ಒಬ್ಬ ವ್ಯಕ್ತಿ, ಸಿನಿಮಾ ನಿರ್ಮಾಪಕ, ಉದ್ಯಮಿ,  ಜನನಾಯಕ, ರಾಜಕಾರಣಿ, ಸ್ನೇಹಿತ, ಮನೆ ಒಡೆಯನಾಗಿ, ಹಲವು ಸಂಸ್ಥೆಗಳ ಮುಂದಾಳಾಗಿ ನಿಲ್ಲುವುದು ಮತ್ತು ಕಾಲಿಟ್ಟ ಪ್ರತಿಯೊಂದೂ ಕ್ಷೇತ್ರದಲ್ಲಿ ಗೆಲ್ಲುವುದಿದೆಯಲ್ಲಾ? ಅದು ತೀರಾ ಅಪರೂಪಕ್ಕೆ, ಅತಿ ವಿರಳರಿಗೆ ಮಾತ್ರ ಸಾಧ್ಯವಾಗುವಂಥದ್ದು. ಈ ನಿಟ್ಟಿನಲ್ಲಿ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಪರಿಪೂರ್ಣ ಯಶಸ್ಸು ಪಡೆದಿರುವ, ಅಪರೂಪದಲ್ಲಿ ಅಪರೂಪದ ವ್ಯಕ್ತಿ ಮುನಿರತ್ನ ಅನ್ನೋದರಲ್ಲಿ ಯಾವ ಅನುಮಾನವೂ ಇಲ್ಲ.

ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಇರಲಿ ಅಲ್ಲಿ ಮುನಿರತ್ನ ಇರುತ್ತಾರೆ. ನಿರ್ಮಾಪಕರ ಸಂಘಕ್ಕಂತೂ ಇವರೇ ಕಟ್ಟಾಳು. ಇತ್ತ ರಾಜಕಾರಣಕ್ಕೆ ಬಂದರೆ, ನಗರಪಾಲಿಕೆ ಸದಸ್ಯ ಸ್ಥಾನದಲ್ಲಿ ಗೆಲುವು ಕಾಣುತ್ತಾ ಕ್ರಮೇಣ ಶಾಸಕರಾಗಿ ಆಯ್ಕೆಯಾದವರು ಮುನಿರತ್ನ. ಬಹುಶಃ ತೀರಾ ಸಣ್ಣ ವಯಸ್ಸಿಗೇ ಅಸಾಧ್ಯ ನೋವುಗಳನ್ನುಂಡು, ಪಡಬಾರದ ಕಷ್ಟ ಪಟ್ಟು, ಹಂತ ಹಂತವಾಗಿ ಮೇಲೇರಿದ ಮತ್ತು ಬದುಕಿನ ಬೇರನ್ನು ಕಂಡ ಕಾರಣಕ್ಕೇ ಮುನಿರತ್ನ ಎನ್ನುವ ಏಕ ವ್ಯಕ್ತಿ ಇಂದು ಹಲವು ಕ್ಷೇತ್ರಗಳ ಶಕ್ತಿಯಾಗಿ ಬೆಳೆದುನಿಂತಿರಬಹುದು.

ಸಾಮಾನ್ಯವಾಗಿ ಜನನಾಯಕರನ್ನು ಕಾಣಬೇಕಾದರೆ ಸಾಕಷ್ಟು ತಡೆಗೋಡೆಗಳನ್ನು ದಾಟಿ ಸಾಗಬೇಕು ಅನ್ನೋ ಸ್ಥಿತಿ ಬಹುತೇಕ ಕಡೆ ಇರುತ್ತದೆ. ಆದರೆ ಮುನಿರತ್ನ ಅವರ ವಿಚಾರದಲ್ಲಿ ಅದು ಹಾಗಾಗಿಲ್ಲ. ಎಲ್ಲರಿಗೂ ಲಭ್ಯವಾಗುವ ಶಾಸಕರಿವರು. ಯಾರದ್ದೇ ಸಮಸ್ಯೆಯಾದರೂ ಅದು ತಮ್ಮದೇ ಖಾಸಗೀ ವಿಚಾರ ಎನ್ನುವಷ್ಟರ ಮಟ್ಟಿಗೆ ಸ್ವೀಕರಿಸಿ ಬಗೆಹರಿಸಬಲ್ಲ ತಾಯಿ ಹೃದಯ ಇವರದ್ದು. ಬಹುಶಃ ಇದೇ ಕಾರಣಕ್ಕೆ ಬೆಂಗಳೂರಿನ ಉದ್ದಗಲಕ್ಕೆ ವ್ಯಾಪಿಸಿರುವ ರಾಜರಾಜೇಶ್ವರಿ ನಗರದಂಥ ಬೃಹತ್ ಕ್ಷೇತ್ರದಲ್ಲಿ ಜನ ಮುನಿರತ್ನ ಅವರನ್ನು ಒಡಹುಟ್ಟಿದ ಸಹೋದರನಿಗಿಂತಾ ಹೆಚ್ಚು ಪ್ರೀತಿ ನೀಡುವುದು. ಅಸಹಾಯಕರ ನೋವಿಗೆ ಮಿಡಿಯುವ, ಪ್ರತಿಯೊಬ್ಬರ ಕಷ್ಟವನ್ನು ಅರಿಯುವ ಗುಣ ಮುನಿರತ್ನ ಅವರನ್ನು ಇಂದು ಜನನಾಯಕನನ್ನಾಗಿ ರೂಪಿಸಿದೆ ಎನ್ನುವುದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ.

ಕೆಂಪೇಗೌಡರು ಕಟ್ಟಿದ ಬೆಂಗಳೂರು ಇವತ್ತು ಇಡೀ ಜಗತ್ತಿಗೇ ಫೇಮಸ್ಸು. ಆದರೆ,  ಅಭಿವೃದ್ಧಿಯ ವಿಚಾರದಲ್ಲಿ ಹಲವು ದಶಕಗಳಿಂದ ಕಂಗಾಲಾಗುವಷ್ಟರ ಮಟ್ಟಿಗೆ ಕೊರತೆಗಳಿದ್ದದ್ದು ಮಾತ್ರ ನಿಜ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮುನಿರತ್ನ ಆಯ್ಕೆಯಾಗಿ ಬಂದ ನಂತರದ ವರ್ಷಗಳಲ್ಲಿ ಈ ಕ್ಷೇತ್ರ ರೂಪಾಂತರಗೊಂಡ ಪರಿ ನಿಜಕ್ಕೂ ಅಚ್ಚರಿ ಮೂಡಿಸುವಂಥದ್ದು. ಎಷ್ಟೋ ವರ್ಷಗಳಿಂದ ಅಸಾಧ್ಯವೆನ್ನುವಂತೆ ಕಾರ್ಯರೂಪಕ್ಕೆ ಬರದೆ, ನೆನೆಗುದಿಗೆ ಬಿದ್ದಿದ್ದ ಅಗಣಿತ ಅಭಿವೃದ್ಧಿ ಕಾಮಗಾರಿಗಳನ್ನು ಮುನಿರತ್ನ ಪವಾಡದಂತೆ ಮಾಡಿ ಮುಗಿಸಿದರು. ಬೃಹತ್ ನೀರು ಕಾಲುವೆಗಳ ಅಭಿವೃದ್ಧಿ, ಉದ್ಯಾನವನಗಳ ಉನ್ನತೀಕರಣ, ರಸ್ತೆ, ಒಳಚರಂಡಿ ಕಾಮಗಾರಿಗಳು, ಕುಡಿಯುವ ನೀರಿನ ವ್ಯವಸ್ಥೆ, ಪ್ರತಿಯೊಂದನ್ನೂ ಅತ್ಯಾಧುನಿಕ ರೀತಿಯಲ್ಲಿ ಕಟ್ಟಿನಿಲ್ಲಿಸಿದ ಮುನಿರತ್ನ ಅವರ ಪರಿಶ್ರಮ  ದೊಡ್ಡದು.

ತಾವು ವಾಸಿಸುವ ನಗರ ಹೇಗೆಲ್ಲಾ ಇರಬೇಕು ಅಂತಾ ಜನ ಕನಸು ಕಾಣುತ್ತಿದ್ದರೋ ಅದನ್ನು ಅಕ್ಷರಶಃ ನನಸು ಮಾಡಿಸಿದ ಛಲಗಾರ ಮುನಿರತ್ನ. ತೀರಾ ಸರಳ ಎನ್ನಿಸುವ ಅವರ ನಡೆ, ನುಡಿ. ಎಲ್ಲರೊಂದಿಗೆ ಬೆರೆಯುವ ಆತ್ಮೀಯ ವ್ಯಕ್ತಿತ್ವ. ನಾಯಕತ್ವ ಗುಣ ಇಂದು ಮುನಿರತ್ನರನ್ನು ಬೇರೆಯದ್ದೇ ಮಟ್ಟಕ್ಕೆ ಕೊಂಡೊಯ್ದು ನಿಲ್ಲಿಸಿದೆ. ಪಕ್ಷ  ಯಾವುದಾದರೂ ಸರಿ ವ್ಯಕ್ತಿ ನಮ್ಮವರು ಅಂತಾ ರಾಜರಾಜೇಶ್ವರಿ ನಗರದ ಜನ ಮುನಿರತ್ನ ಅವರನ್ನು ಒಪ್ಪಿಕೊಂಡು ಸಾಕಷ್ಟು ಸಮಯ ಕಳೆದಿದೆ. ಮುನಿರತ್ನ ಅವರ ಪ್ರಾಮಾಣಿಕತೆಯ ಎದುರು ಯಾವುದೇ ಕಪಟಗಳು, ಕುಯುಕ್ತಿ, ಪೊಳ್ಳು ಆಟಗಳು ನಡೆಯೋದಿಲ್ಲ. ಮುನಿರತ್ನರ ಆಯ್ಕೆಯ ಹೊರತಾಗಿ ರಾಜರಾಜೇಶ್ವರಿ ನಗರದಲ್ಲಿ ಅನ್ಯ ಮಾರ್ಗವೇ ಇಲ್ಲ. ಇದು ಪದೇ ಪದೇ ಋಜುವಾತಾಗಿರುವ ಮತ್ತು ಮುಂದೆಯೂ ಮರುಕಳಿಸಲಿರುವ ನಿಜ ಸಂಗತಿ.

ಕೊರೋನಾ ಮಾರಿಗೆ ಹೆದರಿ ಹೊಟ್ಟೆಪಾಡಿಗಾಗಿ ಜಾಗ ಬಿಡಲು ರೆಡಿಯಾಗಿದ್ದವರನ್ನು ತಡೆದು ನಿಲ್ಲಿಸಿ ನಾನಿದ್ದೇನೆ ಇರಿ ಎಂದು ಧೈರ್ಯ ತುಂಬಿ, ಬಡವರು, ನಿರ್ಗತಿಕರಿಗೆ ಆಹಾರದ ವ್ಯವಸ್ಥೆ ಮಾಡಿದರಲ್ಲಾ? ಕೋವಿಡ್ ಹಿನ್ನೆಲೆಯಲ್ಲಿ ಅಸಹಾಯಕರಿಗೆ 25 ಕೆ.ಜಿ. ಅಕ್ಕಿ, 2 ಕೆ.ಜಿ. ಅಡುಗೆ ಎಣ್ಣೆ,  2 ಕೆಜಿ ತೊಗರಿ ಬೇಳೆ, ಸಕ್ಕರೆ, ಉಪ್ಪು ತರಕಾರಿ ಒಳಗೊಂಡ ಇಪ್ಪತ್ತು ಲಕ್ಷಕ್ಕೂ ಅಧಿಕ ಕಿಟ್ ಗಳನ್ನು ವಿತರಣೆ ಮಾಡಿದ ಮುನಿರತ್ನ ಅವರನ್ನು ಈ ಕ್ಷೇತ್ರದ ಜನ ಮರೆಯುವುದಾದರೂ ಹೇಗೆ? ರಾಜರಾಜೇಶ್ವರಿ ನಗರ ವಿದ್ಯಾವಂತ, ಆರ್ಥಿಕ ಸಬಲರಿಂದ ಹಿಡಿದು, ದುಡಿಯುವ, ಶ್ರಮಿಕವರ್ಗದ ತನಕ ಎಲ್ಲ ಬಗೆಯ ಜನರನ್ನೂ ಒಳಗೊಂಡಿರುವ ವಿಶಾಲವಾದ ಕ್ಷೇತ್ರ. ಯಾರನ್ನೂ ಮೇಲು ಕೀಳೆನ್ನದೆ ಭಾವಿಸಿ, ಎಲ್ಲರೂ ನನ್ನವರು ಎಂದು ಭಾವಿಸಿ, ಪ್ರೀತಿ ಉಳಿಸಿಕೊಂಡಿರುವ, ಸಂಕಷ್ಟದಲ್ಲಿರುವವರನ್ನು ಮನೆ ಒಡೆಯನಂತೆ ಪೊರೆಯುತ್ತಿರುವ ಮುನಿರತ್ನ ಈ ಚುನಾವಣೆಯಲ್ಲಿ ಮತ್ತೆ ಆಯ್ಕೆಯಾಗಲಿ ಎನ್ನುವುದೇ ಎಲ್ಲರ ಹರಕೆಯಾಗಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಶೇ 50 ಠೇವಣಿ ಶುಲ್ಕ ಕಡಿತ…

Previous article

ಇವು ಫೋಟೋಗಳಲ್ಲ… ಪೇಂಟಿಂಗ್ಸ್!‌

Next article

You may also like

Comments

Leave a reply

Your email address will not be published. Required fields are marked *