ರಂಗಿತರಂಗ ಖ್ಯಾತಿಯ ರಾಧಿಕ ಚೇತನ್ ಹಾಗೂ ಪ್ರವೀಣ್ ತೇಜ್ ಅಭಿನಯದ ಮುಂದಿನ ನಿಲ್ದಾಣ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.
ವಿಭಿನ್ನ ಕಥಾಹಂದರ ಒಳಗೊಂಡಿರುವ ಈ ಚಿತ್ರವನ್ನು ವಿನಯ್ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ. ಇನ್ನು ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಸ್ಟುಡಿಯೋದಲ್ಲಿ ನಡೆದಿದ್ದು, ಕನ್ನಡದ ನಿರ್ದೇಶಕರೊಬ್ಬರು ಮುಂಬೈ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿರುವ ಹೆಗ್ಗಳಿಕೆ ಮುಂದಿನ ನಿಲ್ದಾಣ ಚಿತ್ರತಂಡದ್ದು.
ಪ್ಯಾಟೆಮಂದಿ ಕಾಡಿಗ್ ಬಂದ್ರು ಚಿತ್ರದ ಮೂಲಕ ಕಿರುತೆರೆಗೆ ಪರಿಚಯವಾದ ಪ್ರವೀಣ್ ನಂತರ ಅನೇಕ ಧಾರವಾಹಿಗಳಲ್ಲಿ ಅಭಿನಯಿಸಿ ಹಿರಿತೆರೆಗೆ ಎಂಟ್ರಿಕೊಟ್ಟರು. ಚೂರಿಕಟ್ಟೆ, ಸ್ಟ್ರೈಕರ್, ಕುಚ್ಚಿಕೂ ಕುಚ್ಚಿಕು ಚಿತ್ರಗಳಲ್ಲಿ ಅಭಿನಯಿಸಿರುವ ಪ್ರವೀಣ್ ಮುಂದಿನ ನಿಲ್ದಾಣದ ಮೂಲಕ ಮತ್ತೊಮ್ಮೆ ಕಮ್ ಬ್ಯಾಕ್ ಆಗಿದ್ದಾರೆ.