ಬಾಲಿವುಡ್ನ ‘ಮುನ್ನಾ ಮೈಕೇಲ್’ ಎಂಬ ಸಿನಿಮಾದಲ್ಲಿ ಅಭಿನಯಿಸಿರುವ ಹೈದರಾಬಾದಿನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಬೆಳೆದ ನಿಧಿ ಅಗರ್ವಾಲ್ ಪಾಸ್ಪೋರ್ಟ್ ಕಳೆದುಕೊಂಡಿದ್ದಾರೆ. ನಿಧಿ ಅಗರ್ವಾಲ್ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಯಾವುದೂ ನಿರೀಕ್ಷಿಸಿದ ಮಟ್ಟಕ್ಕೆ ಹೆಸರು ಮಾಡಲಿಲ್ಲ. ಸದ್ಯಕ್ಕೆ ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಇಸ್ಮಾರ್ಟ್ ಶಂಕರ್’ ಸಿನಿಮಾ ಬಗ್ಗೆ ನಿಧಿ ತುಂಬಾ ಹೋಪ್ಸ್ ಇಟ್ಟುಕೊಂಡಿದ್ದಾರೆ.
ಇತ್ತೀಚೆಗೆ ವಾರಣಾಸಿ ಶೆಡ್ಯೂಲ್ ಪೂರ್ಣಗೊಂಡಿರುವ ಇಸ್ಮಾರ್ಟ್ ಶಂಕರ್ ಚಿತ್ರತಂಡ ಶೀಘ್ರದಲ್ಲೇ ಹಾಡಿನ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹಾರಲಿದೆ. ಆದರೆ ನಿಧಿ ಅಗರ್ವಾಲ್ ತನ್ನ ಪಾಸ್ಪೋರ್ಟ್ ಕಳೆದುಕೊಂಡಿದ್ದು ಅವರ ಫಾರಿನ್ ಶೂಟಿಂಗ್ ಬಗ್ಗೆ ಅನುಮಾನಗಳು ಮೂಡಿದ್ದವು. ಆದರೆ ನನ್ನಿಂದ ಈ ಶೆಡ್ಯೂಲ್ ತಡವಾಗಬಾರದು ಎಂಬ ಕಾರಣಕ್ಕೆ ತುಂಬಾ ಕಷ್ಟಪಟ್ಟು ಅಧಿಕಾರಿಗಳನ್ನು ಭೇಟಿ ಮಾಡಿ ಹೊಸ ಪಾಸ್ಪೋರ್ಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ ನಿರೀಕ್ಷಿಸಿದ ಸಮಯಕ್ಕೆ ಫಾರಿನ್ ಶೆಡ್ಯೂಲ್ ಪ್ರಾರಂಭವಾಗುತ್ತಿದೆಯಂತೆ. ರಾಮ್ ಹೀರೋ ಆಗಿರುವ ಈ ಸಿನಿಮಾವನ್ನು ಪುರಿ ಜಗನ್ನಾಥ್ ನಿರ್ದೇಶಿಸುತ್ತಿದ್ದಾರೆ. ಇಸ್ಮಾರ್ಟ್ ಶಂಕರ್ ಸಿನಿಮಾದಲ್ಲಿ ನಿಧಿ ಜತೆಗೆ ನಭಾ ನಟೇಶ್ ಸಹ ಅಭಿನಯಿಸಿದ್ದಾರೆ. ಪುರಿ ಜತೆಗೆ ಕೈ ಜೋಡಿಸಿ ಚಾರ್ಮಿ ಕೌರ್ ನಿರ್ಮಿಸುತ್ತಿರುವ ಈ ಸಿನಿಮಾಗೆ ಮಣಿಶರ್ಮ ಸಂಗೀತ ಇದೆ.
No Comment! Be the first one.