ಭಾರತದಲ್ಲಿ ತೃತೀಯ ಲಿಂಗಿಗಳಿಗೂ ಸ್ಥಾನಮಾನವಿದೆ. ಅವರಿಗೂ ತಕ್ಕಮಟ್ಟಿಗೆ ಆದ್ಯತೆ, ಅವಕಾಶಗಳನ್ನು ನೀಡುತ್ತಿದ್ದರೂ ಸಹ ಎಲ್ಲೋ ಒಂದುಕಡೆ ಅವರನ್ನು ತಾತ್ಸಾರದಿಂದ, ಗೇಲಿಯ ವಸ್ತುಗಳಾಗಿ ನೋಡುವುದು ಮಾತ್ರ ನಿಂತ ನೀರಾಗಿದೆ. ಇನ್ನು ಸಿನಿಮಾಗಳಲ್ಲಿಯೂ ಅವರಿಗೆ ಸೀರ್ಯಸ್ ಪಾತ್ರಗಳನ್ನು ನೀಡದೇ ತಮಾಷೆ, ತಮಾಷೆಯಾಗಿ ತೋರಿಸುವ ಮೂಲಕ ತೃತೀಯ ಲಿಂಗಿಗಳಿಗೆ ಪರೋಕ್ಷವಾಗಿ ಅವಮಾನಿಸುವ ಪ್ರಯತ್ನವೂ ನಡೆಯಲಾಗುತ್ತದೆ. ಜತೆಗೆ ಅವರಿಗಾಗಿಯೇ ನಾನು ಅವನಲ್ಲ ಅವಳು ರಂತಹ ಸಂದೇಶಾತ್ಮಕ ಸಿನಿಮಾವನ್ನು ಮಾಡಿ ಚಿತ್ರರಂಗ ಗೆದ್ದಿದೆ. ಈ ಮಧ್ಯೆ ಅಂತಹುದೇ ಹೊಸ ಸಿನಿಮಾವನ್ನು ಹೊಸಮುಖಗಳು ಸೇರಿ ಮಾಡಲಾಗುತ್ತಿದ್ದು, ಅದಕ್ಕೆ ಮೂರನೇ ಕ‍ಣ್ಣು ಎಂದು ಹೆಸರಿಡಲಾಗಿದೆ.

ಹೌದು.. ಮೂರನೇ ಕಣ್ಣು ತೃತೀಯ ಲಿಂಗಿಗಳಿಗಾಗಿ ನಿರ್ಮಾಣ ಮಾಡಲಾಗಿರುವ ಸಿನಿಮಾವಾಗಿದ್ದು, ಚಿತ್ರದಲ್ಲಿ ಶ್ರೇಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ಧಾರೆ. ಚಿತ್ರದಲ್ಲಿ ಮಂಗಳಮುಖಿಯರ ಬದುಕು ಮತ್ತು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡಲಾಗಿದೆ. ಸಾಮಾನ್ಯವಾಗಿ ಮಂಗಳಮುಖಿಯರ ಪಾತ್ರವೆಂದರೆ ಯಾವುದಾದರೂ ನಟರು ಆಯಾ ವೇಷಗಳನ್ನು ಹಾಕುವುದು ರೂಢಿ. ಆದರೆ ಮೂರನೇ ಕಣ್ಣು ಚಿತ್ರದಲ್ಲಿ ಓರ್ವ ಮಂಗಳಮುಖಿಯೇ ಮಂಗಳಮುಖಿಯ ಪಾತ್ರಕ್ಕೆ ಬಣ್ಣ ಹಚ್ಚಿರುವುದು ವಿಶೇಷವಾಗಿದೆ. ಸದ್ಯ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಇನ್ನುಳಿಂದತೆ ನಾಯಕನಾಗಿ ಸಚಿನ್ ನಟಿಸಿದ್ದು, ಮಂಜು ಕುಕನೂರು, ಶಿವು ತಿಗರಿ, ಶರಣು ಕಿಲಾಡಿ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಕೆ.ಎನ್. ನಜೀರ್ ಕಥೆ ಬರೆದು ನಿರ್ದೆಶನವನ್ನು ಮಾಡಿದ್ದಾರೆ. ಇನ್ನು ಮೂರನೇ ಕಣ್ಣು ಎ.ಆರ್.ಎಸ್. ಸಿನಿ ಪ್ರೊಡಕ್ಷನ್ ನಲ್ಲಿ ಅಬ್ದುಲ್ ಸಮದ್ ಮತ್ತು ರಿಜ್ವಾನ್ ಬೇಪಾರಿ ನಿರ್ಮಾಣ ಮಾಡಿದ್ದಾರೆ.

CG ARUN

ಶಿಲ್ಪಾ ಶೆಟ್ಟಿ ಫೋಸು ಕೊಡಲು ಹೋಗಿ ಧರಿಸಿದ ಬಟ್ಟೆ ಎಳೆದುಕೊಳ್ಳುವಂತಾಯ್ತು!

Previous article

ಮನೆ ಮಾರಾಟಕ್ಕಿದೆ ಚಿತ್ರದಲ್ಲಿ ಓನರ್ ಆದ್ರೂ ಶೃತಿ ಹರಿಹರನ್!

Next article

You may also like

Comments

Leave a reply

Your email address will not be published. Required fields are marked *