದೇ ತಿಂಗಳ ೨೪ರಿಂದ ದ್ವಿತೀಯ ಹಂತದ ಚಿತ್ರೀಕರಣ ಅನಂತಪುರದಲ್ಲಿ ಆರಂಭವಾಗಲಿದೆ. ಕರ್ನಾಟಕ, ಕೇರಳ, ತಮಿಳುನಾಡು, ಹೈದರಾಬಾದ್, ಮುಂಬೈನಲ್ಲಿ ಚಿತ್ರೀಕರಣ ನಡೆಯಲಿದ್ದು, ಏಪ್ರಿಲ್‌ನಲ್ಲಿ ಚಿತ್ರೀಕರಣ ಮುಕ್ತಾಯವಾಗಲಿದೆ.

ಕೆ.ರಾಘವೇಂದ್ರ ರಾವ್, ಜಯಂತ್ ಪರಾಂಜಿ ಮುಂತಾದವರ ಬಳಿ ಸಹಾಯಕರಾಗಿ ಕಾರ್ಯ ನಿರ್ವಹಿಸಿರುವ ಕುಂದನ್ ರಾಜ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಚಿತ್ರದ ಕಥೆ ಸಿದ್ದಪಡಿಸಲು ಸುಮಾರು ೨ ವರ್ಷಗಳ ಕಾಲ ಹಿಡಿದಿರುವುದಾಗಿ ತಿಳಿಸಿರುವ ಕುಂದನ್ ರಾಜ್ ಇದೊಂದು ಬಹುಕೋಟಿ ವೆಚ್ಚದ, ಅದ್ದೂರಿ ಚಿತ್ರ ಎಂದು ತಿಳಿಸಿದ್ದಾರೆ. ಮಿಸ್ಟರ್ ಇಂಡಿಯಾ ಅನೂಪ್ ಸಿಂಗ್ ಠಾಕೂರ್ ಮಾರ್ಡನ್ ರಾವಣನ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಖ್ಯಾತ ನಟ ಕಬೀರ್ ಸಿಂಗ್, ಸಲೋನಿ, ತಮನ್ನ ನ್ಯಾಸ್, ಜಾನಿ ಲಿವರ್, ಮೋನಿಕಾ ಠಾಕೂರ್, ಮಧುಬಾಲ ಮುಂತಾದವರ ಅದ್ದೂರಿ ತಾರಾಬಳಗ ಈ ಚಿತ್ರದಲ್ಲಿದೆ. ೬ ಹಾಡುಗಳು, ೪ ಸಾಹಸ ಸನ್ನಿವೆಶಗಳು, ೭ ಚೇಸಿಂಗ್ ದೃಶ್ಯಗಳು ‘ಮಿಸ್ಟರ್ ರಾವಣ‘ದಲ್ಲಿದೆ. ಸುರೇಂದ್ರ ರೆಡ್ಡಿ ಈ ಚಿತ್ರದ ಛಾಯಾಗ್ರಾಹಕರು.

CG ARUN

ಕಂಠೀರವ ಸ್ಟುಡಿಯೊದಲ್ಲಿ ‘ಕೈಲಾಸ‘ ಚಿತ್ರಕ್ಕೆ ಚಾಲನೆ!

Previous article

You may also like

Comments

Leave a reply

Your email address will not be published. Required fields are marked *