ಶಿವರಾಜ್ ಕುಮಾರ್ ಮತ್ತು ಶ್ರೀಮುರಳಿ ಕಾಂಬಿನೇಷನ್ನಿನ ಸೂಪರ್ ಹಿಟ್ ಸಿನಿಮಾ ಮಫ್ತಿ. ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಭೈರತಿ ರಣಗಲ್ ಪಾತ್ರವು ಹೆಚ್ಚು ಜನಮನ್ನಣೆಯನ್ನು ಗಳಿಸಿತ್ತು. ಹೊಸ ವಿಚಾರ ಏನಂದ್ರೆ ಈ ಕನ್ನಡದ ಸಿನಿಮಾ ತಮಿಳಿನಲ್ಲಿ ರಿಮೇಕ್ ಆಗಲಿದೆ. ಇತ್ತೀಚಿಗೆ ಚಿತ್ರದ ಮುಹೂರ್ತ ಕಾರ್ಯಕ್ರಮವನ್ನು ಮುಗಿಸಿಕೊಂಡಿರುವ ಚಿತ್ರತಂಡ ಸದ್ಯದಲ್ಲಿಯೇ ಶೂಟಿಂಗ್ ಆರಂಭಿಸಲಿದೆ.
ತಮಿಳಿನಲ್ಲಿ ಗ್ಯಾಂಗ್ ಸ್ಟರ್ ಭೈರತಿ ರಣಗಲ್ ಪಾತ್ರವನ್ನು ಸಿಂಬು ನಿರ್ವಹಿಸುತ್ತಿದ್ದು, ಶ್ರೀ ಮುರಳಿಯ ಪಾತ್ರವನ್ನು ಗೌತಮ್ ಕಾರ್ತಿಕ್ ನಿರ್ವಹಿಸಲಿದ್ದಾರೆ. ಕನ್ನಡದಲ್ಲಿ ಮಫ್ತಿಯನ್ನು ನಿರ್ದೇಶಿಸಿದ್ದ ನರ್ತನ್ ಅವರೇ ತಮಿಳಿನಲ್ಲಿಯೂ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿದ್ದಾರೆ. ಇನ್ನು ಬಾಹುಬಲಿ ತಮಿಳು ಚಿತ್ರಕ್ಕೆ ಡೈಲಾಗ್ ಬರೆದಿದ್ದ ಮಾಧವನ್ ಕಾರ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
Comments