ಎರಡು ವರ್ಷಗಳ ಹಿಂದೆ ಶ್ರೀಮುರಳಿ ಅಭಿನಯದ ಮಫ್ತಿ ಚಿತ್ರ ತೆರೆ ಕಂಡಿತ್ತು. ಅದರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಿರ್ವಹಿಸಿದ್ದ ಭೈರತಿ ರಣಗಲ್ ಪಾತ್ರಕ್ಕೆ ಫಿದಾ ಆಗದವರೇ ಇಲ್ಲ. ಇಂಥಾದ್ದೊಂದು ನವೀನ ಪಾತ್ರಗಳನ್ನು ಸೃಷ್ಟಿಸಿ ಸೂಪರ್ ಹಿಟ್ ಅನ್ನಿಸಿಕೊಂಡ ಈ ಚಿತ್ರ ನಿರ್ದೇಶನ ಮಾಡಿದ್ದವರು ನರ್ತನ್. ಇಂಥಾ ಮಫ್ತಿ ಇದೀಗ ತಮಿಳಿಗೆ ರೀಮೇಕ್ ಆಗುತ್ತಿದೆ. ತಮಿಳಿನಲ್ಲಿ ಈಗಾಗಲೇ ಮಫ್ತಿಯ ಮರು ಸೃಷ್ಟಿ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ವಿಶೇಷವೆಂದರೆ ನರ್ತನ್ ಅವರೇ ತಮಿಳಿನಲ್ಲಿಯೂ ಮಫ್ತಿ ರೀಮೇಕ್ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಆದರೆ ಕನ್ನಡದಲ್ಲಿ ಶ್ರೀಮುರಳಿ ಮತ್ತು ಶಿವಣ್ಣ ನಿರ್ವಹಿಸಿದ್ದ ಪಾತ್ರಗಳನ್ನು ಯಾರು ಮಾಡಲಿದ್ದಾರೆಂಬ ಬಗ್ಗೆ ನಿಖರವಾಗಿ ಯಾವ ಸುದ್ದಿಯೂ ಹೊರ ಬಿದ್ದಿಲ್ಲ. ಇದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಶಿವರಾಜ್ ಕುಮನಾರ್ ಮತ್ತು ಶ್ರೀಮುರಳಿ ಪಾತ್ರಗಳಿಗೆ ತಮಿಳಿನಲ್ಲಿ ಯಾವ ನಟರನ್ನು ಆಯ್ಕೆ ಮಾಡಿಒಕೊಳ್ಳ ಬೇಕು ಅನ್ನೋದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಆದರೆ ಒಂದು ಮೂಲದ ಪ್ರಕಾರ ಭೈರತಿ ರಣಗಲ್ ಪಾತ್ರಕ್ಕೆ ಸಿಂಬು ಆಯ್ಕೆಯಾಗೋ ಎಲ್ಲ ಲಕ್ಷಣಗಳೂ ಇವೆ. ಸಿಂಬುಗೆ ನಿರ್ದೇಶಕ ನರ್ತನ್ ಈಗಾಗಲೇ ಕಥೆ ಹೇಳಿದ್ದಾರೆ. ಸಿಂಬು ಕೂಡಾ ಅದನ್ನು ಮೆಚ್ಚಿಕೊಂಡಿದ್ದಾರಂತೆ. ಈ ಬಗೆಗಿನ ಅಧಿಕೃತ ಮಾಹಿತಿ ಶೀಘ್ರದಲ್ಲಿಯೇ ಹೊರ ಬೀಳಲಿದೆ.
No Comment! Be the first one.